ಮಂಡ್ಯ:ಹಿಂದು ಧರ್ಮಕ್ಕೆ ಸಂಬಂಧಿಸಿದ ಕೃತಿಗಳ ಬಗ್ಗೆ ಸದಾ ವಿವಾದಾತ್ಮಕವಾಗಿ ಮಾತನಾಡುವ ಪ್ರೊ. ಭಗವಾನ್​ ಈಗ ಮತ್ತೊಮ್ಮೆ ಶ್ರೀರಾಮನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಪ್ರೊ.ಭಗವಾನ್, ಎನ್.ಎಂ.ತಿಮ್ಮೇಗೌಡ ರಚನೆಯ ‘ಅವರ್ ಇಂಡಿಯಾ’, ‘ಆಧ್ಯಾತ್ಮ’, ‘ಲಾರ್ಡ್ ಕೃಷ್ಣ ದಿ ಬ್ಲಾಕ್’ ಹೋಲ್ ಸೇರಿದಂತೆ ಒಟ್ಟು 7 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣರಾಗಿದ್ದಾರೆ.
ಭಾಷಣದ ಸಂದರ್ಭ ಪ್ರೊ.ಭಗವಾನ್ ‘ದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವರು ಮಹಾತ್ಮ ಗಾಂಧಿ. ಆದರೆ ವಾಲ್ಮೀಕಿ ರಾಮಾಯಣ, ಉತ್ತರಕಾಂಡ ಓದಿದರೆ ಈ ಮಾತಿಗೆ ಯಾವುದೇ‌ ಆಧಾರವಿಲ್ಲ. ರಾಮ 14 ವರ್ಷ‌ ಕಾಡಿನಲ್ಲಿ ವನವಾಸವಿದ್ದ. ವನವಾಸ ಮುಗಿಸಿ ವಾಪಸ್ಸು ಬಂದು‌ 11 ವರ್ಷ ರಾಜ್ಯಭಾರ ಮಾಡಿದ. ಈತ ಆಡಳಿತ ನಡೆಸದೆ ಕೆಲ ಪುರೋಹಿತರ ಜೊತೆ ಆ ಕಥೆ ಈ ಕಥೆ ಹೇಳಿಕೊಂಡು‌ ರಾಮ ಕಾಲ ಕಳೆಯುತ್ತಿದ್ದ. ಮಧ್ಯಾಹ್ನದ ಬಳಿಕ ರಾಮ ಸೀತೆಗೆ ಹೆಂಡವನ್ನ ಕುಡಿಸಿ,‌ ಆತನು ಕುಡಿತಿದ್ದ’ ಎಂದಿದ್ದಾರೆ.
‘ರಾಮ ಸೀತೆಗೆ ಹೆಂಡ ಕುಡಿಸಿರುವುದಕ್ಕೆ ದಾಖಲೆಗಳಿವೆ. ಇವೆಲ್ಲ ನನ್ನ ಮಾತುಗಳಲ್ಲ, ವಾಲ್ಮೀಕಿ ರಾಮಾಯಾಣ, ಉತ್ತರಖಾಂಡದಲ್ಲಿ ಇರುವ ಮಾತುಗಳು. ರಾಮನ 11 ವರ್ಷದ ಆಡಳಿತದಲ್ಲಿ ಮೂರು ಘಟನೆಗಳು ನಡೆದವು. ಯಾರೋ ಸೀತೆ ಮೇಲೆ ಅಪವಾದ ಹಾಕಿದ ಎಂದು ಗರ್ಭಿಣಿ ಸೀತೆಯನ್ನ ಕಾಡಿಗೆ ರಾಮ ಓಡಿಸಿಬಿಟ್ಟ. ಕೊಲೆ ಮಾಡಿದರೂ ಸಮರ್ಥಿಸಿಕೊಳ್ಳಲು ಅವಕಾಶ ಕೊಡುತ್ತಾರೆ. ಆದರೆ ಸೀತೆಗೆ ಸಮರ್ಥಿಸಿಕೊಳ್ಳಲು ಅವಕಾಶವನ್ನು‌ ಕೊಡಲಿಲ್ಲ.
ಕಾಡಿನಲ್ಲಿ ವಾಲ್ಮಿಕಿ ಸಿಗದಿದ್ದರೇ ಗರ್ಭಿಣಿ ಸೀತೆ ಕಥೆ ಏನಾಗುತ್ತಿತ್ತು? 16-17 ವರ್ಷ ಸೀತೆ ಏನಾದ್ಲು ಅನ್ನೋದನ್ನೆ ರಾಮ ಕೇಳಲಿಲ್ಲ. ಊಟ ಕೊಟ್ಟು ದೂರ್ವಾಸ ಮುನಿಯನ್ನ ಸಭೆ ವೇಳೆ ಬಿಟ್ಟಿದ್ದಕ್ಕೆ ಲಕ್ಷಣನನ್ನೆ ರಾಮ ಗಡಿಪಾರು ಮಾಡಿದ. ಕೊನೆಗೆ ಲಕ್ಷಣ, ನದಿ ದಡದ ಮೇಲೆ ಅತ್ಕೊಂಡು ಸತ್ತು ಹೋದ. ತಪಸ್ಸು ಮಾಡುತ್ತಿದ್ದ ಶೂದ್ರ ಶಂಭುಕನನ್ನ ರಾಮ ಕತ್ತಿಯಲ್ಲೆ ಕಡಿದು ಹಾಕಿದ. ಇವೆಲ್ಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ನೀವು ಹೇಗೆ ರಾಮನನ್ನ ಆದರ್ಶ ವ್ಯಕ್ತಿ ಅಂತ ಕರೆಯುತ್ತೀರೀ?’ ಎಂದು ಪ್ರಶ್ನಿಸಿದ್ದಾರೆ.
ಇನ್ನು ಶ್ರಿ ರಾಮನ ಹೆಸರನ್ನು ಮಕ್ಕಳ:ಇಗೆ ಇಡುವ ಬಗ್ಗೆಯೂ ಮಾತನಾಡಿರುವ ಭಗವಾನ್​, ‘ನಿಮಗೆ ರಾಮನ ಬಗ್ಗೆ ಗೊತ್ತಿಲ್ಲದೆ ಮಕ್ಕಳಿಗೆಲ್ಲ ರಾಮ ಅಂತ ಹೆಸರಿಟ್ಟಿದ್ದೀರಿ. ಜಯರಾಮ, ಅಭಿರಾಮ ಅಂತೆಲ್ಲ ಹೆಸರಿಟ್ಟಿದ್ದೀರಾ. ಹೆಂಗಸರು ಅಯ್ಯೋ ರಾಮರಾಮ ಅಂತೆಲ್ಲ ಬೈಯ್ಯುತ್ತಾರೆ. ರಾಮ‌ 20 ವರ್ಷ‌ಗಳ ಕಾಲ ಹೆಂಡತಿಯನ್ನು ಬಿಟ್ಟಿದ್ದ. ಎಂತಹ ಪರಿಸ್ಥಿತಿಯಲ್ಲಿದ್ದಾರೆ ನೋಡಿ ಜನ’ ಎಂದು ಪ್ರೊ.ಭಗವಾನ್ ಮತ್ತೊಮ್ಮೆ ರಾಮನ ವಿರುದ್ದ ಮತ್ತೆ ಕಿಡಿಕಾರಿದ್ದಾರೆ.
Sign in to your account
Please enter an answer in digits:7 − three =
Remember me
