ಆಳಂದ:ಭಾರತೀಯ ಸ್ಟೇಟ್​ ಬ್ಯಾಂಕ್​ ಸರಸಂಬಾ ಶಾಖೆಯಲ್ಲಿ 12 ರೂಪಾಯಿ ಪಾವತಿಸಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ್ದ ವ್ಯಕ್ತಿಯೊಬ್ಬನ ಕುಟುಂಬಕ್ಕೆ 2 ಲಕ್ಷ ರೂ. ಚೆಕ್​ ಬಂದಿದ್ದು, ಸಂಕಷ್ಟದಲ್ಲಿದ್ದ ಮನೆಯವರಲ್ಲಿ ಸಂತಸ ಮೂಡಿಸಿದೆ.
ಶಿವಕುಮಾರ ಮಾಳಿ ಎಂಬುವರು 2019ರ ಡಿಸೆಂಬರ್​ನಲ್ಲಿ ಎಸ್​ಬಿಐನಲ್ಲಿ 12 ರೂ. ನೀಡಿ ಪಿಎಂಎಸ್​ಬಿವೈ ಅಡಿ ವಿಮೆ ಮಾಡಿಸಿದ್ದರು. 2020ರ ಫೆ.20ರಂದು ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದರು. ಬಳಿಕ ಯೋಜನೆ ಕಸ್ಟಮರ್​ ಸರ್ವಿಸ್​ ಪಾಯಿಂಟ್​ನವರು ಮುತುವರ್ಜಿ ವಹಿಸಿ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ.ಇದನ್ನೂ ಓದಿರಿರಾಜಕಾರಣಿಗಳ ಕೊರಳಿಗೆ ಡ್ರಗ್ಸ್​ ಉರುಳು: ಬಿಜೆಪಿ ಸಂಸದರ ಭಾವಿ ಅಳಿಯನಿಗೆ ಸಿಸಿಬಿ ನೋಟಿಸ್​!
ಶುಕ್ರವಾರ ಬೆಳಗ್ಗೆ ಪಿಎಂಎಸ್​ಬಿವೈ ವಿಭಾಗೀಯ ವ್ಯವಸ್ಥಾಪಕ ನಾಗರಾಜ ಕುಂಚಾ ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ 2 ಲಕ್ಷ ರೂ. ಚೆಕ್​ ಹಸ್ತಾಂತರಿಸಿದರು. ಪ್ರಮುಖರಾದ ಸುರೇಶ, ಶಾಮಕುಮಾರ ಯಾದವ್​, ಪ್ರಕಾಶ ಗಜಕೋಶ, ಪ್ರಕಾಶ ಎಂ. ಕುಂಬಾರ, ಮುಕ್ಕಣ್ಣಗೌಡ ಪಾಟೀಲ್​, ಶರಣಬಸಪ್ಪ, ಶ್ರೀಶೈಲ ಮುಳೆಗಾಂವ, ಶಿವಲಿಂಗಪ್ಪ ಕುಂಬಾರ, ಶಿವರಾಜ ಸಲಗರೆ, ಶಾಂತಪ್ಪ ಮಳ್ಳಿ ಇದ್ದರು.
‘ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಅವರೇ ರಾಜ್ಯದ ಮುಖ್ಯಮಂತ್ರಿ…’

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
