ಬೆಂಗಳೂರು:ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಬಂಧನ ಖಂಡಿಸಿ ಕರವೇ ಹೋರಾಟಗಾರರು, ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದದ್ದಾರೆ.
ರಾಜ್ಯದಲ್ಲಿ ಇಂಗ್ಲಿಷ್ ಲಕ ವಿರುದ್ಧ ಸಮರ ಸಾರಿರುವ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್‌ನಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಜಾಥಾ ಆರಂಭಿಸಿದ್ದರು. ಜಾಥಾ ಮುಂದುವರಿದಂತೆ ತೀವ್ರ ಇದು ಸ್ವರೂಪ ಪಡೆದುಕೊಂಡಿತು. ಪ್ರತಿಭಟನಾಕಾರರು ಆಂಗ್ಲ ನಾಮಕ ಧ್ವಂಸಗೊಳಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರವೇ ಮುಖಂಡರನ್ನು ಬಂಧಿಸಿ ಬಿಎಂಟಿಸಿ ಬಸ್‌ನಲ್ಲಿ ಕರೆದೊಯ್ಯಲಾಯಿತು. ರಾತ್ರಿ ಪೊಲೀಸ್ ವಾಹನ ಚಾಲನಾ ಮತ್ತು ಸಂರಕ್ಷಣಾ ಶಾಲಾ ಒಳಭಾಗದಲ್ಲಿ ಕೂರಿಸಿದ್ದರು. ನಾರಾಯಣಗೌಡ ಸೇರಿ 53 ಹೋರಾಟಗಾರರ ವಿರುದ್ಧ ಬೆಂಗಳೂರಿನ ಕಬ್ಬನ್‌ಪಾರ್ಕ್ ಸೇರಿ ವಿವಿಧ ಠಾಣೆಗಳಲ್ಲಿ 10 ಎಫ್​​ಐಆರ್ ದಾಖಲಾಗಿತ್ತು. ಇವರೆಲ್ಲರನ್ನೂ ಬಂಧಿಸಿದ್ದ ಪೊಲೀಸರು, ಬುಧವಾರ ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾರಾಯಣಗೌಡ ಸೇರಿ ಹೋರಾಟಗಾರರನ್ನು ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಯಿತು.
ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಸನ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಕರವೇ ಘಟಕಗಳು ವಾಹನಗಳ ತಡೆದು ಹೆದ್ದಾರಿಯಲ್ಲೇ ಪ್ರತಿಭಟಿಸಿ ಸರ್ಕಾರ ವಿರುದ್ಧ ೋಷಣೆ ಕೂಗಿದರು. ಹೋರಾಟದ ಸಂದರ್ಭದಲ್ಲಿ ಖಾಕಿ ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟವೂ ನಡೆಯಿತು. ಪ್ರತಿಭಟನೆಯಿಂದಾಗಿ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತು. ನಿಗದಿತ ಗಡುವುನೊಳಗೆ ವಾಣಿಜ್ಯ ಮಳಿಗೆಗಳು,ಮಾಲ್‌ಗಳ ಹಾಗೂ ಅಂಗಡಿ ಮುಂಗಟ್ಟುಗಳು ಕನ್ನಡ ನಾಮಲಕಗಳನ್ನು ಅಳವಡಿಸಬೇಕು. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು. ಹೋರಾಟಗಾರರನ್ನು ಜೈಲಿಂದ ಬಿಡುಗಡೆಗೊಳಿಸಿ ಪ್ರಕರಣ ವಾಪಸ್ ಪಡೆಯಬೇಕೆಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.ಕರವೇ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ನಾವೇನು ಭಯೋತ್ಪಾದಕರಾ? ನಾಡು, ನುಡಿ, ನೆಲ, ಜಲ, ಕನ್ನಡದ ಬಗ್ಗೆ ಭಾರಿ ಅಭಿಮಾನ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್ ಇಲಾಖೆ ಕನ್ನಡಪರ ಹೋರಾಟಗಾರರ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಿದ್ದರೂ ಸಹಿಸಿಕೊಂಡಿದ್ದಾರೆ. ಗೃಹಸಚಿವರ ಏನು ಮಾಡುತ್ತಿದ್ದಾರೆ. ಹೋರಾಟಗಾರರನ್ನು ಯಾವುದೇ ಸರ್ಕಾರಗಳು ಇಷ್ಟು ಕೀಳಮಟ್ಟಕ್ಕೆ ನೋಡಿಕೊಂಡಿರಲಿಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದರು.
ಸಿ ಆ್ಯಂಡ್ ಆರ್ ನಿಯಮಾವಳಿ ತಿದ್ದುಪಡಿ ಕರಡು ಪ್ರಕಟಿಸಿ: ಮಹಾನಗರ ಪಾಲಿಕೆ ನೌಕರರ ಸಂಘ ಒತ್ತಾಯ
ಆಂದೋಲಕ್ಕೆ ನನ್ನ ಬೆಂಬಲ:ಕನ್ನಡ ಪರ ಆಂದೋಲಕ್ಕೆ ನನ್ನ ಬೆಂಬಲ ಇದೆ. ಆಂದೋಲನ ಹಿಂಸಾತ್ಮಕವಾಗದೇ ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ಆಂದೋಲನ ಸೂಕ್ತವಾಗಿ ಇರಬೇಕು. ಸರ್ಕಾರ ಪರಿಶೀಲಿಸಬೇಕು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಗತಿಯಲ್ಲಿ ನಡೆಸೇಕು. ಆಗ ಈ ರೀತಿಯ ಘಟನೆಗಳು ನಡೆಯಲ್ಲ. ಕನ್ನಡ ಅಗ್ರಸ್ಥಾನದಲ್ಲಿ ಇರಬೇಕೆಂದು ಕೇಳುವುದರಲ್ಲಿ. ತಪ್ಪಿಲ್ಲ. ರಾಜ್ಯದಲ್ಲಿ ಕನ್ನಡ ಅಗ್ರಸ್ಥಾನದಲ್ಲೇ ಇರಬೇಕು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ನಾಮಫಲಕದಲ್ಲಿ ಕನ್ನಡ ಅಗ್ರ ಸ್ಥಾನದಲ್ಲಿ ಇರಬೇಕೆಂದು ಕಾನೂನು ಇದೆ. ಮೊದಲು ಕನ್ನಡ, ನಂತರ ಇಂಗ್ಲಿಷ್, ಹಿಂದಿ ಇರಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರಿ ಇಲಾಖೆಗಳು ಸರಿಯಾಗಿ ಕಾನೂನು ಜಾರಿ ತಂದಿದ್ದರೆ ಇಂಥ ಪರಿಸ್ಥಿತಿ ಇರುತ್ತಿರಲಿಲ್ಲ. ಸರ್ಕಾರ ಸರಿಯಾಗಿ ಕಾನೂನು ಕ್ರಮವಹಿಸಿದ್ರೆ ಹೀಗೆ ಆಗುತ್ತಿರಲಿಲ್ಲ. ಕರ್ನಾಟಕ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಕನ್ನಡ ನಾಮಫಲಕ ಹಾಕಿ ಅನ್ನುವುದೇ ನಾಚಿಕೆಯ ಸಂಗತಿ. ಇದನ್ನು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರ ಬದ್ಧತೆ ತೋರಿಸಬೇಕು ಎಂದರು.
ನಾಡಿದ್ದು ಕನ್ನಡ ಉಳಿಸಿ,ಬೆಳೆಸಿ ಚಳವಳಿ:ಕನ್ನಡ ಒಕ್ಕೂಟದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಡಿ.30ರಿಂದ ನಗರದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ನಡೆಯಲಿದೆ. ಕನ್ನಡದಲ್ಲೇ ಕಡ್ಡಾಯವಾಗಿ ನಾಮಫಲಕಗಳು ಇರಲೇಬೇಕು. ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಯಲೇಬೇಕು. ಪದವೀಧರರಿಗೆ ಉದ್ಯೋಗ ನೀಡಲೇಬೇಕು. ಪರಭಾಷೆಯವರ ದಾಂಧಲೆ ನಿಲ್ಲಲೇಬೇಕು. ರೈಲ್ವೆ, ಬ್ಯಾಂಕುಗಳಲ್ಲಿ ಕನ್ನಡ ಬೇಕು. ಐಟಿ- ಬಿಟಿಗಳಲ್ಲಿ ಹಾಗೂ ಅಂಗಡಿ ಮಾಲ್‌ಗಳಲ್ಲಿ ಕನ್ನಡ ಇರಲೇಬೇಕು. ಹಿಂದಿ ಹೇರಿಕೆ ಬೇಡವೇ ಬೇಡ. ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದಲ್ಲೇ ತೀರ್ಪು ಬರಬೇಕೆಂದು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × four =
Remember me
