ಬೆಂಗಳೂರು ಬ್ಯೂಟಿಷಿಯನ್ ವುಮೇನ್ ಟ್ರಸ್ಟ್. ಬ್ಯೂಟಿಷಿಯನ್‌ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜುಲೈ 26ರಂದು ನಗರದ ಫ್ರೀಡ್‌ಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಸವಿತಾ ನಾಗೇಶ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಬ್ಯೂಟಿಷಿಯನ್ ವೃತ್ತಿಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಮಹಿಳಾ ಬ್ಯೂಟಿಷಿಯನ್, ಪುರುಷ ಬ್ಯೂಟಿಷಿಯನ್, ಮೇಕಪ್ ಆರ್ಟಿಸ್ಟ್‌ಗಳು ಹಾಗೂ ಕರ್ನಾಟಕ ಸವಿತಾ ಸಮಾಜದ ಹೇರ್ ಡ್ರೆಸ್ಸರ್ಸ್‌ಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಸದ್ಯ ಈ ವೃತ್ತಿಯಲ್ಲಿ ಅವಲಂಭಿತರಾದವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಶುಕ್ರವಾರ ಬೆಳಗ್ಗೆ 9.30ಕ್ಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಬ್ಯೂಟಿಷಿಯನ್‌ಗಳಿಗೆ ಯಾವುದೇ ಐಡೆಂಟಿಟಿ ಇಲ್ಲ. ಈಗಾಗಿ ಸರ್ಕಾರ ಕಾರ್ಮಿಕ ವರ್ಗದವಿರಿಗೆ ನೀಡಿರುವ ಮಾದರಿಯಲ್ಲೆ ನಮಗೂ ಗುರುತಿನ ಕಾರ್ಡ್ ನೀಡಬೇಕು. ಬ್ಯೂಟಿ ಪಾರ್ಲ್‌ರ್‌ಗಳಿಗೆ ಇಎಸ್‌ಐ ಮತ್ತು ಪಿ.ಎ್ನ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸರ್ಕಾರದಿಂದ ಸಬ್ಸಿಡಿ ಲೋನ್‌ಗಳನ್ನು ನೀಡುವುದರ ಜತೆಗೆ ಎಲ್ಲ ಪಾರ್ಲ್‌ರಗಳಲ್ಲಿಯೂ ಪ್ರತಿಯೊಂದು ಸೇವೆಗೂ ನಿಗಧಿತ ದರಗಳನ್ನು ನಿಗದಿಪಡಿಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್‌ನ ಕಾರ್ಯದರ್ಶಿ ಸುಧಾ ಶಾಮ್ ಮಾತನಾಡಿ ರಾಜ್ಯದೆಲ್ಲೆಡೆ ಎಲ್ಲಂದರಲ್ಲಿ ಪಾರ್ಲ್‌ರಗಳನ್ನು ತೆರೆಯುತ್ತಿರುವುದರಿಂದ ಬ್ಯಟಿಷಿಯನ್‌ಗಳ ಮಧ್ಯೆಯೇ ಪೈಪೋಟಿ ಎದುರಾಗುತ್ತಿದೆ. ಹಾಗಾಗಿ ಸರ್ಕಾರ ಒಂದು ಪಾರ್ಲ್‌ರ್‌ನಿಂದ ಮತ್ತೊಂದು ಪಾರ್ಲ್‌ರ್‌ಗೆ ಕನಿಷ್ಠ 2 ಕಿ.ಲೋ ಮೀಟರ್ ಅಂತರ ನಿಗದಿಪಡಿಸಿದರೆ ಇಬ್ಬರಿಗೂ ಸಹಕಾರಿಯಾಗಲಿದೆ. ಜತೆಗೆ 3ರಿಂದ 6 ತಿಂಗಳು ಬ್ಯೂಟಿ ಪಾರ್ಲ್‌ರ್ ತರಬೇತಿ ಪಡೆದ ಬ್ಯೂಟಿಷಿಯನ್‌ಗಳು ಕನಿಷ್ಠ 1 ವರ್ಷ ಸೇವೆ ಸಲ್ಲಿಸಿದ ನಂತರವಷ್ಟೆ ಬ್ಯೂಟಿ ಪಾರ್ಲ್‌ರ್ ತೆರಯಲು ಬಿಬಿಎಂಪಿಯಿಂದ ಲೈಸನ್ಸ್ ನೀಡಬೇಕು ಎಂದು ಹೇಳಿದರು.
ಉತ್ತಮ ತರಬೇತಿ ಪಡೆಯದ ಹಾಗೂ ಸೌಂಧರ್ಯ ವರ್ಧಕಗಳ ಬಗ್ಗೆ ಮಾಹಿತಿ ಇಲ್ಲದ ಕೆಲವರು ಬ್ಯೂಟಿ ಪಾರ್ಲ್‌ರಗಳನ್ನು ತೆರೆದಿದ್ದಾರೆ.ಕೆಲವೆಡೆ ಕಳಪೆ ಸೌಂದರ್ಯ ವರ್ಧಕಗಳನ್ನು ಬಳಸಿರುವುದರಿಂದ ಗ್ರಾಹಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪ್ರತಿಯೊಂದು ಪಾರ್ಲ್‌ರ್‌ಗೂ ಭೇಟಿ ನೀಡಿ ಅಲ್ಲಿನ ಗುಣಮಟ್ಟವನ್ನು ಪರಿಶೀಲಿಸಿದರೆ ಗ್ರಾಹಕರಿಗೆ ಅನುಕೂಲವಾಗುವುದರ ಜತೆಗೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಎಂದ ಅವರು, ಸರ್ಕಾರವು 50 ವರ್ಷ ಮೇಲ್ಪಟ್ಟ ಹಾಗೂ 20 ರಿಂದ 30 ವರ್ಷ ಬ್ಯೂಟಿಷಿಯನ್ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರಿಗೆ ಇಂತಿಷ್ಟು ಪೆನ್ಶನ್ ನಿಗಧಿಪಡಿಸಬೇಕು ಎಂದು ಮನವಿ ಮಾಡಿದರು.
ಶುಕ್ರವಾರ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬ್ಯೂಟಿಷಿಯನ್‌ಗಳು ಆಗಮಿಸುತ್ತಿದ್ದಾರೆ.ಜತೆಗೆ ಸವಿತಾ ಸಮಾಜದವರು ಕೈಜೋಡಿಸಲಿದ್ದು, ರಾಜ್ಯದಲ್ಲಿರುವ ಮತ್ತಷ್ಟು ಬ್ಯೂಟಿಷಿಯನ್‌ಗಳು, ಮೇಕಪ್ ಆರ್ಟಿಸ್ಟ್‌ಗಳು ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಟ್ರಸ್ಟ್ ಉಪಾಧ್ಯಕ್ಷೆ ಸುಜಾತ,ಖಜಾಂಚಿ ಗೌರಮ್ಮ, ಕರ್ನಾಟಕ ಸವಿತಾ ಸಮಾಜದ ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 18 =
Remember me
