ಚಾಮರಾಜನಗರ:ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಯುವತಿಯ ಜತೆಗಿದ್ದ ಖಾಸಗಿ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಕಿಡಿಗೇಡಿಗೆ ಹೆದರಿ ಕುಟುಂಬವೊಂದು ವಿಷ ಸೇವಿಸಿದ ಘಟನೆ ಚಾಮರಾಜನಗರದ ಹನೂರು ತಾಲೂಕಿನ ತಾಳುಬೆಟ್ಟದಲ್ಲಿ ವರದಿಯಾಗಿದೆ. ವಿಷ ಕುಡಿದ ಯುವತಿಯ ಕುಟುಂಬಸ್ಥರು ತಾಳುಬೆಟ್ಟದ ರಸ್ತೆ ಬದಿಯಲ್ಲಿ ರೋಧಿಸುತ್ತಿರುವುದು ಸ್ಥಳೀಯರೊಬ್ಬರ ಗಮನಕ್ಕೆ ಬಂದಿದೆ. ಕೂಡಲೇ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದೇ ಆದರೂ ಯುವತಿಯ ಅಜ್ಜ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬಿಬಿಎಂಪಿ ಸಹಾಯವಾಣಿಗೆ ದೂರುಗಳ ಮಹಾಪೂರ:ಭಾರಿ ಮಳೆಗೆ ಮರ,ಕೊಂಬೆ ಮುರಿದ ಕುರಿತು
ಇನ್ನು ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ. ಯುವತಿ ರಿಷಿಕಾಳ ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ ಯುವಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎನ್ನುವ ಕಾರಣಕ್ಕೆ ಪೊಲೀಸರು ಬಂಧಿಸಿಲ್ಲ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಮಹದೇವ ನಾಯಕ(65) ಮೃತಪಟ್ಟಿದ್ದು, ಇವರ ಪತ್ನಿ ಗೌರಮ್ಮ(53), ಪುತ್ರಿ ಲೀಲಾವತಿ(34) ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಮ್ಮಗಳಾದ ರಿಷಿಕಾ(17) ಮಾತ್ರ ಹನೂರಿನ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಗುಂಡ್ಮಿ ಶಾಲೆಗೆ ನೀರಿನ ಘಟಕ ಹಸ್ತಾಂತರ, ಹಂಗಾರಕಟ್ಟೆ ರೋಟರಿ ಕ್ಲಬ್‌ನಿಂದ ಕೊಡುಗೆ
ತನ್ನ ಖಾಸಗಿ ವಿಡಿಯೋವನ್ನು ಪ್ರೀತಿಸಿದ ಯುವಕ ವೈರಲ್‌ ಮಾಡುತ್ತಾನೆಂಬ ಭಯದಲ್ಲಿ ತಾತ, ಅಜ್ಜಿ, ಅಮ್ಮನೊಂದಿಗೆ ಕ್ರಿಮಿನಾಶಕ‌ ಸೇವಿಸಿದ ರಿಷಿಕಾ, ತಾಳುಬೆಟ್ಟದ ರಸ್ತೆ ಬದಿಯಲ್ಲಿ ರೋಧಿಸುತ್ತಿದ್ದಳು. ತಾಳುಬೆಟ್ಟಕ್ಕೆ ಕಾರಿನಲ್ಲಿ ಬಂದ ಮಹದೇವ ನಾಯಕ, ಪತ್ನಿ ಗೌರಮ್ಮ, ಮಗಳು ಲೀಲಾವತಿ ಮತ್ತು ಮೊಮ್ಮಗಳು ರಿಷಿಕಾ ಕ್ರಿಮಿನಾಶಕ ಸೇವನೆ ಮಾಡಿದ್ದಾರೆ. ಇವರ ಚೀರಾಟವನ್ನು ಗಮನಿಸಿದ ಸ್ಥಳೀಯರಿಗೆ ಮಹದೇವನಾಯಕ ಮೃತಪಟ್ಟಿರುವುದು ತಿಳಿದಿದೆ.
ಯುವತಿಯ ಸಂಬಂಧಿಕ‌ ಚೆಲುವರಾಜು ಹೇಳುವ ಪ್ರಕಾರ, “ಲೋಕೇಶ್ ಎಂಬ ಹುಡುಗ ರಿಷಿಕಾಳನ್ನು ಪ್ರೀತಿಸಿದ್ದ. ಅವಳೊಂದಿಗೆ ಇದ್ದ ಖಾಸಗಿ ಕ್ಷಣಗಳನ್ನು ವಿಡಿಯೋ ‌ಮಾಡಿಕೊಂಡಿದ್ದ. ತಾನು ಕರೆದಾಗ ಬರಲಿಲ್ಲ ಎಂದರೆ ಈ ವಿಡಿಯೋವನ್ನು ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ. ರಿಷಿಕಾ ಕುಟುಂಬ ಲೋಕೇಶ್ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ಪ್ರಕರಣ‌ ದಾಖಲಿಸಲಿಲ್ಲ‌. ಮಾನಕ್ಕೆ ಅಂಜಿದ‌ ರಿಷಿಕಾ‌ ಕುಟುಂಬ ವಿಷ ಸೇವಿಸಿ, ಆತ್ಮಹತ್ಯೆಗೆ ಮುಂದಾಗಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆದಿಪುರುಷದಲ್ಲಿ ರಾವಣನ ಪಾತ್ರವನ್ನು ತೋರಿಸಿದ್ದು ಇಷ್ಟವಾಗಲಿಲ್ಲ: ‘ರಾಮಾಯಣ’ ಸೀತೆ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕ, “ರಾಜ್ಯದಲ್ಲಿ ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲೇ ನಾವೆಲ್ಲರೂ ತಲೆ ತಗ್ಗಿಸುವಂತಹ ಒಂದು ಅಮಾನವೀಯ ಘಟನೆ ನಡೆದಿದೆ. ಪರಿಶಿಷ್ಟ ಪಂಗಡದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಅದೇ ಸಮಾಜದ ಕುಟುಂಬಕ್ಕೆ ರಕ್ಷಣೆ ಕೊಡದೆ ಇಡೀ ಕುಟುಂಬದ ನಾಲ್ಕು ಜನ ಸದಸ್ಯರು, ಬದುಕಿ ಬಾಳಬೇಕಿದ್ದ ಹೆಣ್ಣು ಮಗಳು ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಮಾಡಿ ಇಡೀ ಕುಟುಂಬ ವಿಷ ಸೇವಿಸಿರುವುದು ನಾವೆಲ್ಲರೂ ತಲೆ ತಗ್ಗಿಸುವ ಕೆಲಸ” ಎಂದಿದ್ದಾರೆ.
“ಮುಖ್ಯಮಂತ್ರಿ ಸಂಬಂಧಿ ಎನ್ನುವ ಕಾರಣಕ್ಕೆ ಪೊಲೀಸರು ಅರೆಸ್ಟ್ ಮಾಡದೆ ಬಿಟ್ಟಿರುವ ಆರೋಪಿಯಿಂದ ಅನ್ಯಾಯವಾಗಿದೆ. ಚಂದಗಾಲು ಗ್ರಾಮದ ನಾಲ್ಕು ಜನರು ವಿಷ ಸೇವಿಸುವಂತಾಗಿದೆ. ಕೂಡಲೇ ಆತನನ್ನು ಅರೆಸ್ಟ್ ಮಾಡಬೇಕು. ವಿಷ ಸೇವಿಸಿರುವ ಕುಟುಂಬಕ್ಕೆ ಪರಿಹಾರ, ನ್ಯಾಯ ಒದಗಿಸಿಕೊಡಬೇಕು. ಯಾವ ಕಾರಣಕ್ಕೆ ಎಫ್​ಐಆರ್ ಮಾಡಿಲ್ಲ, ದೂರು ತೆಗೆದುಕೊಳ್ಳದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಾವು ಮೈಸೂರಿಗೆ ಹೋದ ಮೇಲೆ ಪೊಲೀಸ್ ಠಾಣೆಯ ಮುಂದೆ ಶವವನ್ನು ಇಟ್ಟು ಪ್ರತಿಭಟನೆ ಮಾಡುತ್ತೇವೆ. ವಿಷ ಸೇವಿಸಿರುವ ಮೂವರಲ್ಲಿ ಇಬ್ಬರ ಸ್ಥಿತಿ ಸದ್ಯ ಚಿಂತಾಜನಕವಾಗಿದೆ” ಎಂದು ಸಾ.ರಾ. ಮಹೇಶ್ ಹೇಳಿದ್ದಾರೆ.
ಜೀವನದಲ್ಲಿ ಇದೆಲ್ಲಾ… ಕಡೆಗೂ ಛೀಮಾರಿ, ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಉಪನಾಯಕ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 20 =
Remember me
