ಬೆಂಗಳೂರು:ಕರೊನಾ ಸಾಂಕ್ರಾಮಿಕ‌ ಹೆಸರು ಕೇಳಿದರೆ ಬೆಚ್ಚಿಬೀಳುವವರೇ ಹೆಚ್ಚು, ಆದರೆ ಇಲ್ಲೊಬ್ಬರು ಕರೊನಾವನ್ನು ಗರ್ಲ್ ಫ್ರೆಂಡ್‌ಗೆ ಹೋಲಿಸಿ ಗಮನಸೆಳೆದಿದ್ದಾರೆ.‌
ಕಾಂಗ್ರೆಸ್‌ನ ಚಿಂತಕರ ಚಾವಡಿಯಲ್ಲಿ ಕೆಲಸ ಮಾಡುವ ಪ್ರೊಫೆಸರ್ ಕೆ.ಇ. ರಾಧಾಕೃಷ್ಣ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ವಿಷಯವನ್ನು ಅವರು ವಿಶೇಷ ರೀತಿಯಲ್ಲಿ ತಮ್ಮ ಸ್ನೇಹಿತರ ಬಳಿ ಹಂಚಿಕೊಂಡಿದ್ದಾರೆ.
ಫೇಸ್​​ಬುಕ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪ್ರೊ.ರಾಧಾಕೃಷ್ಣ, ಕಳೆದ ಒಂದು ವರ್ಷದಿಂದಲೂ ನನ್ನನ್ನು ಸ್ಪರ್ಶಿಸಲು ಮತ್ತು ಕನಿಷ್ಠ ನೋಡಲೂ ನಿರಾಕರಿಸಿದ್ದ ನನ್ನ ಗರ್ಲ್ ಫ್ರೆಂಡ್ ಕೊನೆಗೂ ನನ್ನನ್ನು ಸ್ಪರ್ಶಿಸಿದ್ದಾಳೆ. ಆ ಬ್ಯೂಟಿಫುಲ್ ಲೇಡಿ ಮಿಸ್ ಕೋವಿಡ್ ಕರೋನಾ. ಆಕೆಯಿಂದ ದೂರ ಆಗಲು ಈಗ ಒಳ್ಳೆಯ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದೇನೆ ಎಂದು ಅವರು ಸ್ಟೇಟಸ್ ಹಾಕಿಕೊಂಡು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​
ರಾಧಾಕೃಷ್ಣ ಅವರು ಈ ಹಿಂದೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಸಹ ತೊಡಗಿಸಿಕೊಂಡವರು. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಇದನ್ನೂ ಓದಿ:ಏ. 15ರೊಳಗೆ ಕರೊನಾದಿಂದಾಗಿ ದೇಶದಲ್ಲಿ 50 ಸಾವಿರ ಜನರ ಸಾವು!; ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಅಂತೂ 27 ವರ್ಷಗಳ ಬಳಿಕ ಶಿಕ್ಷೆ ಪ್ರಕಟ; ಪೊಲೀಸ್ ಇನ್​ಸ್ಪೆಕ್ಟರ್-ತಹಶೀಲ್ದಾರರೇ ಅಪರಾಧಿಗಳು..

ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 5 =
Remember me
