ತುಮಕೂರು:ಶಿರಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್​ ಗೌಡ ಇಂದು ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.
ರಾಜೇಶ್​ ಗೌಡ 15 ಕೋಟಿ ರೂಪಾಯಿ ಒಡೆಯನಾಗಿದ್ದು, 2019-20ರ ವಾರ್ಷಿಕ ಆದಾಯ 25,779,416 ರೂ. ಅವರ ಪತ್ನಿ ತೇಜಸ್ವಿನಿ ಬಳಿ 4 ಕೋಟಿ ರೂ. ಇದ್ದು ಅವರ 2019-20ರ ವಾರ್ಷಿಕ ಆದಾಯ 4,883,196 ರೂ. ಇನ್ನು ರಾಜೇಶ್ ಗೌಡ ಅವರ ಬಳಿ 19,000 ರೂ.ನಗದು ಇದ್ದರೆ, ಪತ್ನಿ ತೇಜಸ್ವಿನಿ ಬಳಿ 1, 85,000ರೂ. ಇದೆ.
ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ 38,000 ರೂ.ಮ್ಯೂಚುಯಲ್ ಫಂಡ್​ ಹೊಂದಿರುವ ರಾಜೇಶ್​ ಗೌಡ, ಮ್ಯಾಟ್ರಿಕ್​ ಇಮೇಜಿನ್ ಇಂಡಿಯಾದಲ್ಲಿ 4500 ಷೇರು ಹೂಡಿಕೆ ಮಾಡಿದ್ದಾರೆ. ಸ್ಪೆಕ್ಟ್ರಂ ಡಯಾಗ್ನಾಸ್ಟಿಕ್ ಹೆಲ್ತ್ ಕೇರ್​​​​ನಲ್ಲಿ ರಾಜೇಶ್ ಗೌಡ ಮತ್ತು ಪತ್ನಿ ತೇಜಸ್ವಿನಿ ಸೇರಿ 1,20,00,000ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಹಾಗೇ ಶಾಂತಾ ಇಂಡಸ್ಟ್ರಿಯಲ್​ನಲ್ಲಿ ಶೇ.33 ಷೇರು, ಎಂ.ಎಸ್. ಸ್ಪೆಕ್ಟ್ರಂ ಡಯಾಗ್ನಾಸ್ಟಿಕ್ ಆ್ಯಂಡ್ ಹೆಲ್ತ್ ಕೇರ್ ನಲ್ಲಿ 1,56,17,712 ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ.
ರಾಜೇಶ್​ ಗೌಡ ಅವರು ತಂದೆ ಮೂಡಲಗಿರಿಯಪ್ಪ ಅವರ ಬಳಿ 1 ಕೋಟಿ ರೂ., ಪತ್ನಿ ತೇಜಸ್ವಿನಿ ಬಳಿ ‌1,43,26,000 ರೂ. ಸಹೋದರಿ ಡಾ.ಕವಿತಾ ಬಳಿ 60,43,790 ರೂ. ಹಾಗೂ ಲಕ್ಷ್ಮಿದೇವಿ ಬಳಿ 15,89,000 ರೂ. ಸಾಲ ಪಡೆದಿದ್ದಾರೆ. ಇನ್ನು ವಾಹನಕ್ಕೆ ಸಂಬಂಧಪಟ್ಟ ಸಾಲ 24 ಲಕ್ಷ ರೂಪಾಯಿ ಇದೆ. ವಿವಿಧ ಬ್ಯಾಂಕಿನಲ್ಲಿ 5,33,94690 ರೂ. ಸಾಲ ಇದೆ.
ರಾಜೇಶ್​ ಗೌಡ ಅವರ ಬಳಿ 1,7945,849 ರೂ. ಮೌಲ್ಯದ ಎರಡು BMW ಕಾರುಗಳು, 34 ಲಕ್ಷದ ಒಂದು ಫೋರ್ಡ್​ ಕಾರು, 1,02,000 ರೂ.ಬೆಲೆಯ ಒಂದು ಹುಂಡೈ ಕಾರು ಇದ್ದು, 25 ಲಕ್ಷ ರೂ.ಮೌಲ್ಯದ 500 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ಆಭರಣ ಇದೆ.
ಶಿರಾದ ಹುಲಿಕುಂಟೆಯಲ್ಲಿ 1 ಕೋಟಿ 11 ಲಕ್ಷ ರೂ. ಮೌಲ್ಯದ 33.25 ಎಕರೆ ಕೃಷಿ ಭೂಮಿ, ಬೆಂಗಳೂರಿನ ಅಂಚೇಪಾಳ್ಯದಲ್ಲಿ 38 ಲಕ್ಷ ಮೌಲ್ಯದ 3146 ಚದರ್ ಅಡಿಯ ನಿವೇಶನ, ಬೆಂಗಳೂರು ಹೊರವಲಯದ ಕಡಬಗೆರೆಯಲ್ಲಿ 2400 ಚದರ್​​ ಅಡಿಯ 40 ಲಕ್ಷ ರೂ. ಮೌಲ್ಯದ ನಿವೇಶನ, ಬೆತ್ತನಗೆರೆ ಗ್ರಾಮದಲ್ಲಿ 1220 ಅಡಿಯ 8 ಲಕ್ಷ ಮೌಲ್ಯದ ನಿವೇಶನ ಇದೆ.
ಪತ್ನಿ ತೇಜಸ್ವಿನಿ ಹೆಸರಲ್ಲಿ ಜೆನಿಮ್ಯಾಟ್ರಿಕ್ ಮಾಲುಕ್ಯೂಲರ್ ಡಯಾಗ್ನಾಸ್ಟಿಕ್ ಆ್ಯಂಡ್​ ರಿಸರ್ಚನಲ್ಲಿ 397465‌ ರೂ, ಆದಿತ್ಯಾ ಬಿರ್ಲಾ ಮ್ಯೂಚುಯಲ್ ಫಂಡ್​ನಲ್ಲಿ 1,90,000 ರೂ., ಆಕ್ಸಿಸ್ ಲಾಂಗ್ ಟರ್ಮ ಇಕ್ಯೂಟಿ ಫಂಡ್​​ನಲ್ಲಿ 1,70,000ರೂ. ಹೂಡಿಕೆ ಮಾಡಲಾಗಿದೆ.
ಹಾಗೇ ತೇಜಸ್ವಿನಿ ಅವರ ಬಳಿ 9,50,000 ರೂ. ಮೌಲ್ಯದ ಹೋಂಡಾ ಕಾರು, 97 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನಾಭರಣ ಇದ್ದು, ಸ್ಥಿರಾಸ್ತಿ ಒಟ್ಟು ರೂ.1,30,00,000, ಚರಾಸ್ತಿ-2,8034,773 ರೂ. ಇದೆ. 1,43,94,942‌ ರೂ. ಸಾಲ ಇದೆ. (ಏಜೆನ್ಸೀಸ್​)
3 ಕೋಟಿ ಸಂಪತ್ತಿನ ಒಡತಿ ಅಮ್ಮಾಜಮ್ಮ ಹೊತ್ತಿರುವ ಸಾಲದ ಹೊರೆ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
