ಬೆಂಗಳೂರು:ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿದೆ. ಜತೆಗೆ ಕಾಲೇಜು ಪ್ರವೇಶದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚುವರಿ ಅಂಕ ನೀಡಲು ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸಲು ಉದ್ಯೋಗದಲ್ಲಿ ಬಡ್ತಿ ನೀಡಬೇಕೆಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಸಲಹೆ ನೀಡಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅದ್ದೂರಿ, ವರ್ಣರಂಜಿತ ಸಮಾರಂಭದಲ್ಲಿ ‘ಖೇಲೋ ಇಂಡಿಯಾ ವಿಶ್ವ ವಿದ್ಯಾಲಯಗಳ ಕ್ರೀಡಾಕೂಟ-2021’ ಎರಡನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾ ಸಾಧಕರಿಗೆ ಪ್ರೋತ್ಸಾಹಧನ ನೀಡಿದರೆ ಕ್ರೀಡಾ ಚಟುವಟಿಕೆಗಳು ವಿಫುಲವಾಗಿ ಬೆಳೆಯಲಿವೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೇರಣೆ ನೀಡಲು ಸಾಧ್ಯವಾಗಲಿದೆ. ದೈಹಿಕ ಸದೃಢತೆ ಬೌದ್ಧಿಕ ಜಾಗೃತಿಗೆ ನೆರವಾಗಲಿದ್ದು, ಕ್ರೀಡೆ ಜೀವನದ ಭಾಗವಾಗಬೇಕು. ಯುವಶಕ್ತಿ, ಸಾಮರ್ಥ್ಯದಿಂದ ವಿಶ್ವದಲ್ಲಿ ಭಾರತದ ಮಾನ್ಯತೆ, ಘನತೆ ಹೆಚ್ಚಿದೆ ಎಂದು ಹೇಳಿದರು. ದೇಶದ ಶೇ.60 ಜನರು ಹಳ್ಳಿಗಳಲ್ಲಿ ವಾಸವಿರುವ ಕಾರಣ ಗ್ರಾಮೀಣ, ದೇಸಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ಱ ನೀಡಬೇಕಾಗಿದೆ. ಈ ಬಾರಿ ಹಸಿರು ಕ್ರೀಡಾಕೂಟವೆಂದು ಪ್ರಕಟಿಸಿ, ಪರಿಸರಸ್ನೇಹಿ ಉಪಕ್ರಮ ಕೈಗೊಂಡಿರುವುದು ಸ್ತುತ್ಯಾರ್ಹವೆಂದು ಎಂ.ವೆಂಕಯ್ಯನಾಯ್ಡು ಪ್ರಶಂಸಿಸಿದರು.
ಮೋದಿ ಆಶಯಕ್ಕೆ ಒತ್ತು:ಜೀತೋ ಇಂಡಿಯಾ, ಖೇಲೋ ಇಂಡಿಯಾ ಎಂಬ ಪರಿಕಲ್ಪನೆಯನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿ, ಅಗತ್ಯ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿವಿ ಕ್ರೀಡಾಕೂಟದ ಆತಿಥ್ಯವನ್ನು ರಾಜ್ಯಕ್ಕೆ ನೀಡಲಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದ ಆತಿಥ್ಯವಹಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಪ್ರಕಟಿಸಿದರು.
ಕೇಂದ್ರ ಕ್ರೀಡಾ ಸಚಿವ ಅನುರಾಗ ಸಿಂಗ್ ಠಾಕೂರ್ ಮಾತನಾಡಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಗೆಲುವು ಮತ್ತೊಂದು ಸಾಧನೆಗೆ ಪ್ರೇರಕವಾದರೆ, ಸೋಲು ಉತ್ತಮ ಪಾಠ ಕಲಿಸುತ್ತದೆ ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಮೋದಿಯವರ ದೂರದೃಷ್ಟಿ, ಯುವಶಕ್ತಿ ಮೇಲಿನ ಭರವಸೆ, ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹವು ಅನನ್ಯವಾಗಿದೆ. ವಿವಿಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡವರಿಗೆ ಭವಿಷ್ಯದಲ್ಲಿ ದೇಶಕ್ಕಾಗಿ ಆಡುವ ಅವಕಾಶ ಸಿಗಬಹುದು ಎಂದು ಅನುರಾಗ ಸಿಂಗ್ ಠಾಕೂರ್ ಹುರಿದುಂಬಿಸಿದರು.
ವಿಶ್ವವಿದ್ಯಾಲಯಗಳ ಕ್ಯಾಂಪಸ್​ನಲ್ಲಿ ಕ್ರೀಡಾ ವಾತಾವರಣ ಸೃಷ್ಟಿಸಬೇಕು. ಕ್ರೀಡಾ ಪ್ರತಿಭೆಗಳ ಶೋಧದ ಜತೆಗೆ ಸೂಕ್ತ ತರಬೇತಿ, ಅಂಗವಿಕಲ ಕ್ರೀಡಾಪಟುಗಳಿಗೂ ಹೆಚ್ಚಿನ ಮನ್ನಣೆ ಅಗತ್ಯ.
|ಥಾವರ್ ಚಂದ್ ಗೆಹಲೋತ್ರಾಜ್ಯಪಾಲ
ನುರಿತ, ಹೆಸರಾಂತ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ಭೇಟಿ ಕೊಟ್ಟು ಯುವ ಪ್ರತಿಭೆಗಳು, ಹೊಸ ಮುಖಗಳಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು.
| ಅನುರಾಗ್ ಠಾಕೂರ್ಕೇಂದ್ರ ಕ್ರೀಡಾ, ಯುವ ವ್ಯವಹಾರಗಳ ಸಚಿವ
ಖೇಲೋ ಇಂಡಿಯಾ ವಿವಿಗಳ ಕ್ರೀಡಾಕೂಟ 10 ದಿನ ನಡೆಯಲಿದ್ದು, ಮೇ 3ರಂದು ಮುಕ್ತಾಯವಾಗಲಿದೆ. ಯೋಗ, ಕರಾಟೆ, ಮಲ್ಲಕಂಬ ಸಹಿತ 20 ವಿಭಾಗಗಳಲ್ಲಿ ಆಟೋಟಗಳಿವೆ. ಈ ಪಂದ್ಯಾವಳಿಯಲ್ಲಿ ದೇಶದ 189ಕ್ಕೂ ಹೆಚ್ಚು ವಿವಿಗಳ 3,900 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕಂಠೀರವ ಕ್ರೀಡಾಂಗಣ, ಜೈನ್ ಗ್ಲೋಬಲ್ ವಿವಿ ಕ್ಯಾಂಪಸ್ ಸೇರಿ ಆರು ಸ್ಥಳಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಬೆಂಗಳೂರು:ಕ್ರೀಡೆಯೇ ದೇಶದ ಶಕ್ತಿ, ಜಾಗತಿಕ ಮನ್ನಣೆಗೆ ಕಾರಣವಾದ ಕ್ಷೇತ್ರ. ಆಟೋಟಗಳಿಂದ ಕಲಿತ ಪಾಠ, ಗಳಿಸಿದ ಸಾಮರ್ಥ್ಯ ಜೀವನದಲ್ಲಿ ಮುನ್ನಡೆಗೆ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಖೇಲೋ ಇಂಡಿಯಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮೋದಿಯವರ ವಿಡಿಯೋ ಸಂದೇಶ ಪ್ರಸಾರ ಮಾಡಲಾಯಿತು. ಡಿಜಿಟಲ್ ಇಂಡಿಯಾದ ನಗರ, ನವೋದ್ಯಮಗಳ ತವರೂರು ಬೆಂಗಳೂರಿನಲ್ಲಿ ಕ್ರೀಡಾ ಸಂಗಮವಾಗಿದೆ. ಬೆಂಗಳೂರು ಅಂದರೇನೆ ಯುವ ಸಮೂಹದ ಸೂಜಿಗಲ್ಲು, ಉತ್ಸಾಹದ ಸೆಲೆ ಎಂದು ಬಣ್ಣಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
