ಬೆಂಗಳೂರು:ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಸಬ್​ ಇನ್​ಸ್ಪೆಕ್ಟರ್​ಗಳಿಗೆ (ಎಎಸ್​ಐ) ಮುಂಬಡ್ತಿ ಭಾಗ್ಯ ಒಲಿದು ಬಂದಿದೆ. ವಲಯ ಹಾಗೂ ಕಮಿಷನರೇಟ್​ ವ್ಯಾಪ್ತಿಯಲ್ಲಿ ಖಾಲಿ ಉಳಿದಿರುವ ಎಸ್​ಐ ಹುದ್ದೆಗಳಿಗೆ ಎಎಸ್​ಐಗಳಿಗೆ ಮುಂಬಡ್ತಿ ಕೊಡುವಂತೆ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವಿಣ್​ ಸೂದ್​ ಆದೇಶಿಸಿದ್ದಾರೆ.
ಪಿಎಸ್​ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಹೊಸ ನೇಮಕಾತಿ ವಿಳಂಬವಾಗಲಿದೆ. ಆದ್ದರಿಂದ ಹುದ್ದೆಯಾಧಾರಿತ ಪದ್ಧತಿ ಅಳವಡಿಸಿಕೊಂಡು ವಲಯ ಹಾಗೂ ಕಮಿಷನರೇಟ್​ ಟಕಗಳಲ್ಲಿರುವ ಎಲ್ಲ ಮುಂಬಡ್ತಿ ಹುದ್ದೆಗಳಿಗೆ ಬಡ್ತಿ ಕೊಡುವಂತೆ ಸೂಚಿಸಲಾಗಿದೆ. ಹೀಗಾಗಿ ಎಎಸ್​ಐ ಹುದ್ದೆಯಲ್ಲೇ ನಿವೃತ್ತಿಯಾಗಬೇಕಿದ್ದವರೀಗ ಎಸ್​ಐ ಹುದ್ದೆಗೇರಿ ನಿವೃತ್ತಿಯಾಗಲಿದ್ದಾರೆ.
ಹನ್ನೆರಡು ಪೊಲೀಸರು ಅಮಾನತುಕಲಬುರಗಿ: ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ (ಪಿಎಸ್​ಐ) ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇರೆಗೆ 12 ಪೊಲೀಸರನ್ನು ಅಮಾನತು ಮಾಡಲಾಗಿದೆ. ಬಂಧಿತರಾಗಿರುವ ರಾಯಚೂರು ಜಿಲ್ಲೆ ಲಿಂಗಸೂಗೂರು ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಜಿಲ್ಲಾ ಪೊಲೀಸ್​ ಫಿಂಗರ್​ ಪ್ರಿಂಟ್​ ವಿಭಾಗದ ಸಿಪಿಐ ಆನಂದ ಮೇತ್ರೆ ಸಸ್ಪೆಂಡ್​ ಆದವರಲ್ಲಿ ಪ್ರಮುಖರಾಗಿದ್ದಾರೆ.
ಲಭ್ಯವಿಲ್ಲದಿದ್ದಲ್ಲಿ?ಯಾವುದೇ ವಲಯ ಹಾಗೂ ಕಮಿಷನರೇಟ್​ ಟಕಗಳಲ್ಲಿ ಜೇಷ್ಠತೆ ಅನುಸಾರ ಮುಂಬಡ್ತಿಗೆ ಅರ್ಹರಿರುವ ಎಎಸ್​ಐಗಳು ಲಭ್ಯವಿದ್ದು, ಮುಂಬಡ್ತಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ ತೃಪ್ತಿಕರ ಸೇವೆಯನ್ನು ಪರಿಗಣಿಸಿ, ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅನ್ವಯ ಸ್ವತಂತ್ರ ಪ್ರಭಾರ ಸಬ್​ ಇನ್​ಸ್ಪೆಕ್ಟರ್​ ಹುದ್ದೆಯಲ್ಲಿರಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವತಂತ್ರ ಪ್ರಭಾರ ಹುದ್ದೆಯೂ ತಾತ್ಕಾಲಿಕವಾಗಿರಲಿದೆ. ಯಾವುದೇ ಜೇಷ್ಠತೆ ಹಾಗೂ ಪೂರ್ವಾನ್ವಯವಾಗುವ ಮುಂಬಡ್ತಿ ಹಕ್ಕೊತ್ತಾಯ ಮಾಡುವಂತಿಲ್ಲ. ನೇರ ನೇಮಕಾತಿ ಅನ್ವಯ ಆಯ್ಕೆಯಾದ ಅಭ್ಯರ್ಥಿಗಳು ವರದಿ ಮಾಡಿಕೊಂಡ ಕೂಡಲೇ ಹುದ್ದೆ ಬಿಟ್ಟುಕೊಡಬೇಕು ಎಂದು ಲಿಖಿತ ಒಪ್ಪಿಗೆ ಪತ್ರ ಬರೆಸಿಕೊಳ್ಳುವಂತೆ ಪ್ರವಿಣ್​ ಸೂದ್​ ಆದೇಶಿಸಿದ್ದಾರೆ. ಹುದ್ದೆಯಾಧಾರಿತ ಮುಂಬಡ್ತಿ ಹಾಗೂ ಸ್ವತಂತ್ರ ಪ್ರಭಾರ ಹುದ್ದೆಯಲ್ಲಿರುವ ಪ್ರಕ್ರಿಯೆಯನ್ನೂ ಕೂಡಲೇ ಕೈಗೊಳ್ಳಬೇಕು. ಇದರ ಮಾಹಿತಿಯನ್ನು ಪ್ರಧಾನ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂದು ಡಿಜಿಪಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
