ಬೆಂಗಳೂರು:ಉದ್ಯೋಗ, ಸಾಲ, ಡೇಟಿಂಗ್​, ಮದುವೆ, ಗಿಫ್ಟ್… ಹೀಗೆ ಹಲವು ಆಮಿಷವೊಡ್ಡಿ ಜನರಿಗೆ ಮೋಸಮಾಡುವ ಜಾಲ ಸಕ್ರಿಯವಾಗಿದೆ. ಇಂತಹದ್ದೇ ವಂಚನೆಗೆ ಸಿಲುಕಿದ ಯುವತಿ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರತಿಷ್ಠಿತ ಮೇಕಪ್​ ಕಂಪನಿಯ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ವ್ಯಕ್ತಿ ಬಹುಮಾನದ ಆಮಿಷವೊಡ್ಡಿ 77 ಸಾವಿರ ರೂ. ವಂಚಿಸಿದ್ದಾನೆ. ಹಣ ಕಳೆದುಕೊಂಡ ಹೊಸಪಾಳ್ಯದ ವಿನುಶ್ರೀ ಕೊಟ್ಟ ದೂರಿನ ಮೇರೆಗೆ ರಾಕೇಶ್​ ನಾಯ್ಕ ಎಂಬಾತನ ವಿರುದ್ಧ ಆಗ್ನೇಯ ವಿಭಾಗ ಸಿಇಎನ್​ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿರಿರಾತ್ರೋರಾತ್ರಿ 70ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ, ಅಪಾರ ಪ್ರಮಾಣದ ಮಾರಕಾಸ್ತ್ರ ವಶ
ಜು.21ರಂದು ವಿನುಶ್ರೀಗೆ ಕರೆ ಮಾಡಿದ ರಾಕೇಶ್​ ಎಂಬಾತ ಪ್ರತಿಷ್ಠಿತ ಮೇಕಪ್​ ಕಂಪನಿಯ ನೌಕರನೆಂದು ಪರಿಚಯಿಸಿಕೊಂಡಿದ್ದ. ಕಂಪನಿ ಗ್ರಾಹಕರಿಗೆ ಪ್ರತಿವರ್ಷ ಬಹುಮಾನ ನೀಡುತ್ತದೆ. ಈ ವರ್ಷ ನೀವು ವಿಜೇತರಾಗಿದ್ದೀರಿ ಎಂದು ಯುವತಿಗೆ ಹೇಳಿದ್ದ. ಬಹುಮಾನವನ್ನು ಮನೆಗೆ ಪಾರ್ಸಲ್​ ಕಳುಹಿಸುವುದಾಗಿ ಹೇಳಿ ವಿಳಾಸ ಪಡೆದುಕೊಂಡಿದ್ದ.
ಆ.1ರಂದು ವಿನುಶ್ರೀ ಅವರ ಮನೆಗೆ ಕೋರಿಯರ್​ ಬಂದಿತ್ತು. ಕೋರಿಯರ್​ನಲ್ಲಿದ್ದ ಪತ್ರದಲ್ಲಿ ವಿಳಾಸ ಪರಿಶೀಲನೆ ಪತ್ರವಾಗಿದೆ ಎಂದು ಬರೆದಿತ್ತು. ಇದಾದ ಬಳಿಕ ಮತ್ತೆ ಕರೆ ಮಾಡಿದ್ದ ರಾಕೇಶ್​, ಕಂಪನಿ ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು ಎಂದಿದ್ದ. ಆತನ ಮಾತನ್ನು ನಂಬಿದ ಮಹಿಳೆ 77 ಸಾವಿರ ರೂ. ಬ್ಯಾಂಕ್​ ಖಾತೆಗೆ ಸಂದಾಯ ಮಾಡಿದ್ದರು. ಹಣ ಜಮೆ ಮಾಡಿದ ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ಮೋಸ ಆಗಿರುವುದು ಗೊತ್ತಾಗಿ ಯುವತಿ ದೂರು ಕೊಟ್ಟಿದ್ದಾರೆ.
ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ; ಪ್ರಮೋದ್​ ಮುತಾಲಿಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
