ಮಂಡ್ಯ:ಎಲ್ಲೆಲ್ಲೂ ರೀಲ್ಸ್​​ನದ್ದೇ ಕಾರುಬಾರು! ವಿವಿಧ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು ಸದ್ಯದ ಟ್ರೆಂಡ್! ಹೀಗಾಗಿ ಅನೇಕರು ಇವತ್ತು ರೀಲ್ಸ್ ಮಾಡಿ ಎಂಜಾಯ್ ಮಾಡ್ತಿದ್ದಾರೆ ಅಂದ್ರೆ ತಪ್ಪಲ್ಲ! ಎಲ್ಲಕ್ಕಿಂತ ಹೆಚ್ಚಾಗಿ ಮೊದಲು ಎಲ್ಲಿ, ಯಾವ ಸಂದರ್ಭದಲ್ಲಿ ರೀಲ್ಸ್ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಇಲ್ಲವಾದ್ರೆ ಎಡವಟ್ಟು ತಪ್ಪಿದ್ದಲ್ಲ. ಇದೀಗ ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರೊಬ್ಬರಯ ರೀಲ್ಸ್​ನಲ್ಲಿ ಸೊಂಟ ಬಳುಕಿಸಿ ಟೀಕೆ ಎದುರಿಸುವಂತಾಗಿದೆ.
ಈ ಹಿಂದೆಯೂ ಅನೇಕ ಶಿಕ್ಷಕರು ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕರ್ತವ್ಯದ ಸಮಯದಲ್ಲಿ, ತರಗತಿಯೊಳಗೆ ವಿದ್ಯಾರ್ಥಿಗಳೊಂದಿಗೆ ಸೇರಿ ರೀಲ್ಸ್ ಮಾಡುವುದು ಸರಿಯಲ್ಲ. ಈ ಸೂಕ್ಷ್ಮತೆಯನ್ನು ಅರಿತುಕೊಳ್ಳದ ಮಂಡ್ಯದ ಮಿಮ್ಸ್ ಕಾಲೇಜಿನ ಪ್ರಾಧ್ಯಾಪಕ ಮತ್ತು ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲೇ ಸೊಂಟ ಬಳುಕಿಸಿದ್ದಾರೆ.
ವಿದ್ಯಾರ್ಥಿನಿಯರ ಜತೆಗೆ ಮಂಡ್ಯ ಮಿಮ್ಸ್ ಕಾಲೇಜಿನ ಫಾರ್ಮಸಿ ಇನ್​ಚಾರ್ಜ್ ಕೃಷ್ಣೇಗೌಡ ಎಂಬುವವರು​ ರೀಲ್ಸ್ ಮಾಡಿದ್ದಾರೆ. ಹುಟ್ಟುಹಬ್ಬದ ಕೇಕ್ ಕತ್ತರಿಸಿ ವಿದ್ಯಾರ್ಥಿನಿಯರ ಸೊಂಟ ಬಳುಕಿಸಿದ್ದಕ್ಕಾಗಿ ಇದೀಗ ಎಲ್ಲರೂ ಟೀಕಿಸುವಂತಾಗಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲಸದ ಸಮಯದಲ್ಲಿ ವಿದ್ಯಾರ್ಥಿನಿಯರೊಂದಿಗೆ ರೀಲ್ಸ್​ ಮಾಡಿರುವುದು ಗೊತ್ತಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
