ಬೆಂಗಳೂರು: ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳಲ್ಲಿ ಖಾಸಗಿ ವ್ಯಕ್ತಿಗಳು ಕೆಲಸ ಮಾಡುತ್ತಿರುವ ಕುರಿತು ಬುಧವಾರ ವಿಜಯವಾಣಿ ಮುಖಪುಟದಲ್ಲಿ ‘ಆರ್‌ಟಿಒಗಳಲ್ಲಿ ಖಾಸಗಿ ದರ್ಬಾರ್!’ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಗೆ ಸಾರಿಗೆ ಇಲಾಖೆ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕ ವಲಯದಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಕೆಲ ಆರ್‌ಟಿಒ ಕಚೇರಿಗಳಲ್ಲಿ ಅನಧಿಕೃತ ವ್ಯಕ್ತಿಗಳು ಕೆಲಸ ಮಾಡುತ್ತಿರುವ ಕುರಿತು ಸಾರ್ವಜನಿಕರೇ ಮೊಬೈಲ್​ಫೋನ್​ನಲ್ಲಿ ವಿಡಿಯೋ ಮಾಡಿ ವಿಜಯವಾಣಿಗೆ ಕಳುಹಿಸಿದ್ದಾರೆ. ಬೆಂಗಳೂರಿನ ಜಯನಗರ ಹಾಗೂ ಮೈಸೂರಿನ ಆರ್‌ಟಿಒದಲ್ಲಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್‌ಗಳು ದಾಖಲಾಗಿವೆ. ದಾವಣಗೆರೆ, ಕೋಲಾರ, ಕೆಜಿಎಫ್​ ಕಚೇರಿಗಳಲ್ಲಿ ಅವ್ಯವಹಾರ ಆರೋಪದಲ್ಲಿ ಕೆಲ ಮಧ್ಯವರ್ತಿಗಳು ಬಂಧಿತರಾಗಿ ಜೈಲು ಸೇರಿದ್ದಾರೆ. ಉಳಿದಂತೆ ಚಿತ್ರದುರ್ಗ, ಬೀದರ್ ಆರ್‌ಟಿಒಗಳಲ್ಲೂ ಖಾಸಗಿ ವ್ಯಕ್ತಿಗಳ ಕಾರ್ಯನಿರ್ವಹಣೆ ಬಗ್ಗೆ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ:ಇದಕ್ಕೆ ನಾನೇ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗಂದಿದ್ದೇಕೆ?
ಚಿತ್ರದುರ್ಗ ಆರ್‌ಟಿಒ ಕಚೇರಿಯಲ್ಲಿ 15ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳಂತೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ವಿಜಯವಾಣಿಗೆ ಕಳುಹಿಸಿದ್ದಾರೆ. ಈ ಕಚೇರಿಯಲ್ಲಿ ನಾಲ್ವರು ಅಧೀಕ್ಷಕರಿದ್ದು (ಸೂಪರಿಂಟೆಂಡೆಂಟ್) ಒಬ್ಬೊಬ್ಬರಿಗೆ ಮೂವರಂತೆ ವಿಷಯ ನಿರ್ವಾಹಕರಂತೆ (ಕೇಸ್ ವರ್ಕರ್) ಕೆಲಸ ಮಾಡಲು ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ. ಕಚೇರಿ ಒಳಗಡೆಯೇ ಕುರ್ಚಿ, ಟೇಬಲ್, ಕ್ಯಾಬಿನ್ ವ್ಯವಸ್ಥೆ ಮಾಡಿಕೊಡಲಾಗಿದೆ. ಖಾಸಗಿ ವ್ಯಕ್ತಿಗಳಾಗಿದ್ದರೂ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯಂತೆ ಇವರುಗಳು ಕೆಲಸ ಮಾಡುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಆರ್​ಟಿಒ ಕಚೇರಿಗಳಲ್ಲಿ ಖಾಸಗಿ ದರ್ಬಾರ್!; ಬೆಂಗಳೂರು, ಮೈಸೂರು, ದಾವಣಗೆರೆಯಲ್ಲಿ ಎಫ್​ಐಆರ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
