ತುಮಕೂರು:ಆಸ್ತಿಗಾಗಿ ಅಸಹಾಯಕ ಅಜ್ಜಿಯನ್ನೇ ಹೊರದಬ್ಬಿದ ಪಾಪಿ ಮೊಮ್ಮಗನಿಗೆ ಉಪ ವಿಭಾಗಾಧಿಕಾರಿ ತಕ್ಕ ಶಾಸ್ತಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ 3ನೇ ವಾರ್ಡ್​ನಲ್ಲಿ ನಡೆದಿದೆ.
80 ವರ್ಷದ ಅಜ್ಜಿಯ ಮನೆಯನ್ನೇ ಸ್ವಂತ ಮೊಮ್ಮಗ ಆಕ್ರಮಿಸಿಕೊಂಡಿದ್ದ. ಮನೆ ಸೇರಿದ ಬಳಿಕ ಅಜ್ಜಿಯನ್ನೇ ಹೊರದಬ್ಬಿದ್ದ. 8 ತಿಂಗಳ ಹಿಂದೆ ಕಾವಲಮ್ಮನನ್ನು ಮೊಮ್ಮಗ ಮಾರುತಿ ಮನೆಯಿಂದ ಹೊರದಬ್ಬಿದ್ದ.
ಕಾವಲಮ್ಮನ ಮಗಳಾದ ಲಕ್ಷ್ಮಮ್ಮ 8 ತಿಂಗಳ ಹಿಂದೆ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಳು. ಆ ಬಳಿಕ ಮಾರುತಿ ಮನೆಯನ್ನು ಆಕ್ರಮಿಸಿಕೊಂಡಿದ್ದ. ಅಜ್ಜಿಯನ್ನು ಹೊರದಬ್ಬಿ ಮನೆ ಮಾರಾಟ ಮಾಡಲು ಹೊಂಚುಹಾಕಿದ್ದ. ಇತ್ತ ಬೀದಿಗೆ ಬಿದ್ದ ಕಾವಲಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಕಾವಲಮ್ಮ ಅವರ ಕಷ್ಟ ಆಲಿಸಿದ ಸಂಬಂಧಿಕರು ಮಾರುತಿ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್, ಇದೀಗ ಪಾಪಿ ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಂಡುವಂತೆ ಆದೇಶ ಹೊರಡಿಸಿದ್ದಾರೆ.
ಎಸಿ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನು ಮನೆಯಿಂದ ಖಾಲಿ ಮಾಡಿಸಿದ್ದು, ಕೊರಟಗೆರೆ ತಹಸೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ತನ್ನ ವೃದ್ಧೆ ಕಾವಲಮ್ಮ ತಮ್ಮ ಮನೆ ಸೇರಿದ್ದಾರೆ. ಎಸಿ ಆದೇಶಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೆಳಮನೆ ಪತ್ನಿ ಮೇಲ್ಮನೆ ಗಂಡ ಪರಾರಿ ಕೇಸ್​ಗೆ ಟ್ವಿಸ್ಟ್​: 10 ದಿನದ ಬಳಿಕ ಶೋಯಬ್ ಪ್ರತ್ಯಕ್ಷ, ಪತಿಗೆ ಶಾಕ್​ ಕೊಟ್ಟ ಶಾಜಿಯಾ

ಪೊಲೀಸ್​ ವೇಷ ಧರಿಸಿ ವೃದ್ಧೆಯ ಬಳಿ 7 ಸವರನ್​ ಚಿನ್ನ ದೋಚಿದ ಕರ್ನಾಟಕ ಗ್ಯಾಂಗ್​ ಕೇರಳದಲ್ಲಿ ಅರೆಸ್ಟ್!​

ಯುವಕನಿಗೆ ಸಾನ್ಯ ಅಯ್ಯರ್ ಕಪಾಳಮೋಕ್ಷ: ತಿರುಗಿ ಪುಟ್ಟಗೌರಿಯ ಕೆನ್ನೆಗೆ ಬಾರಿಸಿದ ಯುವಕ, ಪುತ್ತೂರಿನಲ್ಲಿ ಸಾನ್ಯ ಟೀಂ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
