ಬೆಂಗಳೂರು:ಸಾಲಮನ್ನಾಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಕೈಬಿಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಶಿವಾನಂದ ಪಾಟೀಲ್ ಪ್ರಶ್ನೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉತ್ತರ ನೀಡುವ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸಾಲಮನ್ನಾ ವಿಚಾರದಲ್ಲಿ ಸಾಕಷ್ಟು ತೊಂದರೆಗಳಿವೆ. ಕೆಲವು ನಿರ್ಬಂಧಗಳಿಂದಾಗಿ ಹಲವು ರೈತರಿಗೆ ಸಾಲಮನ್ನಾ ಆಗುತ್ತಿಲ್ಲ. ನಮ್ಮ ಕಾಲದಲ್ಲಿ ಯಾವುದೇ ನಿರ್ಬಂಧವಿರಲಿಲ್ಲ. ಲೋಪ ದೋಷಗಳನ್ನು, ನಿರ್ಬಂಧಗಳನ್ನು ತೆಗೆದು ಸಂಕಷ್ಟದಲ್ಲಿರೋ ರೈತರಿಗೆ ನೆರವಾಗಿ ಎಂದು ಒತ್ತಾಯಿಸಿದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ನಿಮ್ಮ ವ್ಯಾಪ್ತಿಯಲ್ಲಿ ಆಗುವಂತಹದ್ದಲ್ಲ. ಸಿಎಂ ಜತೆ ರ್ಚಚಿಸಿ ಸಾಲಮನ್ನಾ ಲೋಪಗಳನ್ನು ಸರಿಪಡಿಸಿ ಎಂದು ಸಚಿವರಿಗೆ ಸಲಹೆ ಮಾಡಿದರು.
ಶಿವಾನಂದ ಪಾಟೀಲ್ ಮಾತನಾಡಿ, ಸಮರ್ಪಕ ದಾಖಲೆ ಇಲ್ಲವೆಂಬ ಕಾರಣಕ್ಕೆ ಸಾಲಮನ್ನಾ ಆಗಿಲ್ಲ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲವೆಂಬ ತಾಂತ್ರಿಕ ಕಾರಣಕ್ಕೆ ಸಾಲಮನ್ನಾ ಆಗುತ್ತಿಲ್ಲ. ಇಂತಹ ಸಮಸ್ಯೆಗಳು, ಗೊಂದಲಗಳನ್ನು ನಿವಾರಿಸಿ ಎಂದರು. ಇದಕ್ಕೆ ಉತ್ತರಿಸಿದ ಎಸ್.ಟಿ.ಸೋಮಶೇಖರ್, ಸರ್ಕಾರ 15.70 ಲಕ್ಷ ರೈತರಿಗೆ 7434.21 ಕೋಟಿ ರೂ. ಬಿಡುಗಡೆ ಮಾಡಿದೆ.
ಉಳಿದ 2,30,990 ರೈತರ ಪೈಕಿ 70,497 ಜನ ದಾಖಲೆ ಸಲ್ಲಿಸಿದ್ದಾರೆ. ಇದಕ್ಕೂ ಅನುದಾನ ಬಿಡುಗಡೆ ಮಾಡಲಾಗಿದೆ. 1,60,493 ರೈತರ ಅರ್ಹತೆಯನ್ನು ಗುರುತಿಸುವ ಕೆಲಸ ಬಾಕಿ ಇದೆ. ರೇಷನ್ ಕಾರ್ಡ್ ಸಲ್ಲಿಕೆಯಾಗದ, ಆಧಾರ್ ಸಲ್ಲಿಸದ 69,749 ಹಾಗೂ ಆರ್​ಟಿಸಿ ಇಲ್ಲದ 36,438, ತಾಲ್ಲೂಕು ಮಟ್ಟದ ಸಮಿತಿಯಲ್ಲಿ ತಿರಸ್ಕರಿಸಿದ 10,188 ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ಸಾಲದ ಅಸಲು ಮತ್ತು ಸುಸ್ತಿ ಬಡ್ಡಿ ಪಾವತಿಸಲು ವಿಫಲವಾಗಿರುವ 12,205, ತಂತ್ರಾಂಶದಲ್ಲಿ ದಾಖಲೆ ಅಳವಡಿಸಿದೆ ಇರುವ 12,439, ತೆರಿಗೆ ಪಾವತಿ ಮತ್ತು ಪಿಂಚಣಿದಾರರಿಗೆ ಇರುವ 19,474 ಅರ್ಜಿಗಳು ಪರಿಶೀಲನೆಯಲ್ಲಿವೆ ಎಂದು ವಿವರಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಾಲಮನ್ನಾ ಮಾಡಿ ಷರತ್ತು ಹಾಕಿದ ಕಾರಣ ಕೆಲವು ಸಮಸ್ಯೆಗಳಾಗಿವೆ. ಇಂತಹ ಪ್ರಕರಣಗಳ ಬಗ್ಗೆ ವಿಶೇಷ ಗಮನ ಹರಿಸುತ್ತೇವೆ. ಮಾ.31ರ ಒಳಗಾಗಿ ಎಲ್ಲ ಗೊಂದಲಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
