|ಶಿವಾನಂದ ತಗಡೂರುಬೆಂಗಳೂರು
ರಾಜ್ಯದಲ್ಲಿ ನೀಲಗಿರಿ ಪ್ಲಾಂಟೇಷನ್ ಮಾಡುವ ಪ್ರಕ್ರಿಯೆ ಮುಂದುವರಿಸಲು ಅರಣ್ಯ ಇಲಾಖೆ ಸದ್ದಿಲ್ಲದೆ ಹೆಜ್ಜೆ ಇಟ್ಟಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ನೀಲಗಿರಿ ಬೆಳೆಸಬೇಕೇ? ಬೇಡವೇ? ಎನ್ನುವ ಬಗ್ಗೆ ವಿಧಾನಸಭೆಯಲ್ಲಿ ಹಲವಾರು ಬಾರಿ ಪರ- ವಿರುದ್ದ ಚರ್ಚೆಯೇ ನಡೆದಿದೆ. ತೀವ್ರ ವಿವಾದಕ್ಕೆ ಕಾರಣವಾದ ಈ ಯೋಜನೆಗೆ ಸರ್ಕಾರ ಬ್ರೇಕ್ ಹಾಕಿತ್ತು.
ಮೂರು ವರ್ಷಗಳಿಂದ ಯಾವುದೇ ಹೊಸ ಪ್ಲಾಂಟೇಶನ್ ಮಾಡಿಲ್ಲ. ಹೊಸ ಜಾಗದಲ್ಲಿ ಸಸಿ ನೆಡುವುದಿರಲಿ, ಹಾಲಿ ಇರುವ ಜಾಗದಲ್ಲಿಯೂ ಮತ್ತೆ ಸಸಿ ನೆಡುವುದನ್ನೂ ನಿಲ್ಲಿಸಿಬಿಟ್ಟಿತ್ತು. ಹಲವು ಕಾರಣಕ್ಕೆ ಭದ್ರಾವತಿ ಪೇಪರ್ ಮಿಲ್ ನಿಂತಿದ್ದು, ದಾಂಡೇಲಿ ಪೇಪರ್ ಮಿಲ್ ಮಾತ್ರ ನಡೆಯುತ್ತಿದೆ. ಮುಂದೆಯೂ ನೀಲಗಿರಿ ಪ್ಲಾಂಟೇಶನ್ ನಿಲ್ಲಿಸಿದರೆ, ಪೇಪರ್ ಮಿಲ್​ಗೆ ನೀಲಗಿರಿ ಕೊರತೆ ಬರಲಿದೆ ಎನ್ನುವ ಧ್ವನಿ ಈಗ ಅರಣ್ಯ ಇಲಾಖೆಯಲ್ಲಿ ಕೇಳಿಬರುತ್ತಿದೆ.
ಅಂತರ್ಜಲ ವಿವಾದ:ನೀಲಗಿರಿ ನೆಡುವುದಕ್ಕೆ ರೈತರ ವಿರೋಧವಿದೆ ಎನ್ನುವ ದೂರುಗಳಲ್ಲಿ ಸತ್ಯಾಂಶವಿಲ್ಲ. ನೀಲಗಿರಿ ಬೇರು ನೆಲದಿಂದ 3 ಅಡಿ ಆಳಕ್ಕಷ್ಟೆ ಚಾಚಿಕೊಳ್ಳುತ್ತವೆ. ಇದರಿಂದಲೇ ಅಂತರ್ಜಲ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಯಾವ ವೈಜ್ಞಾನಿಕ ಆಧಾರಗಳಿಲ್ಲ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ವಾದ.
ವಿಶ್ವಬ್ಯಾಂಕ್ ನೆರವು:ರಾಜ್ಯದಲ್ಲಿ ಅರಣ್ಯ ಬೆಳೆಸುವ ಯೋಜನೆಯಲ್ಲಿಯೇ ನೀಲಗಿರಿಯನ್ನು ಸೇರಿಸಲಾಗಿತ್ತು. ಹಾಗಾಗಿ ಅರಣ್ಯ ಅಭಿವೃದ್ಧಿ ಯೋಜನೆಯಲ್ಲಿ ವಿಶ್ವಬ್ಯಾಂಕ್​ನಿಂದ ಸಾಲ ಪಡೆದು ರಾಜ್ಯದ ಹಲವು ಕಡೆಯಲ್ಲಿ ನೀಲಗಿರಿ ಬೆಳೆಸಲಾಗಿತ್ತು. ಈಗ ವಿಶ್ವಬ್ಯಾಂಕ್ ನೆರವು ಕಡಿತಗೊಂಡಿದೆ.
ರಾಜ್ಯದಲ್ಲಿ ಅರಣ್ಯ ಅಭಿವೃದ್ಧಿಗಾಗಿಯೇ ಅಸ್ಥಿತ್ವದಲ್ಲಿರುವ ಅರಣ್ಯ ಅಭಿವೃದ್ಧಿ ನಿಗಮ, ತೆರೆಮರೆಯಲ್ಲಿ ಕಾರ್ಯ ನಿರ್ವಹಣೆ ಮಾಡಿಕೊಂಡು ಬಂದಿದೆ. 145 ಕೋಟಿ ರೂ. ಆದಾಯ ಹೊಂದಿದ್ದ ನಿಗಮದ ವಹಿವಾಟು ಈಗ 70 ಕೋಟಿ ರೂ.ಗೆ ತಗ್ಗಿದೆ. ಬಹಳ ವರ್ಷಗಳಿಂದ ಈ ನಿಗಮದಲ್ಲಿಯೇ ಝಾಂಡಾ ಹೂಡಿರುವ ಅಧಿಕಾರಿಗಳು ಹೊಸ ಯೋಜನೆಗೆ ಸಹಕಾರ ನೀಡುತ್ತಿಲ್ಲ ಎನ್ನುವ ದೂರುಗಳಿವೆ. ಹೊಸದಾಗಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ತಾರಾ ಅನೂರಾಧ ಈ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ನಿಗಮದಿಂದ ಹಿಂದೆ ಏನೇನು ಕೆಲಸ ಆಗಿದೆ. ಮುಂದೇನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಶೀಘ್ರವೇ ಕಾರ್ಯಯೋಜನೆ ರೂಪಿಸಲಾಗುವುದು.
|ತಾರಾ ಅನೂರಾಧಅಧ್ಯಕ್ಷೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
