| ರಮೇಶ ದೊಡ್ಡಪುರ ಬೆಂಗಳೂರು
ಕರೊನಾ ಪರೀಕ್ಷೆ ನಡೆಸಲು ಖಾಸಗಿ ಲ್ಯಾಬ್​ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಪರೀಕ್ಷಾ ದರ ಕಡಿಮೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸೂಚನೆ ನೀಡಿ 20 ದಿನ ಕಳೆದರೂ, ಸರ್ಕಾರವೇ ಕಣ್ಮುಚ್ಚಿ ಕುಳಿತು ಜನರ ಸುಲಿಗೆಗೆ ಅವಕಾಶ ಮಾಡಿಕೊಟ್ಟಿದೆ.
ಪ್ರಾರಂಭದಲ್ಲಿ ಸರ್ಕಾರಿ ಲ್ಯಾಬ್​ಗಳಲ್ಲೆ ನಡೆಸಲಾಗುತ್ತಿದ್ದ ಕರೊನಾ ಪರೀಕ್ಷೆಗೆ ಮಾರ್ಚ್ ಅಂತ್ಯದಿಂದಲೇ ಖಾಸಗಿಗೆ ಅವಕಾಶ ಮಾಡಿಕೊಡಲಾಯಿತು. ಖಾಸಗಿ ಲ್ಯಾಬ್​ಗಳು ಯದ್ವಾತದ್ವ ದರ ವಿಧಿಸುತ್ತವೆಂಬ ಕಾರಣಕ್ಕೆ ಗರಿಷ್ಠ 4,500 ರೂ. ನಿಗದಿಪಡಿಸಿ ಆದೇಶಿಸಲಾಯಿತು. ಆ ಸಮಯದಲ್ಲಿ ದೇಶದಲ್ಲಿ 3-4 ಕಂಪನಿಗಳು ಮಾತ್ರ ಪರೀಕ್ಷಾ ಕಿಟ್ ಉತ್ಪಾದಿಸುತ್ತಿದ್ದವು. ಹೆಚ್ಚಿನವು ವಿದೇಶದಿಂದ ಆಮದಾಗುತ್ತಿದ್ದವು. ಆದರೀಗ, ದೇಶದಲ್ಲಿ 25ಕ್ಕೂ ಹೆಚ್ಚು ಸಂಸ್ಥೆಗಳು ಉತ್ಪಾದನೆ ಆರಂಭಿಸಿದ್ದು, ಪರೀಕ್ಷೆ ನಡೆಸಲು ಬೇಕಾಗುವ ರಾಸಾಯನಿ (ರಿ ಏಜೆಂಟ್) ದರ ಗಣನೀಯವಾಗಿ ತಗ್ಗಿದೆ. ಈ ಹಿಂದೆ ಪ್ರತಿ ಮಾದರಿ ಸಂಗ್ರಹಣೆಗೂ ಪಿಪಿಇ ಕಿಟ್ ಬದಲಾಯಿಸಲಾಗುತ್ತಿತ್ತು. ಈಗ ಟೆಸ್ಟಿಂಗ್ ಬೂತ್ ಬಳಸಲಾಗುತ್ತಿದ್ದು, ಪಿಪಿಇ ದರವೂ ಕಡಿತವಾಗಿದೆ. ಈ ಕುರಿತು ಸ್ಪಷ್ಟ ನಿರ್ದೇಶನವನ್ನು ಮೇ 25ಕ್ಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಐಸಿಎಂಆರ್ ತಿಳಿಸಿತ್ತು.
ಸರ್ಕಾರಕ್ಕೊಂದು, ಸಾರ್ವಜನಿಕರಿಗೊಂದು:ರಾಜ್ಯದಲ್ಲಿ 40 ಸರ್ಕಾರಿ ಹಾಗೂ 31 ಖಾಸಗಿ ಲ್ಯಾಬ್​ಗಳಲ್ಲಿ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಾರಿ ಲ್ಯಾಬ್​ಗಳ ಮೇಲಿನ ಒತ್ತಡ ಹೆಚ್ಚಿದಂತೆ ಖಾಸಗಿ ಲ್ಯಾಬ್​ಗಳ ಜತೆಗೆ ಸರ್ಕಾರ ಮಾತುಕತೆ ನಡೆಸಿತ್ತು. ಸರ್ಕಾರಿ ಲ್ಯಾಬ್​ಗಳ ಸಾಮರ್ಥ್ಯವನ್ನು ಮೀರಿದ ಸಂಖ್ಯೆಯ ಮಾದರಿಗಳನ್ನು ಖಾಸಗಿ ಲ್ಯಾಬ್​ಗಳಿಗೆ ಕಳಿಸಿಕೊಡಲಾಗುತ್ತದೆ. ಪ್ರತಿ ಪರೀಕ್ಷೆಗೆ 2,250 ರೂ. ದರ ನಿಗದಿ ಮಾಡಬೇಕು ಎಂದು ಮನವೊಲಿಸಿದೆ. ಆದರೆ ಸಾರ್ವಜನಿಕರೇ ನೇರವಾಗಿ ಖಾಸಗಿ ಲ್ಯಾಬ್​ಗಳಲ್ಲಿ ಪರೀಕ್ಷೆಗೆ ತೆರಳಿದರೆ ಮಾತ್ರ ದುಪ್ಪಟ್ಟು (4,500 ರೂ.) ದರ ಪಡೆಯಲಾಗುತ್ತಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಸಕ್ರಿಯ ಕರೊನಾ ಪ್ರಕರಣಗಳು 2987; 24 ಗಂಟೆಯಲ್ಲಿ 213ಮಂದಿಯಲ್ಲಿ ಸೋಂಕು ದೃಢ
ಐಸಿಎಂಆರ್ ಮಾರ್ಗಸೂಚಿಯನ್ನು ನೆರೆಯ ರಾಜ್ಯಗಳು ಅಕ್ಷರಶಃ ಪಾಲಿಸಿ ಸಾರ್ವಜನಿಕರ ಹೊರೆ ತಗ್ಗಿಸಿವೆ. ಮಹಾರಾಷ್ಟ್ರ ಸರ್ಕಾರ ಗರಿಷ್ಠ 2,800 ರೂ. ದರ ನಿಗದಿ ಮಾಡಿದೆ. ಆಂಧ್ರ ಸರ್ಕಾರ ಗರಿಷ್ಠ 2,900 ರೂ. ನಿಗದಿ ಮಾಡಿದೆ. ಎರಡೂ ಆದೇಶಗಳು ‘ವಿಜಯವಾಣಿ’ಗೆ ಲಭ್ಯ ವಾಗಿವೆ. ಕಚ್ಚಾ ವಸ್ತು, ಸಾಧನ ಸಲಕರಣೆಗಳ ದರ ತಗ್ಗಿದಂತೆಲ್ಲ ದರ ಕಡಿಮೆ ಮಾಡುವ ಬದಲಿಗೆ ಕರ್ನಾಟಕ ಸರ್ಕಾರ 4,500 ರೂ. ಮುಂದುವರಿಸಿ, ಖಾಸಗಿ ಲ್ಯಾಬ್​ಗಳಿಗೆ ಲಾಭ ಮಾಡಿಕೊಡುತ್ತಿದೆ.
ಸ್ಥಳೀಯವಾಗಿ ಉತ್ಪನ್ನಗಳು ಲಭ್ಯವಾಗುತ್ತಿದ್ದು, ಮಾರುಕಟ್ಟೆಯೂ ಸ್ಥಿರವಾಗಿರುವ ಕಾರಣ ಬೆಲೆ ಕಡಿತವಾಗಿದೆ. ಕೂಡಲೇ ಖಾಸಗಿ ಲ್ಯಾಬ್​ಗಳ ಜತೆ ಮಾತುಕತ ನಡೆಸಿ. ದರ ಕಡಿಮೆ ಮಾಡಿ ಎಂದು ಮೇ 25ರ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಇಲ್ಲಿವರೆಗೆ ಅತ್ತ ಕಣ್ಣು ಹಾಯಿಸಿಲ್ಲ. ಆ ಪತ್ರ ಬಂದು 20 ದಿನದಲ್ಲಿ ಸಾವಿರಾರು ಜನರಿಂದ ತಲಾ 4,500 ರೂ.ನಂತೆ ಖಾಸಗಿ ಲ್ಯಾಬ್​ಗಳು ವಸೂಲಿ ಮಾಡಲು ಸರ್ಕಾರವೇ ಅವಕಾಶ ನೀಡಿದೆ.
ಇದನ್ನೂ ಓದಿ:ನಾಯಕನಾಗಿ ಕೊಹ್ಲಿ ಏನು ಸಾಧಿಸಿಲ್ಲ ಎಂದ ಗೌತಮ್ ಗಂಭೀರ್
ರಾಜ್ಯ ಸರ್ಕಾರ 4,500 ರೂ. ದರ ನಿಗದಿ ಮಾಡಿದೆಯಾದರೂ ಕೆಲ ಖಾಸಗಿ ಆಸ್ಪತ್ರೆಗಳು, ಖಾಸಗಿ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿಸಲು ರೋಗಿಗಳಿಂದ 6 ಸಾವಿರ ರೂ.ವರೆಗೆ ವಸೂಲಿ ಮಾಡುತ್ತಿವೆ ಎಂಬ ಆರೋಪವಿದೆ. ಪಿಪಿಇ ಕಿಟ್, ಮಾಸ್ಕ್ ಸೇರಿ ಎಲ್ಲ ಉಪಕರಣಗಳಿಗೆ ಪ್ರತಿ ರೋಗಿ ಯಿಂದಲೂ ಹಣ ಪಡೆದು ಈಗಾಗಲೆ ರಾಜ್ಯದಲ್ಲಿ ಹೆಚ್ಚಾಗಿರುವ ದರಕ್ಕಿಂತಲೂ ಮೇಲ್ಪಟ್ಟು ಶುಲ್ಕ ಪಡೆಯುತ್ತಿವೆ ಎನ್ನಲಾಗಿದೆ.

‘ಅನುದಾನಕ್ಕಾಗಿ ಸಿಎಂಗೆ ಬೆಣ್ಣೆ ಹಚ್ಚಬೇಕು’ ಎಂದ ಸಚಿವ!

ಯುಎಸ್ ಓಪನ್‌ಗೆ ಆಟಗಾರರಿಂದಲೇ ವಿರೋಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − seven =
Remember me
