ಬೆಂಗಳೂರು:ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳಿಗೆ ಅನುಗುಣವಾಗಿ ಕುಲಪತಿಗಳ ನೇಮಕ ಮಾಡಲಾಗಿದೆಯೇ ಎಂದು ವಿವರ ಕೇಳಿ ರಾಜ್ಯದ 25 ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಇಲಾಖೆಯು ನೋಟಿಸ್ ಜಾರಿ ಮಾಡಿದೆ.
ಯುಜಿಸಿ ನಿಯಮಗಳ ಪ್ರಕಾರ, ಯುಜಿಸಿ ಕಲಂ 16ರ ಪ್ರಕಾರ ನೇಮಕ ಮಾಡಬೇಕು. ಹೀಗಾಗಿ, ಕುಲಪತಿಗಳ ವಿದ್ಯಾರ್ಹತೆ, ಸೇವಾ ಅನುಭವ ಮತ್ತು ಕುಲಪತಿಗಳಾಗಿ ನೇಮಕ ಮಾಡಲು ಅನುಸರಿಸಿರುವ ನಿಯಮಗಳು, ಯಾವಾಗ ಅವರ ನೇಮಕ ಮಾಡಲಾಗಿದೆ ಎಂಬ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದೆ.
ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಶೈಕ್ಷಣಿಕ ಅರ್ಹತೆ, ಸೇವಾ ಅನುಭವಗಳನ್ನು ಕಡೆಗಣಿಸಿ ಆಡಳಿತ ಮಂಡಳಿಗಳ ಕುಟುಂಬದವರಿಗೆ ಹುದ್ದೆಗಳನ್ನು ನೀಡಲಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ನಿಯಮಗಳಿಗೆ ವಿರುದ್ಧವಾಗಿ ಕುಲಪತಿಗಳನ್ನು ನೇಮಿಸಿದರೆ, ತಕ್ಷಣ ಅವರನ್ನು ಬದಲಿಸಬೇಕು. ನಿಯಮಾನುಸಾರ ಅರ್ಹರಿಗೆ ಹುದ್ದೆ ನೀಡಬೇಕು. ಈ ಕುರಿತು ಪದವಿ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
