| ಶ್ರೀಕಾಂತ್​ ಶೇಷಾದ್ರಿಬೆಂಗಳೂರುಸರ್ಕಾರಿ ಹುದ್ದೆಯಲ್ಲಿ ಬಡ್ತಿ ನೀಡುವಾಗ ಎಸ್​ಸಿ&ಎಸ್​ಟಿ ವರ್ಗದವರಿಗೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ಇಡೀ ಸೇವೆ ಅಥವಾ ಹುದ್ದೆಯ ವರ್ಗದ ಆಧಾರದಲ್ಲಿ ನಿರ್ಧಾರ ಮಾಡುವಂತಿಲ್ಲ, ಶ್ರೇಣಿ ಅಥವಾ ಹುದ್ದೆ ವರ್ಗದಲ್ಲಿ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ನಿರ್ಧಾರ ಮಾಡಬೇಕೆಂಬ ಸುಪ್ರಿಂಕೋರ್ಟ್​ನ ಇತ್ತೀಚಿನ ಸ್ಪಷ್ಟನೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸರ್ಕಾರಿ ನೌಕರರಿಗೆ ಬಡ್ತಿಯಲ್ಲೂ ಮೀಸಲಾತಿ ನಿಗದಿ ಪಡಿಸುವುದಕ್ಕೆ ಅದನ್ನು ಸಮಥಿರ್ಸುವಂತಹ ಅಂಕಿ& ಅಂಶ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದ್ದರೂ ಮೀಸಲು ಮುಂಬಡ್ತಿ ನೀಡಲು ಒತ್ತಡ ಹೆಚ್ಚಿರುವುದು ಸರ್ಕಾರದ ವಿವಿಧ ಇಲಾಖೆಯ ಆಂತರಿಕ ೋಭೆಗೂ ಕಾರಣ ವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿದ ಮೀಸಲು ಬಡ್ತಿ ರಸುವ ಕಾನೂನು ಮತ್ತು ಅದನ್ನು ಸುಪ್ರೀಂ ಎತ್ತಿ ಹಿಡಿದ ಪರಿಣಾಮ ಮೀಸಲು ಮುಂಬಡ್ತಿ ವಿಪರೀತ ಹೆಚ್ಚಿದ್ದು, ಶೇ.18ರ ಮಿತಿ ದಾಟಿದೆ. ಎಸ್ಸಿ&ಎಸ್ಟಿ ಹೊರತಾದವರಿಗೆ ಬಡ್ತಿ ಮರೀಚಿಕೆ ಎಂಬ ವಾತಾವರಣ ಸೃಷ್ಟಿಯಾಗಿದೆ.
ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್​ಗಳ ಕೇಡರ್​ ಪರಿಗಣಿಸುವುದಾದರೆ, ವರ್ಕಿಂಗ್ ಸ್ಟ್ರೆಂಥ್​ನಲ್ಲಿ ಮೀಸಲು ಪ್ರಮಾಣ ಶೇ.18ಕ್ಕಿಂತಲೂ ಬಹಳ ಹೆಚ್ಚಿದೆ. ಇದು ಉಳಿದ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿದೆ. 2022 ಜನವರಿ 28ರಂದು ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ ಮೀಸಲು ಮುಂಬಡ್ತಿ ಕುರಿತಂತೆ ಸ್ಪಷ್ಟೀಕರಣ ನೀಡಿ, ಮೀಸಲು ಮುಂಬಡ್ತಿ ನೀಡುವಾಗ ಪ್ರತಿ ಕೇಡರ್​ ಪರಿಗಣಿಸಬೇಕೇ ಹೊರತು ಒಟ್ಟಾರೆ ಲೆಕ್ಕೆ ತೆಗೆದುಕೊಳ್ಳುವುದಲ್ಲ ಎಂದು ಹೇಳಿದ ಬಳಿಕವೂ ಕೋರ್ಟ್​ ಸೂಚನೆ ಪಾಲಿಸದೆ ಮುಂಬಡ್ತಿ ನೀಡಲು ತಯಾರಿ ನಡೆದಿದೆ ಎಂಬುದು ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.
ಸುಪ್ರೀಂ ಸೂಚನೆಯಂತೆ ನಡೆಯುವುದಾದರೆ, ಸರ್ಕಾರ ಬಡ್ತಿ ಮೀಸಲಾತಿ ನೀಡಿ ಮರು ಪರಿಶೀಲಿಸಬೇಕಾಗುತ್ತದೆ. ಮರು ಪರಿಶೀಲನೆ ನಡೆಸಿದರೆ ಶೇ.18ಕ್ಕಿಂತ ಹೆಚ್ಚುವರಿಯಾಗಿ ಮುಂಬಡ್ತಿ ಪಡೆದವರಿಗೆ ಸಂಕಷ್ಟ ಎದುರಾಗಲಿದೆ. ಇದೇ ವಿಚಾರದಲ್ಲಿ ಸರ್ಕಾರ ಪ್ರತಿಕ್ರಿಯೆ ನೀಡಲು ಸಿದ್ಧವಿಲ್ಲ. ಮುಂದಿನ ವರ್ಷ ಚುನಾವಣೆ ನಡೆಯುವುದರಿಂದ ಯಾವುದೇ ಅಭಿಪ್ರಾಯ ನೀಡಿದರೂ ರಾಜಕೀಯ ಬಣ್ಣ ಪಡೆದುಕೊಳ್ಳಲಿದೆ. ಹೀಗಾಗಿ ಮೌನಕ್ಕೆ ಶರಣಾಗಿದೆ.

ವಾದ- ಪ್ರತಿವಾದ1. ನ್ಯಾ.ನಾಗೇಶ್ವರ ರಾವ್​ ಪೀಠದ ಮುಂದೆ ಮೀಸಲು ಮುಂಬಡ್ತಿ ಸಂಬಂಧ 144 ಅರ್ಜಿಗಳು ಇವೆ. ಇವುಗಳನ್ನು ಬಗೆಹರಿಸುವ ಮುನ್ನ ಸ್ಪಷ್ಟೀಕರಣ ನೀಡಿದೆ. ಈ 144 ಅಜಿರ್ಯಲ್ಲಿ ಕರ್ನಾ ಟಕಕ್ಕೆ ಸಂಬಂಧ ಪಟ್ಟ ಅಜಿರ್ ಇಲ್ಲ. ಹೀಗಾಗಿ ಅದನ್ನು ಪರಿಗಣಿಸುವ ಬಗ್ಗೆ ಸ್ಪಷ್ಟತೆ ಬರಲಿ ಎಂಬ ವಾದವಿದೆ.2. ಎಂ.ನಾಗರಾಜ್​ ಪ್ರಕರಣದಲ್ಲಿ ಮೀಸಲು ಮುಂಬಡ್ತಿ ನೀಡುವಾಗ ಶೇ.18 ದಾಟಬಾರದು ಎಂದು ನ್ಯಾಯಪೀಠ ಹೇಳಿದೆ. ಈ ನಿಯಮ ಪಾಲನೆ ಆಗುತ್ತಿಲ್ಲ. ಶೇ.60&70, 80 ಮಂದಿ ಮೀಸಲು ಆಧಾರದಲ್ಲಿ ಬಡ್ತಿ ಪಡೆಯುತ್ತಿದ್ದಾರೆ.
2018ರಲ್ಲಿ ಸರ್ಕಾರ ತಂದ ಕಾಯ್ದೆಯನ್ನು ತಣವೇ ಹಿಂಪಡೆಯಬೇಕು, ಇಲ್ಲವಾದರೆ ಸುಪ್ರೀಂ ಕೋರ್ಟ್​ ಸೂಚನೆಗೆ ವಿರುದ್ಧವಾಗುತ್ತದೆ. ಎಲ್ಲ ಇಲಾಖೆಯ ಎಲ್ಲ ಕೇಡರ್​ನ ಶೇ.18ರ ಮೀಸಲಾತಿ ಪ್ರಾತಿನಿಧ್ಯದ ಬಗ್ಗೆ ಮಾಹಿತಿ ಕಲೆ ಹಾಕುವುದು ಸರ್ಕಾರಕ್ಕೆ ಕಷ್ಟವಾಗಲ್ಲ. ಕೂಡಲೇ ಲೆಕ್ಕಹಾಕಿ ಆ ಪ್ರಕಾರ ಪ್ರಾತಿನಿಧ್ಯ ಕೊಡಲಿ.| ಎಂ.ನಾಗರಾಜ್​ ಅಹಿಂಸಾ ಸಂಘಟನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + twelve =
Remember me
