ಬೆಂಗಳೂರು:ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಅವರ ಹೇಳಿಕೆಯನ್ನು ಬೆಂಬಲಿಸಿದ್ದ ಸಚಿವ ಪ್ರಿಯಾಂಕ್​ ಖರ್ಗೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್​ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು ಯಾರಿಗಾದರೂ ಹೊಟ್ಟೆ ನೋವು ಕಾಣಿಸಿಕೊಂಡರೆ ನೀವು ಅವರ ತಲೆ ಕಡಿಯುತ್ತೀರಾ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ. ಸನಾತನ ಧರ್ಮದ ಕುರಿತ ಉದಯನಿಧಿ ಹೇಳಿಕೆ ಈ ಇಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಬಿ.ಎಲ್. ಸಂತೋಷ್​ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ ದಯವಿಲ್ಲದ ಧರ್ಮವಾವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ ಎಂದು ವಚನವನ್ನು ಉಲ್ಲೇಖಿಸಿ ಟಾಂಗ್​ ಕೊಟ್ಟಿದ್ದಾರೆ.
So if there is a infection in somebody’s stomach , you chop off the head …??https://t.co/bOKkNeLcFZ
ಇದನ್ನೂ ಓದಿ:ನುಡಿದಂತೆ ನಡೆಯದ ಸರ್ಕಾರ, ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ: ಜೆಡಿಎಸ್​
ಬಿ.ಎಲ್. ಸಂತೋಷ್​ ಅವರೇ ಸೋಂಕಿಗೆ ಚಿಕಿತ್ಸೆ ಬೇಕು ಎಂಬ ನಿಮ್ಮ ವಾದವನ್ನು ಒಪ್ಪುತ್ತೇನೆ. ಸಾವಿರಾರು ವರ್ಷಗಳಿಂದ ಅನೇಕ ಸೋಂಕುಗಳು ಇವೆ ಮತ್ತು ಇಂದಿಗೂ ಪ್ರಚಲಿತದಲ್ಲಿವೆ. ಆ ಸೋಂಕು ಮನುಷ್ಯನ ನಡುವೆ ತಾರತಮ್ಯವನ್ನು ಸೃಷ್ಟಿಸಿ ಕೆಲವರಿಗೆ ಘನತೆಯನ್ನು ನೀಡಲು ನಿರಾಕರಿಸಿದೆ. ನಾನು ನಿಮ್ಮಷ್ಟು ಬುದ್ದಿವಂತನಲ್ಲ ಇಂತಹ ವಿಚಾರದಲ್ಲಿ ನೀವೇ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಕುಟುಕಿದ್ದಾರೆ.
ಇಂತಹ ಸಮಾಜವನ್ನು ನಿರ್ಮಿಸಿದವರು ಯಾರು. ಒಬ್ಬರು ಮತ್ತೊಬ್ಬರಿಗಿಂತ ನೀತಿವಂತರು ಎಂದು ಹೇಳಿದವರು ಯಾರು. ಜಾತಿ ಆಧಾರದಲ್ಲಿ ಸಮಾಜವನ್ನು ವಿಭಜಿಸಿದವರು ಯಾರು. ಒಂದಷ್ಟು ಜನರನ್ನು ಏಕೆ ಅಸ್ಪೃಶ್ಯರು, ಈಗಲೂ ಅವರಿಗೆ ಕೆಲ ದೇವಾಲಯಗಳಲ್ಲಿ ಏಕೆ ಪ್ರವೇಶವಿಲ್ಲ. ಅಸಮಾನತೆ ಹಾಗೂ ಜಾತಿ ಆಧಾರಿತ ಸಾಮಾಜಿಕ ರಚನೆಯನ್ನು ತಂದವರು ಯಾರು ಎಂದು ಪ್ರಶ್ನಿಸಿದ್ದಾರೆ.
“ದಯವಿಲ್ಲದ ಧರ್ಮವಾವುದಯ್ಯಾ ?⁰ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ⁰ದಯವೇ ಧರ್ಮದ ಮೂಲವಯ್ಯಾ⁰ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.”So glad that@blsanthoshavare agrees that there is an infection that needs treatment.There have been many infections for over thousands of years & is still prevalent…https://t.co/tMxJK6kOoc
ನಾವು ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಘನತೆಯ ಬದುಕನ್ನು ನೀಡುವ ಮೂಲಕ ಸೋಂಕನ್ನು ಗುಣಪಡಿಸಬೇಕಿದೆ. ಇದಕ್ಕೆ ಔಷಧಿ ನಮ್ಮ ದೇಶದ ಸಂವಿಧಾನದಲ್ಲಿದೆ. ಆದರೆ, ನೀವು ಸಂವಿಧಾನವನ್ನು ವಿರೋಧಿಸುತ್ತಿದ್ದೀರಿ. ನೀವು ಸಹ ಕರ್ನಾಟಕದವರೇ ಆಗಿದ್ದು, ಬಸವಣ್ಣನವರ ಮಾನವತೆಯ ಸಾರವನ್ನು ಎಲ್ಲೆಡೆ ಹರಡಿ. ಅದರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ.
ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯಾ ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯಾ ಎಂದು ಬಸವಣ್ಣನವರ ವಚನವನ್ನು ಉಲ್ಲೇಖಿಸಿ ಬಿ.ಎಲ್. ಸಂತೋಷ್​ ಹೇಳಿಕೆಗೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
