ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್​- 2 ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
“ಹಸಿರು ಬಂಗಾರ’ ಎಂದೇ ಕರೆಯಲಾಗುವ ಬಿದಿರನ್ನು ಬಳಸಿ ಅತ್ಯಂತ ಆಕರ್ಷಕವಾಗಿ ಟರ್ಮಿನಲ್​-1 ಅನ್ನು 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿನ್ಯಾಸ ಮಾಡಲಾಗಿದೆ. ಇದರ ಒಳಾಂಗಣ ಸೌಂದರ್ಯಕ್ಕೆ ಪ್ರಧಾನಿ ಮನಸೋತರು. ಕೃತಕ ಮರಗಿಡಗಳು, ಹಕ್ಕಿಗಳ ಚಿಲಿಪಿಲಿ ಕಲರವ ಮನಸೆಳೆಯುತ್ತಿವೆ.
ಟರ್ಮಿನಲ್​- 2 ವಿನ್ಯಾಸದ ಮಾಹಿತಿ– ಬಿದಿರಿನ ವೆಚ್ಚ ಅಂದಾಜು 200 ಕೋಟಿ ರೂ.– 40 ಮತ್ತು 60 ಮತ್ತು 80 ಮಿಮೀ ವ್ಯಾಸದ ಕ್ಯೂಟಿ 2,40,000 ಆರ್​ಎಂಟಿ ಬಿದಿರಿನ ಕಂಬಗಳು ಮತ್ತು 84,000 ಚದರ ಮೀಟರ್​ ಸೀಲಿಂಗ್​.– ಚೀನಾದಿಂದ ಬಿದಿರು ತರಿಸಲಾಗಿದೆ.– ಬಳಸಿರುವ ಬಿದಿರು ಇಂಜಿನಿಯಾರ್ಡ್​ ಬಿದಿರು– ಒಳಾಂಗಣ ವಿನ್ಯಾಸ 2.55 ಲಕ್ಷ ಚದುರ ಮೀಟರ್​

ಚೀನಾದ ಬಿದಿರು:ಕೆಐಎ ಟರ್ಮಿನಲ್​- 2 ಅನ್ನು ನಿರ್ಮಿಸಲು ಬಳಸಲಾದ ಸೀಲಿಂಗ್​ ಮತ್ತು ಕಾಲಮ್​ಗಳಿಗೆ ಕ್ಲಾಡಿಂಗ್​ನಂತಹ ಉತ್ತಮ ಗುಣಮಟ್ಟದ ಬಿದಿರನ್ನು ಬಳಸಲಾಗಿದೆ. ಬಿದಿರಿನ ನಿರ್ಮಾಣ ಟಕಗಳನ್ನು ಚೀನಾದಿಂದ ಖರೀದಿಸಲಾಗಿದೆ. ರ್ಟಮಿನಲ್​& 2 ನಿರ್ಮಾಣಕ್ಕಾಗಿ ಗುತ್ತಿಗೆದಾರರಾದ ಎಲ್​ ಆ್ಯಂಡ್​ ಟಿ ಸಂಸ್ಥೆಯು ಉಪ ಗುತ್ತಿಗೆದಾರರಾದ ಲಿಂಡ್​ನೆರ್​ ಎಂಬ ಜರ್ಮನ್​ ಕಂಪನಿಯು ಸರಬರಾಜು ಮಾಡಿದೆ. ಬೆಂಗಳೂರಿನ ನವೋದ್ಯಮವಾದ ಬ್ಯಾಂಬೂಸ್​ ಫರ್ನ್​ ಬ್ಯಾಂಬು ಸಹ ವಿನ್ಯಾಸ ರೂಪಿಸುವಲ್ಲಿ ಕೆಲಸ ಮಾಡಿದೆ.

ಅಮೆರಿಕದ ಸಂಸ್ಥೆ ವಿನ್ಯಾಸ:ಈ ಯೋಜನೆಯನ್ನು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಎಸ್​ಒಎಂ ವಿನ್ಯಾಸಗೊಳಿಸಿದೆ. ದುಬೈನ ಬುರ್ಜ್​ ಖಲೀಫಾವನ್ನು ವಿನ್ಯಾಸಗೊಳಿಸಿದ್ದು ಸಹ ಇದೇ ಸಂಸ್ಥೆ ಎಂಬುದು ಗಮನಾರ್ಹ. ದೇಶೀಯ ಬಿದಿರು ಉದ್ಯಮದಲ್ಲಿ ಹಲವು ಸಂಸ್ಥೆಗಳು ಬಿದಿರಿನ ನಿರ್ಮಾಣ, ಪೀಠೋಪಕರಣ ತಯಾರಿಕೆ ಮತ್ತು ಜೀವನಶೈಲಿ ಬಿಡಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.

ಬಿದಿರನ್ನು ರೈತರ ಆದಾಯ ದುಪ್ಪಟ್ಟು ಮಾಡುವ ಉದ್ದೇಶದಿಂದ ಕೃಷಿ ಬೆಳೆಯನ್ನಾಗಿ ರೂಪಿಸಲಾಗಿದೆ. ಟರ್ಮಿನಲ್-2ರ ವಿನ್ಯಾಸ ರೈತರಲ್ಲಿ ಬಿದಿರಿನ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಲಿದೆ ಎಂದೇ ನಿರೀಕ್ಷೆ ಮಾಡಲಾಗುತ್ತಿದೆ. ಮುಂಬೈ ನಂತರ ಟರ್ಮಿನಲ್​ ಅನ್ನು ಸಂಪೂರ್ಣವಾಗಿ ಬಿದಿರಿನಿಂದ ಸಿಂಗರಿಲಾಗಿದೆ. ದೇಶದ ರೈತರಿಗೆ ಸುವರ್ಣ ಯುಗವನ್ನು ಪ್ರಾರಂಭಿಸುವ ಸಾಧ್ಯತೆಯ ವಿಶ್ವಾಸ ಮೂಡಿಸಿದೆ.

ಪ್ರಧಾನಿ ಕಾರ್ಯಕ್ರಮಕ್ಕೆ ಬರುವವರಿಗೆ ಭೋಜನ ವ್ಯವಸ್ಥೆ; ಏನೇನಿದೆ ‘ಮೆನು’ನಲ್ಲಿ?

ಟ್ರೋಲಿಗರನ್ನ ಕೆಣಕುತ್ತಲೇ ಹೊಸ ವಿಷಯ ಘೋಷಣೆ ಮಾಡಿದ ಡ್ರೋನ್​ ಪ್ರತಾಪ್​! ಅಷ್ಟೇ ಅಲ್ಲ, ಆಸಕ್ತರಿಗೆ ಸಂಪರ್ಕಿಸಲೂ ಕರೆ ನೀಡಿದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
