ಬೆಂಗಳೂರು:ರಾಜ್ಯದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಇನ್ನು ಮುಂದೆ ಬಡವರ ಸಿವಿಲ್ ವ್ಯಾಜ್ಯಗಳು ಆದ್ಯತೆ ಮೇಲೆ ವಿಲೇವಾರಿಯಾಗಲಿವೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುವ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಕಾಯ್ದೆ ಸೋಮವಾರದಿಂದ ಜಾರಿಯಾಗಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆ ಮೂಲತಃ ಕೇಂದ್ರ ಸರ್ಕಾರದ ಕಾಯ್ದೆಯಾಗಿದೆ. ಬಡವರಿಗೆ ನೆರವಿನ ಹಸ್ತ ಚಾಚಲೆಂದು ಕಾನೂನು ತಜ್ಞರು, ಹಿರಿಯ ವಕೀಲರು ಅಧಿಕಾರಿಗಳ ಜತೆಗೆ ರ್ಚಚಿಸಿ ವಿಧೇಯಕ ಸಿದ್ಧಪಡಿಸಲಾಯಿತು. ಬೇಕಾದ ಸ್ಪಷ್ಟನೆ, ಅನುಸರಣೆಯಿಂದಾಗಿ ಅಲ್ಪಾವಧಿಯಲ್ಲಿ ರಾಷ್ಟ್ರಪತಿ ಅಂಕಿತ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಣ್ಣ, ಅತಿಸಣ್ಣ ರೈತರು, ಬಡವರು ಅಥವಾ ಆರ್ಥಿಕ ದುರ್ಬಲರು ಸಿವಿಲ್ ವ್ಯಾಜ್ಯದಲ್ಲಿ ಆರು ತಿಂಗಳಿಗಿಂತ ಹೆಚ್ಚು ನ್ಯಾಯದಾನಕ್ಕಾಗಿ ಕಾಯಬೇಕಾಗಿಲ್ಲ. ವ್ಯಾಜ್ಯದಲ್ಲಿ ದೀರ್ಘಾವಧಿಗೆ ಹೋರಾಡಲು ಬಲವಿಲ್ಲದವರಿಗೆ ಬಲ ತುಂಬುವಲ್ಲಿ ದೇಶಕ್ಕೆ ಕರ್ನಾಟಕ ಮೇಲ್ಪಂಕ್ತಿಯಾಗಿದೆ ಎಂದರು.
ವಿವಿಧ ನ್ಯಾಯಾಲಯಗಳಲ್ಲಿ ಒಂದು ವರ್ಷದಿಂದ ಮೂರು ದಶಕಗಳವರೆಗಿನ ಇಂತಹ ಸಾವಿರಾರು ಪ್ರಕರಣಗಳಿವೆ. ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿಯಿರುವ ಸಿವಿಲ್ ದಾವೆಗಳಲ್ಲಿ ಶೇ.6 ಒಂದರಿಂದ 30 ವರ್ಷಗಳದ್ದಾಗಿವೆ ಎಂದು ಎಚ್.ಕೆ.ಪಾಟೀಲ ಹೇಳಿದರು. ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲವಾದ ವರ್ಗಗಳ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಕಾಯ್ದೆಯಲ್ಲಿ ಸೂಚಿಸಲಾಗಿದೆ.
ಅತಿಸಣ್ಣ, ಸಣ್ಣ ರೈತರು ಯಾರು ಎಂಬುದನ್ನು ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಆದಾಯ ಮೂಲವಿಲ್ಲದ, ವಾರ್ಷಿಕ ಮೂರು ಲಕ್ಷ ರೂ.ಮಿತಿಯೊಳಗೆ ಆದಾಯ ಉಳ್ಳವರನ್ನು ಬಡವರು ಅಥವಾ ಆರ್ಥಿಕ ದುರ್ಬಲರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್.ಕೆ.ಪಾಟೀಲ ಸ್ಪಷ್ಟಪಡಿಸಿದರು.
ಕಾಯ್ದೆ ಪ್ರಯೋಜನ ಪಡೆಯುವುದು ಹೇಗೆ?ಅನೇಕ ವರ್ಷಗಳಿಂದ ಸಿವಿಲ್ ವ್ಯಾಜ್ಯಗಳ ಸುಳಿಗೆ ಸಿಲುಕಿರುವ, ಕಾಯ್ದೆ ಪ್ರಕಾರ ಅರ್ಹ ವ್ಯಕ್ತಿ (ವಾದಿ-ಪ್ರತಿವಾದಿ)ಗಳು ಈ ಕಾಯ್ದೆ ಪ್ರಯೋಜನ ಪಡೆಯುವ ಮಾಗೋಪಾಯ ಸುಲಭ. ಸಣ್ಣ, ಅತಿಸಣ್ಣ ರೈತ, ಬಡವ ಅಥವಾ ಆರ್ಥಿಕವಾಗಿ ದುರ್ಬಲವೆಂದು ದೃಢೀಕರಿಸುವ ಅಧಿಕೃತ ದಾಖಲೆಯೊಂದಿಗೆ ಸಂಬಂಧಿಸಿದ ಕೋರ್ಟ್​ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಂತಹ ಅರ್ಜಿಗಳು ಸಿಂಧು ಅಥವಾ ಅಸಿಂಧು 15 ದಿನಗಳೊಳಗೆ ಸಂಬಂಧಿಸಿದ ನ್ಯಾಯಾಲಯ ತೀರ್ವನಿಸುತ್ತದೆ. ಪುರಸ್ಕೃತ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ದಿನಾಂಕದಿಂದ ವ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡುವ ಆರು ತಿಂಗಳ ಅವಧಿ ಪ್ರಾರಂಭವಾಗಲಿದೆ. ಒಂದು ವೇಳೆ ಸಣ್ಣ, ಅತಿಸಣ್ಣ ರೈತ ಇಲ್ಲವೇ ಬಡವನಲ್ಲವೆಂದು ಅರ್ಜಿ ತಿರಸ್ಕೃತವಾದರೆ ಆ ವ್ಯಕ್ತಿ ವ್ಯಾಜ್ಯವು ಸಾಮಾನ್ಯ ವಿಚಾರಣೆಯಲ್ಲಿ ಇತ್ಯರ್ಥಕ್ಕೆ ಒಳಪಡಲಿದೆ.
ಮುಖ್ಯಾಂಶಗಳು* ಸಿವಿಲ್ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) ಮಸೂದೆಗೆ 2023ರ ಜು.19ರಂದು ವಿಧಾನಮಂಡಲದ ಉಭಯ ಸದನಗಳ ಅನುಮೋದನೆ* ರಾಜ್ಯಪಾಲರ ಒಪ್ಪಿಗೆ ಪಡೆದು ರಾಷ್ಟ್ರಪತಿ ಅಂಕಿತಕ್ಕೆ ರವಾನೆ. 2024ರ ಫೆ.18ರಂದು ರಾಷ್ಟ್ರಪತಿ ಅಸ್ತು* ಅಗತ್ಯ ಮಾರ್ಗಸೂಚಿ ಅನ್ವಯ ಸಿವಿಲ್ ಪ್ರಕ್ರಿಯಾ ಸಂಹಿತೆ 4-3-2024ರಿಂದ ಅನುಷ್ಠಾನ
ವ್ಯವಸ್ಥೆ ಒಗ್ಗಿಕೊಳ್ಳುವ ನಿರೀಕ್ಷೆನ್ಯಾಯದಾನ ವಿಳಂಬದಿಂದ ನ್ಯಾಯ ನಿರಾಕರಿಸಿ ದಂತಾಗಲಿದೆ. ಇದನ್ನು ಮನಗಂಡು ಸಿಎಂ ಗಮನಾರ್ಹ ಸುಧಾರಣೆಗೆ ಒಪ್ಪಿಗೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ವಿತರಣೆಗೆ ಬದ್ಧವಾಗಿರುವ ಸರ್ಕಾರ ವಿಧೇಯಕ ಸಿದ್ಧಪಡಿಸಿ, ಕಾಯ್ದೆ ಜಾರಿಗೆ ಉತ್ಸಾಹ ಸೀಮಿತಗೊಳಿಸುವುದಿಲ್ಲ. ಹೊಸ ಕಾಯ್ದೆ ಅನುಕೂಲತೆಯು ಅರ್ಹ ವಾದಿ-ಪ್ರತಿವಾದಿಗಳಿಗೆ ಲಭಿಸಬೇಕು ಎನ್ನುವುದು ದೃಢ ನಿರ್ಧಾರವಾಗಿದ್ದು, ತ್ವರಿತ ವಿಲೇವಾರಿಗೆ ವ್ಯವಸ್ಥೆ ಒಗ್ಗಿಕೊಳ್ಳಲೇಬೇಕು.
ಅರ್ಹತೆಗೆ ಮಾರ್ಗಸೂಚಿ* ಎರಡು ಹೆಕ್ಟೇರ್ ಒಣ ಬೇಸಾಯದ ಭೂಮಿ ಇರುವವರು* ಒಂದು ಮತ್ತು ನಾಲ್ಕನೇ ಒಂದು ಹೆಕ್ಟೇರ್ ಮಳೆಯಾಶ್ರಿತ ಅರ್ಧ ಭೂಮಿ ಉಳ್ಳವರು* ಒಂದು ನೀರಾವರಿ ಬೆಳೆ ಇಲ್ಲವೇ ತೋಟದ ಬೆಳೆಗಳನ್ನು ಬೆಳೆಯಲು ಅಥವಾ ನೀರಾವರಿ ಮೂಲಕ ರೇಷ್ಮೆ ಬೆಳೆಯಲು ಅರ್ಧ ಹೆಕ್ಟೇರ್ ಭೂಮಿ ಇರುವವರು* ದೀರ್ಘಕಾಲಿಕ ನೀರಾವರಿ ಬೆಳೆಗಳನ್ನು ಬೆಳೆಯುವ ಸೌಲಭ್ಯಗಳಿರುವ ಹೆಕ್ಟೇರ್ ಭೂಮಿ ಹೊಂದಿದವರು
ವಿಶ್ವದ ಅತ್ಯಂತ ನಿಗೂಢ ಅರಣ್ಯಗಳಿವು! ಇಲ್ಲಿಗೆ ಹೋದ್ರೆ ಸಾವಿನಿಂದ ಎಸ್ಕೇಪ್​ ಆಗಲು ಸಾಧ್ಯವಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − six =
Remember me
