ಅವಿನಾಶ ಮೂಡಂಬಿಕಾನಬೆಂಗಳೂರು: ಕಾನೂನು ಬಾಹಿರ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಎಸ್​ಡಿಪಿಐ, ಪಿಎಫ್​ಐ ಸಂಘಟನೆ ನಿಷೇಧಿಸುವ ಮಾತು ಕೇಳಿಬರುತ್ತಿದೆಯಾದರೂ ಹೀಗೆ ಮಾಡಲು ಹಲವು ಪ್ರಕ್ರಿಯೆ ದಾಟಲೇಬೇಕಿದೆ!
ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರವು ನಿಷೇಧಕ್ಕೆ ಒಳಪಡುವ ಸಂಘಟನೆಗೆ ಸೂಚನೆ ನೀಡುತ್ತದೆ. ಸೆಕ್ಷನ್ 4ರ ಅಡಿ ಈ ಬಗ್ಗೆ ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾಯಮೂರ್ತಿ ಒಳಗೊಂಡ ಟ್ರಿಬ್ಯುನಲ್ ರಚಿಸಲಾಗುತ್ತದೆ. ಸಂಘಟನೆಗೆ ಸೂಚನೆ ನೀಡಿದ 30 ದಿನದ ಒಳಗೆ ಟ್ರಿಬ್ಯುನಲ್​ಗೆ ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ಇದನ್ನು ಪರಿಗಣಿಸಿ ಟ್ರಿಬ್ಯುನಲ್ ಸಂಬಂಧಿಸಿದ ಸಂಘಟನೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುತ್ತದೆ. ಸಂಘಟನೆ ಸದಸ್ಯರು, ಮುಖಂಡರಿಗೆ ನೋಟಿಸ್ ಕೊಡಲಾಗಿದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕಾಗುತ್ತದೆ.
ಇದನ್ನೂ ಓದಿ:ವಾರದಲ್ಲಿ ಎರಡು ಸಾವಿರ ಹೆಚ್ಚುವರಿ ವೈದ್ಯರು ಕೊವಿಡ್ ಚಿಕಿತ್ಸೆಗೆ ಲಭ್ಯ; ಸಚಿವ ಸುಧಾಕರ್ ಮಾಹಿತಿ
ಬಹುತೇಕ ಮನವಿ ಪುರಸ್ಕೃತವಾಗಲ್ಲ
ಪ್ರತಿ ವರ್ಷ ದೇಶದ ಆಯಾ ರಾಜ್ಯಗಳು ಕೆಲ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತವೆ. ಆದರೆ, ಸೂಕ್ತ ಪುರಾವೆಗಳಿಲ್ಲದ ಹಿನ್ನೆಲೆಯಲ್ಲಿ ಬಹಳಷ್ಟು ಮನವಿ ಪುರಸ್ಕೃವಾಗುವುದಿಲ್ಲ.
ಇದಾದ 6 ತಿಂಗಳೊಳಗೆ ಟ್ರಿಬ್ಯುನಲ್ ನಿರ್ಧಿಷ್ಟ ಸಂಘಟನೆ ನಿಷೇಧಿಸುವ ಬಗ್ಗೆ ಆದೇಶಿಸುತ್ತದೆ. ಟ್ರಿಬ್ಯುನಲ್ ಒಂದು ಬಾರಿ ಸಂಘಟನೆಗೆ ನೋಟಿಸ್ ಜಾರಿ ಮಾಡಿದರೆ ಸೆಕ್ಷನ್ 6ರ ಪ್ರಕಾರ ಅದು 5 ವರ್ಷ ಕಾರ್ಯಾಚರಣೆಯಲ್ಲಿರುತ್ತದೆ. ಒಂದು ಬಾರಿ ಸಂಘಟನೆ ನಿಷೇಧಕ್ಕೊಳಪಟ್ಟರೆ ಅದಕ್ಕೆ ಸಂಬಂಧಿಸಿದ ಹಣ, ಆಸ್ತಿ-ಪಾಸ್ತಿಗಳನ್ನು ಬಳಕೆ ಮಾಡುವುದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಸೂಚಿಸುತ್ತದೆ. ಸಂಘಟನೆ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಂಘಟನೆ ಮುಖಂಡರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶಗಳಿವೆ ಎಂದು ಸಿಬಿಐ ಮತ್ತು ಎನ್​ಐಎಯ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಮನೆಯ ನಾಲ್ಕು ಕಡೆ ನಾಲ್ಕು ಶವಗಳು; ನಿಧಿಗಾಗಿ ಹಿತ್ತಲಿನಲ್ಲಿ ನಡೆಸಿದ್ದರಾ ಕ್ಷುದ್ರಪೂಜೆ?
ವರದಿಯಲ್ಲಿ ಏನೇನಿರಬೇಕು?:ದೇಶದ ಸುಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆಂಬ ಬಗ್ಗೆ ರಾಜ್ಯ ಸರ್ಕಾರ ದಾಖಲೆ ಸಮೇತ ವರದಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ. ಈ ಸಂಘಟನೆ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿದೆ? ಇದರ ಕಾರ್ಯಕರ್ತರು ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ? ಎಷ್ಟು ಮಂದಿ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಸೇರಿ ಗಂಭೀರ ಅಪರಾಧ ಪ್ರಕರಣ ದಾಖಲಾಗಿವೆ? ಸಂಘಟನೆಯು ಎಲ್ಲಿ ದಾಂಧಲೆ ನಡೆಸಿದೆ? ಎಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದೆ? ಎಂಬ ದಾಖಲೆ ಇರಬೇಕು.
ಈ ಬೈಕ್​ಗೆ ಪೆಟ್ರೋಲ್ ಬೇಡ, ನೀರಿದ್ದರೆ ಸಾಕಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
