ಬೆಂಗಳೂರು:ಬಿಜೆಪಿ ಕಚೇರಿ ವಂಚಕರ ಅಡ್ಡೆ ಎಂಬುದಕ್ಕೆ ಮತ್ತೊಂದು ಟಿಕೆಟ್ ವಂಚನೆ ಪ್ರಕರಣ ಹೊರಬಂದಿರುವುದೇ ಸಾಕ್ಷಿ ಎಂದು ಟ್ವೀಟ್​ ಮುಖೇನ ಪಂಚಾಯತ್​ ರಾಜ್​ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಪ್ರಿಯಾಂಕ್​ ಖರ್ಗೆ ಆರೋಪಿಸಿದ್ದಾರೆ.
ಇದನ್ನೂ ಓದಿ:‘ಕೈ’ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಕೋಟ ಶ್ರೀನಿವಾಸ್​ ಪೂಜಾರಿ
“ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಅಕ್ರಮವಾದರೆ, ಪಕ್ಷದಲ್ಲಿ ಟಿಕೆಟ್ ಕಮಿಷನ್ ಅಕ್ರಮ. ಈ ಕಮಿಷನ್ ಸೋಂಕು ಬಿಜೆಪಿಯಿಂದ ಸರ್ಕಾರಕ್ಕೆ ಅಂಟಿದ್ದೇ ಅಥವಾ ಬಿಜೆಪಿ ಸರ್ಕಾರದಿಂದ ಪಕ್ಷಕ್ಕೆ ಅಂಟಿದ್ದೇ?” ಎಂದು ಪ್ರಶ್ನಿಸಿದ್ದಾರೆ.
“ಸಿಎಂ ಹುದ್ದೆಯಿಂದ ಹಿಡಿದು ಪಕ್ಷದ ಟಿಕೆಟ್​ವರೆಗೆ ಎಲ್ಲವನ್ನೂ ಮಾರಾಟಕ್ಕಿಟ್ಟಿರುವ ಬಿಜೆಪಿ ಒಂಥರಾ ಚೋರ್ ಬಜಾರ್ ಇದ್ದಂತೆ. ಕಂಡವರನ್ನು ಕಾಣೆಯಾಗಿದ್ದಾರೆ ಎನ್ನುವ ಕುರುಡು ಬಿಜೆಪಿ ತಮ್ಮ ಪಕ್ಷದ ವಸೂಲಿ ಅಕ್ರಮಗಳ ಬಗ್ಗೆಯೂ ಕುರುಡಾಗಿದೆಯೇ?” ಎಂದರು.
ಇದನ್ನೂ ಓದಿ:ಬಿಜೆಪಿ ಪ್ರಭಾವಿ ನಾಯಕನ ಪುತ್ರನ ಕತ್ತಲ್ಲೂ ಹುಲಿ ಉಗುರು ಹೋಲುವ ಚಿನ್ನದ ಲಾಕೆಟ್, ವೈರಲ್ ಆದ ಫೋಟೋ ಬಗ್ಗೆ ಆ ನಾಯಕ ಪ್ರತಿಕ್ರಿಯೆ ಏನು ಗೊತ್ತಾ?
“ಸೋಲು ಖಾತರಿಯಾಗುತ್ತಿದ್ದಂತೆಯೇ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಹೊಸಬರಿಗೆ ಮಣೆ ಹಾಕುವ ‘ಗುಜರಾತ್ ಮಾದರಿ’ ಎಂದು ಬಣ್ಣ ಬದಲಿಸಿದ್ದು ಬಹುಶಃ ಟಿಕೆಟ್ ಮಾರಾಟಕ್ಕಾಗಿಯೇ ಇರಬಹುದು. ಈ ಬಗ್ಗೆ ‘ಸಂತೋಷ’ದಿಂದಿರುವವರೇ ಸ್ಪಷ್ಟಪಡಿಸಬೇಕು” ಎಂದು ಹೇಳಿದರು.
ಬಿಜೆಪಿ ಕಚೇರಿ ಎಂದರೆ ವಂಚಕರ ಅಡ್ಡೆ ಎಂಬುದಕ್ಕೆ ಮತ್ತೊಂದು ಟಿಕೆಟ್ ವಂಚನೆ ಪ್ರಕರಣ ಹೊರಬಂದಿರುವುದೇ ಸಾಕ್ಷಿ.
ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಅಕ್ರಮವಾದರೆ, ಪಕ್ಷದಲ್ಲಿ ಟಿಕೆಟ್ ಕಮಿಷನ್ ಅಕ್ರಮ, ಈ ಕಮಿಷನ್ ಸೋಂಕು ಬಿಜೆಪಿಯಿಂದ ಸರ್ಕಾರಕ್ಕೆ ಅಂಟಿದ್ದೇ ಅಥವಾ ಬಿಜೆಪಿ ಸರ್ಕಾರದಿಂದ ಪಕ್ಷಕ್ಕೆ ಅಂಟಿದ್ದೇ?
ಸಿಎಂ ಹುದ್ದೆಯಿಂದ ಹಿಡಿದು…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge)October 25, 2023

“ಕಮಿಷನ್ ಎನ್ನುವುದು ಬಿಜೆಪಿಯ ಜೀವಾಳ, ಗುತ್ತಿಗೆದಾರರೇ ಆಗಿರಲಿ, ಟಿಕೆಟ್ ಆಕಾಂಕ್ಷಿಗಳೇ ಆಗಿರಲಿ, ಕಮಿಷನ್ ನೀಡಲೇಬೇಕು. ಏಕೆಂದರೆಜಗನ್ನಾಥ ಭವನ ಎಂಬುದು ಕೇಶವ ಕೃಪಾ ಪೋಷಿತ ಸುಂಕ ವಸೂಲಿ ಮಾಡುವ ಸುಂಕದ ಕಟ್ಟೆ” ಎಂದು ಬರೆದು ಟ್ವೀಟ್​ ಮಾಡಿದ್ದಾರೆ.
‘ಗುಂಟೂರು ಕಾರಂ’: ಮಹೇಶ್ ಬಾಬು ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 7 =
Remember me
