ಬೆಂಗಳೂರು:ಮಣಿಪುರದ ಮೂಲ ನಿವಾಸಿಗಳಾದ ಮೈತೇಯಿ ಸಮುದಾಯದ ಮೇಲೆ ಕುಕಿ ಕೆಸ್ತರು ವ್ಯವಸ್ಥಿತವಾಗಿ ಹಿಂಸಾಚಾರದ ಮೂಲಕ ಆಕ್ರಮಣ ಮಾಡಿರುವುದು ಖಂಡನೀಯ. ಹಿಂಸಾಚಾರದಿಂದ ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿಗೆ ಗಲಭೆಕೋರರ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ರಾಷ್ಟ್ರ ರಣಾ ಪಡೆಯ ಪುನಿತ್​ ಕೆರೆಹಳ್ಳಿ ಮೇಲೆ ಹಾಕಿರುವ ಗೂಂಡಾ ಕಾಯಿದೆಯನ್ನು ರದ್ದು ಮಾಡಬೇಕು. ಹಾಗೂ ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮತ್ತೆ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್​ನಲ್ಲಿ ಭಾನುವಾರ ಹಿಂದು ಸಂಟನೆಗಳು ಒಂದಾಗಿ ಪ್ರತಿಭಟನೆ ನಡೆಸಿತು.
ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹರಿಯಾಣದ ಮೇವಾತ ನುಹ್​ನಲ್ಲಿ ಸಾವಿರಾರು ಹಿಂದು ಭಕ್ತರಮತಾಂಧರು ದಾಳಿ ಮಾಡಿ, 7 ಜನರನ್ನು ಹತ್ಯೆಗೈದು, ನೂರಾರು ಹಿಂದುಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳ ಹೆಸರಿನಲ್ಲಿ ಹಿಂದುಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಸರಕಾರ ಹಿಂದುಗಳನ್ನೇ ಗುರಿಯಾಗಿಸಿ ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಬಂಧನ ಮಾಡುತ್ತಿದೆ. ಅಲ್ಲದೇ ಇತ್ತಿಚೆಗೆ ಸರಕಾರ ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ತೆರವುಗೊಳಿಸಿರುವುದು ಖಂಡನೀಯ. ಇದು ಸಂಪೂರ್ಣ ಹಿಂದು ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು, ಕೂಡಲೇ ಪ್ರತಿಮೆಯನ್ನು ಪುನರ್ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ:ಕಳ್ಳತನ ಶಂಕೆ; ಅಪ್ರಾಪ್ತ ವಯಸ್ಕರನ್ನು ಅಮಾನುಷವಾಗಿ ಥಳಿಸಿದ ದುರುಳರು
ರಾಷ್ಟ್ರ ರಣಾ ಪಡೆಯ ಪೂರ್ಣಿಮಾ ಬಾರಿಮನಿ ಮಾತನಾಡಿ, ರಾಷ್ಟ್ರ ರಣಾ ಪಡೆಯ ಪುನೀತ್​ ಕೆರೆಹಳ್ಳಿ ಅನಾಥ ಮಕ್ಕಳ ಶಿಣಕ್ಕಾಗಿ ಸಹಾಯ ಮಾಡುತ್ತಿದ್ದರು. 5 ಜನ ಕ್ಯಾನ್ಸರ್​ ಪೀಡಿತರ ಚಿಕಿತ್ಸೆಯ ರ್ಖಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ದೇವಸ್ಥಾನಗಳ ಸ್ವಚ್ಚತೆ, ಗೋವುಗಳ ರಣೆ, ಮುಂತಾದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದರು. ಅವರ ಮೇಲೆ ದ್ವೇಷದಿಂದ ಗೂಂಡಾ ಕಾಯಿದೆಯನ್ನು ಹಾಕಿರುವುದು ಖಂಡನೀಯ. ಕೂಡಲೇ ಗೂಂಡಾ ಕಾಯಿದೆಯನ್ನು ರದ್ದು ಮಾಡಿ, ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮಣಿಪುರದಲ್ಲಿ ನಡೆದ ಗಲಭೆಯಲ್ಲಿ 141 ಜನರ ಹತ್ಯೆಯಾಗಿದ್ದು, ಅನೇಕ ಹಿಂದುಗಳ ಮನೆ, ದೇವಸ್ಥಾನಗಳನ್ನು ಸುಟ್ಟು ಹಾಕಲಾಗಿದೆ. ಜೀವಭಯದಿಂದ ಮೈತ್ರೇಯಿ ಸಮುದಾಯದವರು ಗ್ರಾಮ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಮೊಹರಂ ಮೆರವಣಿಗೆಯಲ್ಲಿ ವ್ಯವಸ್ಥಿತವಾಗಿ ಹಿಂಸಾಚಾರದ ಮೂಲಕ ಹಿಂದುಗಳ ಮೇಲೆ ಹಲ್ಲೆ ನಡೆಯಿತು. ಈ ಗಲಭೆಯ ಬಗ್ಗೆ ಪ್ರಸಾರವಾದ ಎಲ್ಲ ವಿಡಿಯೋಗಳನ್ನು ಸಂಗ್ರಹಿಸಿ, ಅದರ ಆಧಾರದ ಮೇಲೆ ಸ್ಮೂ ಪ್ರದೇಶಗಳಲ್ಲಿ ಕೋಬಿಂಗ್​ ಕಾರ್ಯಾಚರಣೆ ನಡೆಸಬೇಕು. ದಂಗೆಯಲ್ಲಿ ಭಾಗಿಯಾದ ರೋಹಿಂಗ್ಯಾ, ಬಾಂಗ್ಲಾದೇಶಿ ಮುಸಲ್ಮಾನರನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು. ಈ ಪೂರ್ವಯೋಜಿತ ಗಲಭೆ ಅಥವಾ ಹಿಂಸಾಚಾರವನ್ನು ತಡೆಯುವಲ್ಲಿ ಪೋಲೀಸ್​&ಆಡಳಿತಾತ್ಮಕ ಅಧಿಕಾರಿಗಳ ಸಂಪೂರ್ಣ ವೈಫಲ್ಯದ ಬಗ್ಗೆ, ಅವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಗಲಭೆಕೋರರ ಮೇಲೆ ಯುಎಪಿಎ, ಸಂಟಿತ ಅಪರಾಧ, ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿಯ ಮೋಹನ್​ ಗೌಡ ಒತ್ತಾಯಿಸಿದರು.
ರಾಷ್ಟ್ರ ಧರ್ಮ ಸಂಟನೆಯ ಸಂತೋಷ್​ ಕೆಂಚಾಂಬಾ, ಹಿಂದು ಜನಜಾಗೃತಿ ಸಮಿತಿ ಹಿಂದವೀ ಜಟ್ಕಾ ಮೀಟ್​ನ ಮುನೇಗೌಡ, ಶಿವಪ್ರಸಾದ್​, ಹಿಂದು ರಾಷ್ಟ್ರ ರಣಾ ಪಡೆಯ ಅಧ್ಯ ರಾಮಕೃಷ್ಣಪ್ಪ, ಶಿವಗರ್ಜನೆ ಸೇನೆ ಅಧ್ಯ ಪ್ರವಿಣ ಮಾನೆ, ರಾಷ್ಟ್ರ ರಣಾ ಪಡೆಯ ಪೂರ್ಣಿಮಾ ಬಾರಿಮನಿ, ರಾಷ್ಟ್ರೀಯ ಹಿಂದು ಪರಿಷದ್​ ಅಧ್ಯ ವಿಕ್ರಮ ಶೆಟ್ಟಿ, ರಾಷ್ಟ್ರ ರಾ ಸೇನೆಯ ಸುರೇಶ್​ ಗೌಡ, ನ್ಯಾಯವಾದಿ ದೊರೆರಾಜು ಸೇರಿದಂತೆ ವಿವಿಧ ಹಿಂದು ಸಂಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
