ಬಾಗಲಕೋಟೆ:ಕಬ್ಬು ಬೆಲೆ ನಿಗದಿ ವಿಚಾರವಾಗಿ ಬಾಗಲಕೋಟೆಯ ಸಕ್ಕರೆ ಕಾರ್ಖಾನೆಯ ಬಳಿ ನಡೆಯುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತೆರಳಿದ್ದು, ಕಲ್ಲು ತೂರಾಟವೂ ನಡೆದಿದೆ. ಮಾತ್ರವಲ್ಲ, ಇನ್​ಸ್ಪೆಕ್ಟರ್ ಸೇರಿ ಮೂವರು ಪೊಲೀಸರಿಗೆ ಗಾಯವಾಗಿದೆ.
ಬಾಗಲಕೋಟೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಬೆಲೆ ನಿಗದಿ ವಿಚಾರವಾಗಿ ರೈತರ ಪ್ರತಿಭಟನೆ ನಡೆಸುತ್ತಿದ್ದು, ಅದು ಇದೀಗ ವಿಕೋಪಕ್ಕೂ ತಿರುಗಿದೆ. ಪ್ರತಿಭಟನಾಕಾರರು ಎಸೆದ ಕಲ್ಲು ಸರ್ಕಲ್ ಪೊಲೀಸ್ ಇನ್​ಸ್ಪೆಕ್ಟರ್ ಎದೆಗೇ ಬಿದ್ದಿದ್ದು, ಅವರೂ ಸೇರಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ರಬಕವಿ-ಬನಹಟ್ಟಿಯ ಮಠಪತಿ ಗಾಯಗೊಂಡಿರುವ ಇನ್​ಸ್ಪೆಕ್ಟರ್​, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಾಗಲಕೋಟೆ ಎಸ್​ಪಿ ಜಯಪ್ರಕಾಶ್ ಧಾವಿಸಿದ್ದಾರೆ.
ಇದನ್ನೂ ಓದಿ:ಮರವೇರಿ ಬಾಯಿ ಬಡಿದುಕೊಂಡು ಕೆಳಕ್ಕೆ ಬೀಳೋದಾಗಿ ಹೇಳಿ ಹೆದರಿಸಿದ ರೈತ!; ಪ್ರತಿಭಟನೆ ವೇಳೆ ಅವಾಂತರ..
ಕಲ್ಲು ತೂರಾಟ ಹಾಗೂ ಕಬ್ಬು ಬೆಳೆಗಾರರ ಗದ್ದಲದಲ್ಲಿ ಕಾರ್ಖಾನೆಯ ಅನೇಕ ವಸ್ತುಗಳು ಜಖಂಗೊಂಡಿಗೆ. ಕಾರ್ಖಾನೆ ಗೇಟ್, ಬಾಗಿಲು, ಕಿಟಕಿ, ಗಾಜುಗಳು ಹಾನಿಗೀಡಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ಕಾರ್ಖಾನೆಯವರು ಪ್ರತಿ ಟನ್​ಗೆ 2,900 ಬೆಲೆ ಘೋಷಣೆ ಮಾಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿದೆ.
Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ
ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
