ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡುವುದರೊಂದಿಗೆ ಮೈತ್ರಿ ಪಕ್ಷಗಳ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಪಕ್ಷಪಾತರಹಿತವಾದ ಸ್ವತಂತ್ರ ಸಂಸ್ಥೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋತ್, ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ
ಸಮ್ಮತಿಸಿದ್ದಾರೆ. ಆ ಮೂಲಕ ಮುಡಾ ಹಗರಣ ಕಾನೂನು ಸಂಘರ್ಷಕ್ಕೆ ತೆರೆದುಕೊಂಡಂತಾಗಿದೆ. ಶುಕ್ರವಾರ ರಾಜ್ಯಪಾಲರ ತೀರ್ಮಾನ ಬೀಳುತ್ತಿದ್ದಂತೆ ಸರ್ಕಾರದಲ್ಲಿ ಕಂಪನ ಉಂಟಾಗಿದೆ. ಸಚಿವರೆಲ್ಲ ಸಿದ್ದರಾಮಯ್ಯ ಬೆಂಬಲಕ್ಕೆ ಧಾವಿಸಿದ್ದಾರೆ. ಜತೆಗೆ ರಾಜ್ಯಪಾಲರ ತೀರ್ವನದ ವಿರುದ್ಧ ಕಾನೂನು ಹೋರಾಟದ ಜತೆಯಲ್ಲೇ ಪಕ್ಷದಿಂದಲೂ ರಾಜ್ಯಾದ್ಯಂತ ರಾಜಕೀಯ ಹೋರಾಟ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕೂಡಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ಕೈಪಡೆ ವಾದವೇನು?:ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿ ಅಭಿಯೋಜನೆಗೆ ಅವಕಾಶ ಕೊಡುವುದಕ್ಕಾಗಿ ಕೇಂದ್ರ ಸರ್ಕಾರವೇ ಒಂದು ಎಸ್​ಒಪಿ ಮಾಡಿದೆ. ಅದರ ಪ್ರಕಾರ ರಾಜ್ಯಪಾಲರು ನಡೆದುಕೊಂಡಿಲ್ಲ.
ಕಾನೂನು ಸಮರ:ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಸಿಎಂ ಕಾನೂನು ತಂಡ ತೀರ್ವನಿಸಿದೆ.
ದಾಖಲೆ ಒಪ್ಪಿದ ಗವರ್ನರ್:ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿದಾರಿಕೆ ಕುರಿತು ಬಂದ ದೂರು ಮತ್ತು ದೂರಿಗೆ ಸಂಬಂಧಿಸಿದ ದಾಖಲೆಯಿಂದ ಈ ಪ್ರಕರಣ ತನಿಖೆಗೊಪ್ಪಿಸಲು ಅರ್ಹವಾದುದೆಂದು ಅನಿಸಿದೆ. ಈ ಕಾರಣಕ್ಕೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218ರ ಅಡಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅನುಮತಿ ನೀಡುವ ನಿರ್ಧಾರವನ್ನು ರಾಜ್ಯಪಾಲರು ಪ್ರಕಟಿಸಿದ್ದಾರೆ.
ತಿದ್ದಿದ ಸರ್ಕಾರಿ ದಾಖಲೆ!:ಮುಡಾ ಪ್ರಕರಣದಲ್ಲಿ ಸರ್ಕಾರಿ ದಾಖಲೆ ತಿದ್ದಲಾಗಿದೆ ಎಂಬ ದೂರು ಮತ್ತು ಸಂಬಂಧಪಟ್ಟ ದಾಖಲೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಡಿಸೆಂಬರ್​ನಲ್ಲಿ ದೂರುದಾರರು ರಾಜಭವನಕ್ಕೆ ದೂರಿತ್ತಿದ್ದರು, ಬಳಿಕ ದಾಖಲೆ ಸಂಗ್ರಹ ಪರಿಶೀಲನೆ ನಡೆಸಲಾಗಿತ್ತು. ಸರ್ಕಾರಿ ದಾಖಲೆ ತಿರುಚಿರುವುದರಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಪಾತ್ರವಿದೆ ಎಂಬುದೂ ಸಹ ಗಮನಕ್ಕೆ ಬಂದಿದೆ.
ಕಾಂಗ್ರೆಸ್ ಪಾದಯಾತ್ರೆ:ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ನಿಲುವು ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದೆ. ಆ.19ರಂದು ಜಿಲ್ಲಾ ಕೇಂದ್ರಗಳಲ್ಲಿ ಅರ್ಧ ಕಿಲೋಮೀಟರ್ ಪಾದಯಾತ್ರೆ,, ಪ್ರತಿಭಟನಾ ಸಭೆ ನಡೆಸಿ ರಾಷ್ಟ್ರಪತಿಯವರಿಗೆ ಇ ಮೇಲ್ ಮೂಲಕ ದೂರು ಸಲ್ಲಿಸಬೇಕೆಂದು ಎಐಸಿಸಿ ಸೂಚನೆ ನೀಡಿದೆ.
ಸಚಿವ ಸಂಪುಟ ಖಂಡನೆ:ರಾಜ್ಯಪಾಲರು, ರಾಷ್ಟ್ರಪತಿ, ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಂಪುಟ ಸಭೆ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿದೆ. ಶನಿವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವ, ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಂಪುಟ ಅಭಿಪ್ರಾಯಪಟ್ಟಿತು. ಜತೆಗೆ ಎಲ್ಲ ಸಚಿವರು ಸಿಎಂ ಬೆಂಬಲಕ್ಕೆ ಇದ್ದೇವೆಂಬ ಸಂದೇಶ ಸಾರಿತು.
ಹೈಕೋರ್ಟ್​ಗೆ ಕೇವಿಯಟ್:ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ ವಕೀಲ ಎಸ್.ಪಿ. ಪ್ರದೀಪ್ ಕುಮಾರ್ ಶನಿವಾರ ಹೈಕೋರ್ಟ್​ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಪ್ರಾಸಿಕ್ಯೂಷನ್​ಗೆ
ರಾಜ್ಯಪಾಲರು ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದಲ್ಲಿ ತಮ್ಮ ವಾದ ಆಲಿಸದೆ ಯಾವುದೇ ಆದೇಶ ಹೊರಡಿಸದಂತೆ ಮನವಿ ಮಾಡಿದ್ದಾರೆ.
ಸ್ಪಷ್ಟವಾಗಿ ಹೇಳುವುದಾದರೆ ಇದು ಅಭಿಯೋಜನೆಗೆ ನೀಡಿರುವ ಅನುಮತಿ ಅಲ್ಲ. ಇದು ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ಬಂದಿರುವ ದೂರಿನ ತನಿಖೆಗೆ ಕೊಟ್ಟಿರುವ ಅನುಮತಿಯಾಗಿದೆ. ಇದನ್ನು ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್​ನಲ್ಲಿ ಪ್ರಶ್ನಿಸುವುದಕ್ಕೂ ಅವಕಾಶ ಇದೆ. ತಟಸ್ಥ ಹಾಗೂ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕೆಂದು ಮನವರಿಕೆ ಆಗಿರುವುದಾಗಿ ರಾಜ್ಯಪಾಲರು ತಮ್ಮ ನಿರ್ಧಾರದಲ್ಲಿ ಹೇಳಿದ್ದಾರೆ. ಹಾಗಾಗಿ, ಸೆಕ್ಷನ್ 17ಎ ಪ್ರಕಾರ ತನಿಖೆಗೆ ಅನುಮತಿ ಕೊಡುತ್ತೇನೆಂದು ತಿಳಿಸಿದ್ದಾರೆ. ಸೆಕ್ಷನ್ 17ಎ ಪ್ರಕಾರ ಪೊಲೀಸರು ತನಿಖೆ ಮಾಡಬೇಕಾದರೆ ಅನುಮತಿ ಬೇಕಾಗುತ್ತದೆ. ರಾಜ್ಯಪಾಲರ ಅನುಮತಿ ಇಲ್ಲದೆ ಜನಪ್ರತಿನಿಧಿಯನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆಗೆ ಒಳಪಡಿಸಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ತನಿಖೆ ನಡೆಸಲು ಎದುರಾಗಿದ್ದ ತಡೆ ತೆರವಾಗಿದೆ. ಹಾಗೆಯೇ, ಈ ಅನುಮತಿ ಕೋರ್ಟ್ ಪ್ರಕ್ರಿಯೆಗೆ ಅನ್ವಯವಾಗುವುದಿಲ್ಲ. ತನಿಖೆಗೆ ಮಾತ್ರ ಎಂದು ಯಾರು ಬೇಕಾದರೂ ನ್ಯಾಯಾಲಯದಲ್ಲಿ ಖಾಸಗಿ ದೂರು ಕೊಡಬಹುದು, ಆದರೆ ಪಿಸಿ ಆಕ್ಟ್​ನಲ್ಲಿ ಕಾನೂನು ಹೋರಾಟ ಮುಂದುವರಿಯಬೇಕೆಂದರೆ ಸೆಕ್ಷನ್ 19ರ ಅಡಿ ಅನುಮತಿ ಬೇಕು.
| ಬಿ.ವಿ. ಆಚಾರ್ಯ ಹಿರಿಯ ವಕೀಲ
ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ. ರಾಜ್ಯಪಾಲರ ನಿರ್ಣಯ ಸಂವಿಧಾನಬಾಹಿರ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅದನ್ನು ಗೌರವಿಸಿ ಸಿದ್ದರಾಮಯ್ಯ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
| ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ
ನಮ್ಮ ಪ್ರಯತ್ನಕ್ಕೆ ಭಾಗಶಃ ಯಶ ಸಿಕ್ಕಿದೆ. ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಿಎಂ ಭ್ರಷ್ಟಾಚಾರದಲ್ಲಿ ಭಾಗಿ ಎಂಬುದನ್ನು ಸಾಬೀತು ಮಾಡುತ್ತೇವೆ, ಹಲವು ದಾಖಲೆಗಳಿವೆ.
| ಟಿ.ಜೆ.ಅಬ್ರಹಾಂ ಸಾಮಾಜಿಕ ಹೋರಾಟಗಾರ
ಪ್ರಧಾನಿ ಮೋದಿ ಭೇಟಿ ಮಾಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು; ಕಾರಣ ಹೀಗಿದೆ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
