
ಬೆಂಗಳೂರು:ಇನ್ನು ಒಂದು ತಿಂಗಳ ಅವಧಿಯಲ್ಲಿ ನಿಗಮಕ್ಕೆ ಸುಮಾರು 2೦೦ ಹೊಸ ಬಸ್ಸುಗಳು ಬರಲಿದ್ದು, ಈ ಎಲ್ಲಾ ವಾಹನಗಳು ವಿನೂತನ ವಿನ್ಯಾಸ ಒಳಗೊಂಡಿರುವ ‘ಪ್ರೋಟೋ ಟೈಪ್‌‘ ಮಾದರಿಯಲ್ಲಿ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ಕೆಎಸ್‌ಆರ್‌ಟಿಸಿ ವತಿಯಿಂದ ‘ಪಾಯಿಂಟ್ ಟು ಪಾಯಿಂಟ್ ಮತ್ತು ಎಕ್ಸ್‌ಪ್ರೆಸ್’(ವೇಗದೂತ) ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ‘ಪ್ರೋಟೋ ಟೈಪ್’ ವಾಹನ ವಿನ್ಯಾಸವನ್ನು ಸೋಮವಾರ ಶಾಂತಿನಗರದಲ್ಲಿರುವ ಕೆಸ್‌ಆರ್‌ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಪರಿಶೀಲಿಸಿದ ಬಳಿಕ ಮಾತನಾಡಿದರು.ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ವಾಹನಗಳನ್ನು ಕಾರ್ಯಾಚರಣೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳನ್ನು ತರಲಾಗಿದೆ. ಈ ನೂತನ ಬಸ್‌ಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳ ಅವಧಿಯಲ್ಲಿ ಸುಮಾರು ೨೦೦ ಹೊಸ ಬಸ್ಸುಗಳು ಬರಲಿದ್ದು, ಇನ್ಮುಂದೆ ಬರಲಿರುವ ಎಲ್ಲಾ ಹೊಸ ವಾಹನಗಳು ಈ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ. ಮೊದಲ ಹಂತದಲ್ಲಿ ೨೦೦ ಹೊಸ ಬಸ್‌ಗಳು ನಿಗಮಕ್ಕೆ ಬರಲಿದೆ ಎಂದು ತಿಳಿಸಿದರು.ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನವನ್ನು ಮೆ. ಕೆ.ಎಂ.ಎಸ್.ಕೋಚ್ ಬಿಲ್ಡರ್ಸ್ ಅವರು ನಿರ್ಮಾಣ ಮಾಡಿದ್ದಾರೆ. ಈ ವಾಹನವು ಹಲವು ವಿಶಿಷ್ಟತೆಗಳನ್ನು ಹೊಂದಿದೆ ಎಂದು ವಿವರಿಸಿದರು.ಪ್ರೋಟೋ ಟೈಪ್ ಬಸ್‌ನ ವಿಶೇಷತೆ:ವಾಹನದ ಎತ್ತರ-೩೪೨೦ ಮಿ.ಮಿ., ಆಸನಗಳ ಸಂಖ್ಯೆ-೫೨, ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುತ್ತದೆ. ಕಿಟಕಿಯು ದೊಡ್ಡದಾದ ಟಿಂಟೆಡ್ ಗಾಜುಗಳನ್ನು ಹೊಂದಿರಲಿದೆ. ವಿನೂತನ ವಿನ್ಯಾಸದ ಒಳಾಂಗಣದ ಲಗೇಜ್ ಕ್ಯಾರಿಯರ್ ಇರಲಿದೆ. ಎಲ್.ಇ.ಡಿ ಒಳಾಂಗಣದ ದೀಪ ಇರುತ್ತದೆ. ಎಲ್.ಇ.ಡಿ ಮಾರ್ಗ ಫಲಕ ಅಳವಡಿಕೆ ಇರಲಿದೆ. ಆಸನಗಳ ಮಧ್ಯೆ ಹೆಚ್ಚಿನ ಸ್ಥಳಾವಕಾಶ ಸೇರಿ ಇತರೆ ಹಲವು ವಿಶೇಷತೆಗಳನ್ನು ಈ ನೂತನ ಬಸ್‌ಗಳು ಒಳಗೊಂಡಿವೆ.ಸೋಮವಾರ ಸಾರಿಗೆ ಸಚಿವರು ಪರಿಶೀಲಿಸಲಾದ ‘ಪ್ರೋಟೋ ಟೈಪ್’ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದು,ಮುಂಬರುವ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸವನ್ನು ಹೊಂದಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್,ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
