ವಿಜಯಪುರ:ಪೊಲೀಸ್ ಇಲಾಖೆಯಲ್ಲಿ ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿದ ಪೊಲೀಸರಿಗೆ ನಗದು ಬಹುಮಾನ ಕೊಡುವುದುಂಟು. ಕೆಲವೊಮ್ಮೆ ಖತರ್ನಾಕ್ ಅಪರಾಧಿ/ಆರೋಪಿಗಳ ಸುಳಿವು ಕೊಟ್ಟವರಿಗೂ ನಗದು ಬಹುಮಾನ ನೀಡುವುದುಂಟು. ಅದೇ ರೀತಿ ಪೊಲೀಸ್ ಇಲಾಖೆಯಿಂದ ಭಾರಿ ಮೊತ್ತದ ನಗದು ಬಹುಮಾನವೊಂದು ಘೋಷಣೆಯಾಗಿದೆ.
ವಿಜಯಪುರ ಜಿಲ್ಲಾ ಪೊಲೀಸರು ಈ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಪರೋಲ್ ಮೇಲೆ ಹೊರಬಂದು ಪರಾರಿಯಾಗಿ ತಲೆಮರೆಸಿಕೊಂಡಿರುವ ಕೈದಿಯೊಬ್ಬನ ಪತ್ತೆಗಾಗಿ ಈ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಮುದ್ನಾಳ ಗ್ರಾಮದ ರಮೇಶ ಯಮನಪ್ಪ ಪರಪ್ಪಗೋಳ ಎಂಬಾತ ಪರೋಲ್ ಮೇಲೆ ಹೊರಬಂದಿದ್ದು, ಕೇಂದ್ರ ಕಾರಾಗೃಹಕ್ಕೆ ಹೋಗಿ ಶರಣಾಗದತೆ ತಲೆಮರೆಸಿಕೊಂಡಿದ್ದಾನೆ. ಈತನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ವಿಜಯಪುರ ಎಸ್​​ಪಿ ಎಚ್‌.ಡಿ.ಆನಂದಕುಮಾರ ಘೋಷಣೆ ಮಾಡಿದ್ದಾರೆ.
ಕೈದಿಯ ಸುಳಿವು ಪತ್ತೆಯಾದಲ್ಲಿ ಎಸ್​ಪಿ (9480804201) ಅವರಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ (08352- 250948)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 17 =
Remember me
