ಹುಬ್ಬಳ್ಳಿ:ಆಸ್ತಿ ವಿಚಾರಚಾಗಿ ಅನೇಕ ರೀತಿಯ ಜಗಳಗಳಾಗುವುದನ್ನು ನಾವು ನೋಡಿದ್ದೇವೆ. ಆದರೆ ಸ್ವಂತ ಅಳಿಯನೇ ಮಾವನನ್ನು ಚೂರಿ ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೊಲೆ ಮಾಡುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಂತಹ ಗಂಡೆದೆಯೂ ಒಮ್ಮೆಗೆ ಬೆಚ್ಚುವ ರೀತಿಯಲ್ಲಿ ಈ ಪಾಪಿ ಅಳಿಯ ಕೊಲೆ ಮಾಡಿದ್ದಾನೆ.ಹುಬ್ಬಳ್ಳಿ ತಾಲೂಕಿನಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದ್ದು ಸುಳ್ಳ ಗ್ರಾಮದ ಶಿವಪ್ಪ ಎಂಬಾತನ ಜೊತೆ ಆತನ ಅಳಿಯ ಗುರಪ್ಪ ಗುಡಗೇರಿ ಆಸ್ತಿಯ ವಿಚಾರಕ್ಕೆ ಜಗಳ ಮಾಡಿದ್ದಾರೆ. ಇದೇ ವೇಳೆ ಅಳಿಯ ಗುರಪ್ಪ ಗುಡಗೇರಿ ಗ್ರಾಮದಲ್ಲಿರುವ ಹಾಲಿನ ಕೇಂದ್ರದ ಮುಂದೆಯೇ ತನ್ನ ಮಾವನನ್ನು ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾರೆ.

ಅಳಿಯ ಚಾಕು ಇರಿದ ನಂತರ ಚಾಕು ಶಿವಪ್ಪನ ದೇಹದಲ್ಲಿ ಸಿಲುಕಿಕೊಂಡಿದ್ದು ಆಗ ಅಲ್ಲಿನ ಗ್ರಾಮಸ್ಥರು ಬಂದು ಅಳಿಯನನ್ನು ತಡೆಯಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಅದಾಗಲೇ ಗುರಪ್ಪ ಗುಡಗೇರಿ ಸಾಕಷ್ಟು ಬಾರಿ ಚುಚ್ಚಿದ್ದರಿಂದ ಆಘಾತ ತಾಳಲಾರದೇ ಶಿವಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಆರೋಪಿ ಗುರಪ್ಪ ಗುಡಗೇರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
