ಧಾರವಾಡ:ಇಲ್ಲೊಬ್ಬ ಕೈದಿಯನ್ನು ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ಸ್ಥಳಾಂತರಿಸಿದರೂ ಆತನ ಕಾಟ ತಾಳಲಾಗದೆ ಪೊಲೀಸರು ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಅಲ್ಲಿಯೂ ತನ್ನ ಉಪಟಳ ಮುಂದುವರಿಸಿದ್ದು, ಗಾಜು ನುಂಗಿದ್ದಾಗಿ ಹೇಳಿ ರಂಪಾಟ ನಡೆಸಿದ್ದಾನೆ.
ತುಮಕೂರು ಮೂಲದ ಚಂದ್ರಶೇಖರ ಎಂಬಾತ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದು, ಈತನನ್ನು ಇತ್ತೀಚೆಗೆ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಗುರುವಾರ ರಾತ್ರಿ ಜೈಲಿನಲ್ಲಿ ಜಗಳವಾಡಿದ್ದರಿಂದ ಈತನನ್ನು ಮಾನಸಿಕ ಚಿಕಿತ್ಸೆಗಾಗಿ ನಗರದ ಡಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಡಿಮ್ಹಾನ್ಸ್​ನಲ್ಲಿ ಕಿಟಕಿಯ ಗಾಜು ನುಂಗಿರುವುದಾಗಿ ಹೇಳಿ, ಆತಂಕ ಸೃಷ್ಟಿಸಿದ್ದ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​​ಗೆ ದಾಖಲಿಸಲಾಗಿದೆ ಎಂದು ಜೈಲು ಅಧೀಕ್ಷಕ ಎಂ.ಎ. ಮರಿಗೌಡ ತಿಳಿಸಿದ್ದಾರೆ.
ವಿಚಾರಣಾಧೀನ ಕೈದಿಯಾಗಿರುವ ಚಂದ್ರಶೇಖರ ತುಮಕೂರು ಜೈಲಿನಲ್ಲೂ ಇದೇ ರೀತಿಯ ರಂಪಾಟ ಮಾಡುತ್ತಿದ್ದ. ಜೈಲು ಸಿಬ್ಬಂದಿಯ ಮೇಲೆ ಹಲ್ಲೆ, ಸಹ ಕೈದಿಗಳೊಂದಿಗೆ ಜಗಳವಾಡುವುದು ಸಾಮಾನ್ಯವಾಗಿತ್ತು. ಹೀಗಾಗಿ ಆತನನ್ನು ಇತ್ತೀಚೆಗೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ಆಭರಣದ ಅಂಗಡಿ ಮಾಲೀಕನ ಪತ್ನಿಯ ಕೊಲೆ; ಮನೆಯಲ್ಲಿ ಒಂಟಿಯಾಗಿದ್ದಾಗ ನಡೆಯಿತು ಹತ್ಯೆ..
ಸ್ನಾನಕ್ಕೆಂದು ತೆರಳಿದಾಗಲೇ ಕುಸಿದ ಮನೆ; ಆ ಸಮಯದಲ್ಲಿ ಏಕಾಂಗಿಯಾಗಿದ್ದ ಮಹಿಳೆ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
