ಶತಮಾನಗಳಿಂದ ಸಂರಕ್ಷಿಸಲಾಗಿರುವ ಕಂದಾಯ ಇಲಾಖೆಯ ಕಡತಗಳು ಇದೀಗ ಬಹಿರಂಗವಾಗಿಯೇ ಖಾಸಗಿಯವರ ಕೈಸೇರುತ್ತಿದೆ. ಅದರಲ್ಲಿಯೂ ಸೋರಿಕೆ ಆಗುತ್ತಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿ ದಸ್ತಾವೇಜುಗಳನ್ನು ಖಾಸಗಿ ವ್ಯಕ್ತಿಗಳು ದುಪ್ಪಟ್ಟು ಬೆಲೆಗೆ ಬಿಕರಿ ಮಾಡುತ್ತಿದ್ದಾರೆ. ಈ ದಂಧೆ ನಕಲಿ ದಾಖಲೆ ಸೃಷ್ಟಿಸುವುದರ ಜತೆಗೆ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂ. ನಷ್ಟ ಆಗುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಕಂದಾಯ ಇಲಾಖೆಯಲ್ಲಿ ಸಿಗುವ ಪಹಣಿ, ಮ್ಯುಟೇಷನ್, ಸರ್ವೆ ನಕ್ಷೆ, ಖಾತಾ, ಆಕಾರ್ ಬಂದ್ ಸೇರಿದಂತೆ ಹಲವು ದಾಖಲೆ ಪತ್ರಗಳನ್ನು ಆನ್​ಲೈನ್​ನಲ್ಲಿ ಒದಗಿಸಲು ‘ಭೂಮಿ’ ವೆಬ್​ಸೈಟ್ ತೆರೆಯಲಾಗಿದೆ. ಉಪನೋಂದಣಿ ಕಚೇರಿಯಲ್ಲಿ ಸಿಗುವಂತಹ ಋಣಭಾರ ಪ್ರಮಾಣಪತ್ರ (ಇಸಿ), ದೃಢೀಕರಣ ಪತ್ರ (ಸಿಸಿ) ಮತ್ತು 2004ರ ಆನಂತರ ನೋಂದಾಯಿತ ದಸ್ತಾವೇಜುಗಳ ಪ್ರಮಾಣ ಪತ್ರ ಪಡೆಯಲು ಕಾವೇರಿ 2.0 ವೆಬ್​ಸೈಟ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯ ಸಾಕಷ್ಟು ಸೇವೆ ಆನ್​ಲೈನ್​ನಲ್ಲಿ ಸಿಗುತ್ತಿವೆ. ಸಾರ್ವಜನಿಕರೇ ಸರ್ಕಾರದ ಖಜಾನೆಗೆ ನೇರವಾಗಿ ಹಣ ಪಾವತಿಸಿ ದಾಖಲೆ ಪಡೆಯಬಹುದು. ಆದರೆ, ಖಾಸಗಿ ಕಂಪನಿಗಳು ಆಪ್ ಮತ್ತು ವೆಬ್​ಸೈಟ್​ಗಳನ್ನು ತೆರೆದು ಕಂದಾಯ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಿಗುವಂತಹ ದಾಖಲೆ ಪಡೆದು ಮಾರಾಟ ದಂಧೆಗಿಳಿದಿವೆ.
ಅಸಲಿಯೋ ನಕಲಿಯೋ?:ಖಾಸಗಿ ಕಂಪನಿಗಳು ದಾಖಲೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುತ್ತಿವೆ. ಲಿಂಕ್​ಗಳನ್ನುಕೊಟ್ಟು 2 ನಿಮಿಷಗಳಲ್ಲಿ ಮೊಬೈಲ್​ನಲ್ಲೇ ಭೂ ದಾಖಲೆ ಡೌನ್​ಲೋಡ್ ಮಾಡಿಕೊಳ್ಳಬಹುದೆಂದು ಪ್ರಚಾರ ಮಾಡುತ್ತಿವೆ. ಆದರೆ ಈ ಎರಡು ನಿಮಿಷದ ದಾಖಲೆಗಳು ಅಸಲಿಯೋ, ನಕಲಿಯೋ ಎಂಬುದೇ ಅನುಮಾನಕ್ಕೆ ಕಾರಣವಾಗಿದೆ.
ಬ್ಯಾಂಕ್ ಖಾತೆ ವಿವರಕ್ಕೆ ಕನ್ನ:ಆನ್​ಲೈನ್​ನಲ್ಲಿ ಶುಲ್ಕ ವಸೂಲಿ ಆಗುತ್ತಿರುವ ಕಾರಣಕ್ಕೆ ಅಮಾಯಕರ ಬ್ಯಾಂಕ್ ಖಾತೆ ವಿವರ ಸಹ ಖಾಸಗಿಯವರ ಕೈ ಸೇರುತ್ತಿದೆ. ಕಂದಾಯ ಇಲಾಖೆಗಳ ಸೇವೆಗಳಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಇದೀಗ ಖಾಸಗಿ ಕಂಪನಿಗಳು ತಾವೇ ಸೇವೆ ಒದಗಿಸಿ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
10 ರೂ. ಪಹಣಿಗೆ 199 ವಸೂಲಿ
ಭೂಮಿ ವೆಬ್​ಸೈಟ್​ನಲ್ಲಿ ಲಾಗಿನ್ ಆಗಿ ಪಹಣಿ ಪಡೆಯಲು ಎಲ್ಲರಿಗೂ ಅವಕಾಶವಿದೆ. ಜನ ಸೇವಾ ಕೇಂದ್ರಗಳಲ್ಲಿಯೂ ಪಹಣಿ ಮತ್ತು ಮ್ಯುಟೇಷನ್ 10 ರೂ.ಗೆ ಸಿಗಲಿವೆ. ಖಾಸಗಿ ವೆಬ್​ಸೈಟ್​ನಲ್ಲಿ ಪಹಣಿ, ಮ್ಯುಟೇಷನ್​ಗೆ 199 ರೂ. ಶುಲ್ಕ ವಿಧಿಸಲಾಗುತ್ತಿದೆ. ಸರ್ವೆ ಮ್ಯಾಪ್, ಇ-ಖಾತಾಗೆ 999 ರೂ. ವಸೂಲಿ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಇಸಿಗೆ 599 ರೂ. ಸಿಸಿಗೆ 999 ರೂ.
ಇಸಿಗೆ ಮೊದಲ ವರ್ಷಕ್ಕೆ 40 ರೂ. ಮತ್ತು ಆನಂತರ ಪ್ರತಿವರ್ಷಕ್ಕೆ 10 ರೂ. ಶುಲ್ಕ ನಿಗದಿ ಮಾಡಲಾಗಿದೆ. ಅದೇ ರೀತಿಯಾಗಿ ಸಿಸಿಗೆ 170 ರೂ. ನಿಗದಿ ಮಾಡಿದ್ದು, ಹೆಚ್ಚುವರಿ ಪೇಜ್ ಇದ್ದರೆ ತಲಾ 10 ರೂ. ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿದೆ. ಕಾವೇರಿ 2.0ರಲ್ಲಿ ಅರ್ಜಿ ಸಲ್ಲಿಸಿದರೆ, ನಿಗದಿತ ದಿನಾಂಕದಲ್ಲಿ ಡಿಜಿಟಲ್ ಸಹಿಯುಳ್ಳ ಪ್ರಮಾಣ ಪತ್ರ ಸಿಗುತ್ತದೆ. ಆದರೆ, ಖಾಸಗಿ ವೆಬ್​ಸೈಟ್​ಗಳಲ್ಲಿ 1 ವರ್ಷದ ಇಸಿಗೆ 599 ರೂ. ನಿಗದಿ ಮಾಡಿದ್ದಾರೆ. ಸಿಸಿಗೆ 999 ರೂ. ನಿಗದಿ ಮಾಡಲಾಗಿದೆ. ಅಂಚೆ ಮೂಲಕ ಕಳುಹಿಸಲು ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚಿಸಲಾಗುತ್ತಿದೆ.
ಖಜಾನೆಗೆ ಕನ್ನ..?
ಭೂಮಿ ಮತ್ತು ಕಾವೇರಿ 2.0 ವೆಬ್​ಸೈಟ್​ನಲ್ಲಿ ಸೇವೆ ಪಡೆಯುವಾಗ ನೆಟ್​ಬ್ಯಾಂಕಿಂಗ್ ಅಥವಾ ವ್ಯಾಲೆಟ್​ನಿಂದ ಶುಲ್ಕ ಪಾವತಿ ಮಾಡಿದರೆ ನೇರವಾಗಿ ಸರ್ಕಾರದ ಖಜಾನೆಗೆ ಜಮೆ ಆಗುತ್ತದೆ. ದಿನಕ್ಕೆ ರಾಜ್ಯದಲ್ಲಿ ಲಕ್ಷಾಂತರ ಪಹಣಿ, ಮ್ಯುಟೇಷನ್, ಸಿಸಿ, ಇಸಿ ಪತ್ರಗಳನ್ನು ಸಾರ್ವಜನಿಕರು ಆನ್​ಲೈನ್​ನಲ್ಲಿ ಪಡೆಯುತ್ತಾರೆ. ಇದರಿಂದ ಸರ್ಕಾರಕ್ಕೂ ದುಪ್ಪಟ್ಟು ಆದಾಯ ಬರುತ್ತಿದೆ. ಆದರೆ, ಖಾಸಗಿ ವೆಬ್​ಸೈಟ್​ನಲ್ಲಿ ದಾಖಲೆಗಳನ್ನು ಡೌನ್​ಲೋಡ್ ಮಾಡಿಕೊಂಡಾಗ ಖಾಸಗಿ ಕಂಪನಿ ಹೆಸರಿಗೆ ಹಣ ಜಮೆ ಆಗುತ್ತಿದೆ. ಅದರಲ್ಲಿಯೂ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಸರ್ಕಾರ, ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುವುದು ಸಾರ್ವಜನಿಕರ ಸುಲಿಗೆಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಅಧಿಕಾರಿಗಳ ಅಸಡ್ಡೆ ಉತ್ತರ
ಖಾಸಗಿ ಕಂಪನಿಗಳ ಜಾಹೀರಾತು, ಸೇವೆ ಕುರಿತು ಕಂದಾಯ ಇಲಾಖೆ ಹಾಗೂ ನೋಂದಣಿ, ಮುದ್ರಾಂಕ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಖಾಸಗಿ ವೆಬ್​ಸೈಟ್​ಗಳು ‘ಮಿರರಿಂಗ್’ ರೀತಿಯಲ್ಲಿ ಕೆಲಸ ಮಾಡುತ್ತಿರಬೇಕೆಂದು ಓರ್ವ ಅಧಿಕಾರಿ ಉತ್ತರಿಸಿದರೆ, ಮತ್ತೊಬ್ಬರು ಏಜೆಂಟ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಸಡ್ಡೆ ಉತ್ತರ ನೀಡಿದ್ದಾರೆ.
ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು.
ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತನ ಹೊಸ ಫೋಟೋ ಬಿಡುಗಡೆ ಮಾಡಿದ ಎನ್‌ಐಎ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − six =
Remember me
