ಕೆ.ಎಂ.ದೊಡ್ಡಿ (ಮಂಡ್ಯ):ಕೊಕ್ಕರೆಬೆಳ್ಳೂರಿನಲ್ಲಿ ಮಂಗಳವಾರ ಜಮೀನು ವಿವಾದ ವಿಚಾರಕ್ಕೆ ಸೋದರ ಸಂಬಂಧಿಗಳ ಜಗಳ ತಾರಕಕ್ಕೇರಿದ್ದು, ಮನನೊಂದ ಎರಡು ಕುಟುಂಬಗಳ ಐವರು ಕ್ರಿಮಿನಾಶ ಮತ್ತು ಸೀಮೆಎಣ್ಣೆ ಕುಡಿದಿದ್ದಾರೆ. ಈ ಪೈಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ.
ಗ್ರಾಮದ ನಾರಾಯಣ ಮತ್ತು ಶ್ರೀನಿವಾಸ್​ ಕುಟುಂಬದವರು ಸೋದರ ಸಂಬಂಧಿಗಳಾಗಿದ್ದು, ಆಸ್ತಿ ವಿಚಾರಕ್ಕೆ ಮನಸ್ತಾಪ ಮಾಡಿಕೊಂಡಿದ್ದರು. ಹದಿನೈದು ದಿನಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆದು ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೆ ತೀರ್ಮಾನಕ್ಕೆ ಒಪ್ಪದ ಎರಡೂ ಕುಟುಂಬಗಳ ನಡುವೆ ಮಂಗಳವಾರ ಬೆಳಗ್ಗೆ ಜಗಳ ಆರಂಭವಾಗಿತ್ತು.
ಇದನ್ನೂ ಓದಿರಿಐಎಂಎ ಬಹುಕೋಟಿ ಹಗರಣ, ಮನ್ಸೂರ್​ಗೆ ಮತ್ತೆ ಜೈಲೇ ಗತಿ
ಆಸ್ತಿ ವಿಚಾರವಾಗಿ ಮನನೊಂದ ನಾರಾಯಣ ಅವರ ಪತ್ನಿ ​ಶೈಲಜಾಲಕ್ಷ್ಮಮ್ಮ ಮತ್ತು ತಿಮ್ಮಮ್ಮ ಕೀಟನಾಶಕ ಸೇವಿಸಿದ್ದರು. ಇವರನ್ನು ತಕ್ಷಣ ಮದ್ದೂರು ಪಟ್ಟಣದ ಕೆ.ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಶೈಲಜಾಲಕ್ಷ್ಮಮ್ಮ(35) ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ತಿಮ್ಮಮ್ಮ(45) ಅವರನ್ನು ಮಂಡ್ಯದ ಖಾಸಗಿ ನರ್ಸಿಂಗ್​ ಹೋಂಗೆ ಸೇರಿಸಲಾಗಿದೆ.
ಮತ್ತೊಂದೆಡೆ ಶ್ರೀನಿವಾಸ್​ ಕುಟುಂಬದ ಜಯಮ್ಮ(62), ಸಿದ್ದೇಶ್​(41), ಶಿವಲಿಂಗಮ್ಮ(65) ಸಹ ಸೀಮೆಎಣ್ಣೆ ಕುಡಿದು ಅಸ್ವಸ್ಥರಾಗಿದ್ದು, ಎಲ್ಲರನ್ನೂ ಕೆ.ಗುರುಶಾಂತಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಕ್ಕೆ ವೃತ್ತ ನಿರೀಕ್ಷಕ ಕೆ.ಆರ್​.ಪ್ರಸಾದ್​, ಎಸ್​ಐ ಮಂಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

https://app.bitly.com/Bk52bwjriNH/bitlinks/3hdpmHi
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
