ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಸ್ವಯಂ ಪ್ರೇರಿತವಾಗಿ ಬೋಧನಾ ಶುಲ್ಕ ಪಾವತಿಸಲು ಮುಂದೆ ಬರುವವರಿಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ಹೊರಡಿಸುವಂತೆ ಶಿಕ್ಷಣ ಸಚಿವರು ಆಯಕ್ತರಿಗೆ ಸೂಚಿಸಿದ್ದಾರೆ.
ಲಾಕ್​ಡೌನ್​ ಅನಿರ್ಧಿಷ್ಟಾವಧಿಗೆ ಮುಂದುವರೆಯುತ್ತಿರುವುದರಿಂದ ಶಾಲೆಗಳ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ವೇತನ ಪಾವತಿಗೆ ತೊಂದರೆಯಾಗಿದೆ. ಮಾನವೀಯ ನೆಲೆಗಟ್ಟಿನ ಮೇಲೆ ಸಿಬ್ಬಂದಿಗೆ ಅನುಕೂಲ ಮಾಡಿಕೊಡಲು ಶುಲ್ಕ ಪಾವತಿಗೆ ಮುಂದಾಗುವವ ಪಾಲಕರಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಲೆಯ ಆಡಳಿತ ಮಂಡಳಿ ಹಾಗೂ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಮನವಿ ಪರಿಶೀಲನೆ ಮಾಡಿ ತಕ್ಷಣವೇ ನಿರ್ದೇಶನ ನೀಡುವಂತೆ ಸಚಿವರು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.ಆರ್ಥಿಕವಾಗಿ ಬಲವಾಗಿರುವ ಪಾಲಕರು ಸ್ವಯಂ ಪ್ರೇರಿತವಾಗಿ ಶುಲ್ಕ ಪಾವತಿ ಮಾಡಲು ಮುಂದಾದವರೆ ಅವರು ಒಪ್ಪುವ ಮಾಸಿಕ ಕಂತುಗಳಲ್ಲಿ ಪಡೆಯಬೇಕು. ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಪಾಲಕರನ್ನು ಬಲವಂತ ಮಾಡಬಾರದು. ಶುಲ್ಕ ಪಾವತಿ ಮಾಡುವಂತೆ ಒತ್ತಡ ತಂದರೆ ಅಂತ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.
ಕರು ಪಾವತಿ ಮಾಡಿದ ಶುಲ್ಕವನ್ನು ಆಡಳಿತ ಮಂಡಳಿ ತಮ್ಮ ಸಿಬ್ಬಂದಿ ವೇತನ ಪಾವತಿಗೆ ಬಳಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕು ಎನ್ನುವ ನಿದೇಶನವನ್ನು ಸೇರಿಸುವಂತೆ ಸಚಿವರು ತಿಳಿಸಿದ್ದಾರೆ.
ರೈತರ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
