ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೀನುಗಾರರು ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ, ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆ ಬಿಲ್ಟ್ ಸರ್ಕಲ್ ಬಳಿ ಸೇರಿದ ಮೀನುಗಾರರು, ಮಹಿಳೆಯರು ನಗರದ ಮೀನು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದರು.
ತಮ್ಮ ಬೇಡಿಕೆಗೆ ಶಾಸಕರು, ಸಂಸದರು‌ ಮನ್ನಣೆ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಭಾವಚಿತ್ರಕ್ಕೆ ಸೆಗಣಿ ಸಾರಿಸಿ, ಚಪ್ಪಲಿ ಹಾರ ಹಾಕಿದರು, ಅನಂತ ಕುಮಾರ್ ಭಾವ ಚಿತ್ರಕ್ಕೆ‌ ಸೀರೆ ಉಡಿಸಿ ಘೋಷಣೆ ಕೂಗಿದರು.
ಜ. 16 ರಂದು ಕಾರವಾರ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಹಿನ್ನೆಲೆ:
ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಯೋಜಿಸಲಾಗಿದೆ. 125 ಕೋಟಿ ವೆಚ್ಚದಲ್ಲಿ 880 ಮೀಟರ್ ಅಲೆ ತಡೆ ಗೋಡೆ ಹಾಗೂ 61 ಕೋಟಿಯಲ್ಲಿ 250 ಮೀಟರ್ ಹೆಚ್ಚುವರಿ ಜಟ್ಟಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಮೀನುಗಾರಿಕೆ ನಾಶವಾಗುವ ಆತಂಕದಲ್ಲಿ ಮೀನುಗಾರರು ಅದನ್ನು ವಿರೋಧಿಸುತ್ತಿದ್ದಾರೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಅಲೆ ತಡೆಗೋಡೆ ಕಾಮಗಾರಿಗೆ ಸೋಮವಾರ ಚಾಲನೆ‌ ನೀಡಲಾಗಿತ್ತು. ಕಾಮಗಾರಿ ನಿಲ್ಲಿಸುವಂತೆ ಮೀನುಗಾರರು ನಡೆಸಿದ ಯತ್ನ ವಿಫಲವಾಗಿತ್ತು. ಇದರಿಂದ ಮೀನುಗಾರರು ನಿರಂತರ‌ ಪ್ರತಿಭಟನೆ ಮುಂದುವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 9 =
Remember me
