ಬೆಂಗಳೂರು:ಹೈನೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 15,000 ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘ, ಹಾಲು ಒಕ್ಕೂಟಗಳ ಡೇರಿಗಳು ಹಾಗೂ ಮಹಾಮಂಡಳಗಳ ಡೇರಿಗಳು/ಘಟಕಗಳು ಹಾಗೂ ವಿವಿಧ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಈ ಅನುದಾನ ನೆರವಾಗಲಿದೆ.
ಕರೊನಾದಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ ಕುಸಿದಿದ್ದು, ಹಾಲಿನ ಪುಡಿ, ಬೆಣ್ಣೆ, ತುಪ್ಪ ಸೇರಿ ಹಲವು ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಾಗಿದ್ದು, ಹಾಲು ಉತ್ಪಾದಕರಿಗೆ ಬಟವಾಡೆ ಸಮಸ್ಯೆಯೂ ಎದುರಾಗಬಹುದು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅರಿವಿಗೆ ಬಂದಿದೆ. ಹಾಗಾಗಿ ಹಾಲು ಸಹಕಾರಿ ಮಹಾಮಂಡಳಿ ಮತ್ತು ಒಕ್ಕೂಟಗಳೊಂದಿಗೆ ಸಮಾಲೋಚಿಸಿ, ಬ್ಯಾಂಕ್​ಗಳ ಮೂಲಕ ದುಡಿಯುವ ಬಂಡವಾಳವನ್ನು ಸಾಲವನ್ನಾಗಿ ಪಡೆಯಲು ಹಾಗೂ ಪಡೆಯುವ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 2ರಿಂದ 4ರಷ್ಟು ಕೇಂದ್ರ ಸರ್ಕಾರದಿಂದ ದುಡಿಯುವ ಬಂಡವಾಳಕ್ಕಾಗಿ ಒಟ್ಟು 5000 ಕೋಟಿ ರೂ. ಕಾಯ್ದಿರಿಸಿ ಕೇಂದ್ರ ಸರ್ಕಾರ ಯೋಜನೆ ಘೋಷಿಸಿದೆ.
ಇದನ್ನೂ ಓದಿ:ಮನೆಯಲ್ಲಿ ಚಿನ್ನ ಇದೆಯಾ? – ಕೇಂದ್ರ ಸರ್ಕಾರ ಬೇಕು ಅಂದ್ರೆ ಕೊಡ್ತೀರಾ?!
ಕೆಎಂಎಫ್ ಸದ್ಯ 75 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಆಗಸ್ಟ್ ಹೊತ್ತಿಗೆ 85 ಲಕ್ಷ ಲೀಟರ್ ಸಂಗ್ರಹವಾಗುವ ನೀರಿಕ್ಷೆಯಲ್ಲಿದೆ. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾಗಳಲ್ಲೂ ಲಾಕ್​ಡೌನ್ ಮುಂದುವರಿದಿದ್ದು, ಕೆಎಂಎಫ್​ನಿಂದ ಪ್ರತಿ ದಿನ ಮಾರಾಟವಾಗುತ್ತಿದ್ದ ಸುಮಾರು 10 ಲಕ್ಷ ಲೀ. ಹಾಲು ಮಾರಾಟವಾಗದೆ ಉಳಿಯುತ್ತಿದೆ. ಸುಗ್ಗಿ ಕಾಲದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆ ಹಾಗೂ ಅದಕ್ಕೆ ಅನುಗುಣವಾಗಿ ಮಾರುಕಟ್ಟೆ ದೊರಕದ ಕಾರಣ ಹಾಲಿನ ಪುಡಿ (ಎಸ್​ಎಮ್) ಮತ್ತು ಸಗಟು ಬೆಣ್ಣೆಯಾಗಿ ಪರಿವರ್ತಿಸುವ ಸಂದರ್ಭ ಸೃಷ್ಟಿಯಾಗಿದೆ. ಸಂಗ್ರಹಣೆಯಾಗುವ ಹಾಲಿನಲ್ಲಿ ಶೇ.35 ಅನ್ನು ಪರಿವರ್ತಿಸಿ ಹಾಲಿನ ಪುಡಿ ಮಾಡಲಾಗುತ್ತಿದೆ. ಜತೆಗೆ ತುಪ್ಪ, ಬೆಣ್ಣೆಯನ್ನು ಮಾಡಿ ಸಂಗ್ರಹಿಸಲಾಗುತ್ತಿದೆ. ಈ ಅವಧಿಯಲ್ಲಿ ಸುಮಾರು 35 ರಿಂದ 40 ಸಾವಿರ ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದನೆಯಾಗುವ ನೀರಿಕ್ಷೆ ಇದೆ. ಈ ಎಲ್ಲ ಕಾರಣಗಳಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿ, ರೈತರಿಗೆ ಹಾಲಿನ ಬಟವಾಡೆ ಕಷ್ಟವಾಗಬಹುದು. ಆದ್ದರಿಂದ ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳು ದುಡಿಯುವ ಬಂಡವಾಳಕ್ಕಾಗಿ ಬ್ಯಾಂಕ್​ಗಳಿಂದ ಸಾಲ ಪಡೆದರೆ ಸದರಿ ಮೊತ್ತಕ್ಕೆ ಶೇ.2 ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದರಿಂದ ಕೆಎಮ್​ಫ್ ಹಾಗೂ ಒಕ್ಕೂಟಗಳಿಗೆ ಅನುಕೂಲವಾಗಲಿದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿದರೆ ಹೆಚ್ಚುವರಿಯಾಗಿ ಶೇ.2 ಬಡ್ಡಿಯನ್ನು ಅಂದರೆ ಶೇ.4 ಸಾಲದ ಮೇಲಿನ ಬಡ್ಡಿಯನ್ನೂ ಕೇಂದ್ರವೇ ಭರಿಸಲಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರವೂ ಪ್ರಕಟಿಸಿತು ‘ವರ್ಕ್​ ಫ್ರಂ ಹೋಮ್’ ಕರಡು ಮಾರ್ಗಸೂಚಿ
ಡೇರಿ ಉದ್ಯಮದ ಮೂಲ ಸೌಲಭ್ಯ ಗಳಿಗೆ 15,000 ಕೋಟಿ ರೂ. ಹಾಗೂ ಜಾನುವಾರು ಲಸಿಕಾ ಕಾರ್ಯಕ್ರಮಕ್ಕೆ 13,343 ಕೋಟಿ ರೂ. ನೀಡಿದ್ದಕ್ಕಾಗಿ ರಾಜ್ಯದ ಸಮಸ್ತ ಹಾಲು ಉತ್ಪಾದಕರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
| ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ
ದುಡಿಯುವ ಬಂಡವಾಳದ ಸಾಲದ ಮೇಲೆ ಸಹಾಯಧನ ಮತ್ತು ಪೋ›ತ್ಸಾಹಧನ ಯೋಜನೆಯಡಿ ಕಹಾಮವು 14 ಜಿಲ್ಲಾ ಹಾಲು ಒಕ್ಕೂಟಗಳು ಸುಮಾರು 867 ಕೋಟಿ ರೂ. ದುಡಿಯುವ ಬಂಡವಾಳವನ್ನು ಬ್ಯಾಂಕ್​ಗಳಲ್ಲಿ ಸಾಲದ ರೂಪದಲ್ಲಿ ಪಡೆಯಬಹುದು. ಅದಕ್ಕೆ ಕೇಂದ್ರ ಸರ್ಕಾರ ಶೇ.2ರಿಂದ ಶೇ. 4ರ ವರೆಗೆ ಸಹಾಯಧನ ಮತ್ತು ಪೋ›ತ್ಸಾಹ ಧನ ರೂಪದಲ್ಲಿ ಬಡ್ಡಿಯನ್ನು ತಾನೇ ಭರಿಸುತ್ತಿದೆ. ಇದ್ದರಿಂದ ರಾಜ್ಯದ ಹೈನುಗಾರರಿಗೆ ಸಕಾಲದಲ್ಲಿ ಹಾಲಿನ ಬಟವಾಡೆ ಮಾಡಲು ಜಿಲ್ಲಾ ಹಾಲು ಒಕ್ಕೂಟಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಎಲ್ಲ ಹೈನೋದ್ಯಮ ರೈತರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
| ಬಾಲಚಂದ್ರ ಲ. ಜಾರಕಿಹೊಳಿಅಧ್ಯಕ್ಷರು, ಕಹಾಮ
ಕೇಂದ್ರ ಸರ್ಕಾರದ ಪಶು ಸಂಗೋಪನೆ ಇಲಾಖೆ ಕಾರ್ಯದರ್ಶಿ ಅತುಲ್ ಚರ್ತವೇದಿ ಲಾಕ್​ಡೌನ್ ಸಂದರ್ಭದಲ್ಲಿ ದೇಶದ ಎಲ್ಲ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೋ ಸಂವಾದ ನಡೆಸಿ ಹೈನುಗಾರಿಕೆಯನ್ನು ಕಷ್ಟ ಪರಿಸ್ಥಿತಿಯಿಂದ ಹೊರ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರ್ಚಚಿಸಿದರು. ಆ ವೇಳೆ ಹೈನುಗಾರಿಕೆಗೆ ಅವಶ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಆರ್ಥಿಕ ಸಹಾಯ ನೀಡುವಂತೆ ಕೋರಿದ್ದಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡಿದೆ. ಅದರಂತೆ ಯೋಜನೆಗಳನ್ನು ರೂಪಿಸಿ ಅನುದಾನ ಘೊಷಣೆ ಮಾಡಿದ್ದಕ್ಕೆ ಧನ್ಯವಾದ.
| ಬಿ.ಸಿ. ಸತೀಶ್ಕೆ.ಸಿ.ಎಸ್. ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
