ಬೆಂಗಳೂರು:ವಿಶ್ವದ ಅರ್ಥವ್ಯವಸ್ಥೆಯನ್ನೇ ಅಲ್ಲೋಲ-ಕಲ್ಲೋಲಗೊಳಿ ಸಿರುವ ಕರೊನಾ ವೈರಸ್ ರಾಜ್ಯದ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ವೇತನ ಹಿಂಬಾಕಿಗೂ ಕಲ್ಲು ಹಾಕಿದೆ. ರಾಜ್ಯದ ಸುಮಾರು 15 ಸಾವಿರ ಪ್ರಾಧ್ಯಾಪಕರ ಬರೋಬ್ಬರಿ 39 ತಿಂಗಳ ವೇತನ ಹಿಂಬಾಕಿ ಸದ್ಯಕ್ಕಂತೂ ಕೈ ಸೇರದಂತಾಗಿದೆ.
7ನೇ ವೇತನ ಶ್ರೇಣಿಯಲ್ಲಿ 2016ರ ಜ.1ರಿಂದ 2019ರ ಮಾ.31ರ ಅವಧಿಯ 39 ತಿಂಗಳ ವೇತನ ಹಿಂಬಾಕಿ ಕೊಡುವ ಕುರಿತು 2019ರ ಬಜೆಟ್​ನಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೊಷಿಸಿದ್ದರು. ಈ ಸಂಬಂಧ 2019 ಮಾ.16ರಲ್ಲಿ ಸರ್ಕಾರಿ ಆದೇಶವೂ ಪ್ರಕಟವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ವೇತನ ಬಾಕಿ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಕರೊನಾ ಕಾಮೋಡ ಕವಿದಂತಾಗಿದೆ.
1,200 ಕೋಟಿ ರೂ. ಬಿಡುಗಡೆ:ಯುಜಿಸಿ ವೇತನ ಹಿಂಬಾಕಿ ನೀಡಲೆಂದೇ ಸರ್ಕಾರ 1,200 ಕೋಟಿ ರೂ. ಅನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು. ಈ ಹಣವನ್ನು ಪ್ರಾಧ್ಯಾಪಕರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ಎಚ್​ಆರ್​ಎಂಎಸ್ ಮತ್ತು ಕೆ-2ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾದವು. ಹಾಗಾಗಿ ಸಕಾಲದಲ್ಲಿ ಈ ವೇತನ ಪ್ರಾಧ್ಯಾಪಕರ ಜೇಬು ಸೇರಲಿಲ್ಲ. ಇನ್ನೇನು ಸಮಸ್ಯೆ ಪರಿಹಾರ ಕಂಡಿದೆ ಎನ್ನುವಷ್ಟರಲ್ಲೇ ಕರೊನಾ ಮಹಾಮಾರಿ ವಕ್ಕರಿಸಿ, ದೇಶವೇ ಲಾಕ್​ಡೌನ್ ಆಗಿದೆ.
ಯಾರಿಗೆ ಹಿಂಬಾಕಿ ವೇತನ?:ಸರ್ಕಾರಿ ಪದವಿ ಕಾಲೇಜು, ಅನುದಾನಿತ ಪ್ರಥಮ ದರ್ಜೆ ಕಾಲೇಜು, ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಕಾನೂನು ಕಾಲೇಜು ಮತ್ತು ಬಿಎಡ್ ಕಾಲೇಜು ಅಧ್ಯಾಪಕರು, ನಿವೃತ್ತರು ಹಾಗೂ ಮೃತರ ಅರ್ಹ ಸಂಬಂಧಿಗಳಿಗೆ 7ನೇ ವೇತನ ಆಯೋಗದ ವೇತನ ಹಿಂಬಾಕಿ ಅನ್ವಯಿಸುತ್ತದೆ. ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಸುಮಾರು 415 ಕೋಟಿ ರೂ., ಅನುದಾನಿತ ಪದವಿ ಕಾಲೇಜು ಪ್ರಾಧ್ಯಾಪಕರಿಗೆ 400, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಗೆ ಸುಮಾರು 272 ಕೋಟಿ ರೂ. ವಿಂಗಡಿಸಲಾಗಿದೆ. ಅದನ್ನು 2020ರ ಮಾ.31ರ ಒಳಗೆ ಕಾಲೇಜು ಶಿಕ್ಷಣ ಇಲಾಖೆ ಬಳಸಿಕೊಂಡು ಬಳಕೆ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಿತ್ತು. ಆಗ ಮಾತ್ರ ಕೇಂದ್ರ ಸರ್ಕಾರದ ಪಾಲು ಶೇ.50 ಹಣ ರಾಜ್ಯ ಸರ್ಕಾರಕ್ಕೆ ಪಾವತಿಯಾಗುತ್ತದೆ. ಲಾಕ್​ಡೌನ್​ನಿಂದ ಈ ಎಲ್ಲ ಪ್ರಕ್ರಿಯೆಗೆ ತೆರೆ ಬಿತ್ತು.
ಆತಂಕ ಬೇಕಿಲ್ಲ
ವೇತನ ಹಿಂಬಾಕಿ ಕೈಸೇರದಿದ್ದರೂ ಪ್ರಾಧ್ಯಾಪಕರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ಈ ಯುಜಿಸಿ ಹಿಂಬಾಕಿಯನ್ನು ಕರೊನಾ ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳ ಹಿನ್ನೆಲೆ ಬಳಸಲು ಸಾಧ್ಯವಾಗದ ಕಾರಣ ಬಾಕಿ ಮೊತ್ತವನ್ನು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ವೈಯಕ್ತಿಕ ಖಾತೆಗೆ ಜಮೆ ಮಾಡಿದೆ. ಅದನ್ನು ಮೇ 31ರ ಒಳಗಾಗಿ ಬಳಸಲು ಅವಕಾಶ ಮಾಡಿಕೊಟ್ಟಿದೆ.
| ವಿಲಾಸ ಮೇಲಗಿರಿಬೆಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 3 =
Remember me
