ಕಲಬುರಗಿ:ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದ ರೂವಾರಿ ಬಿಜೆಪಿ ನಾಯಕಿ ಮತ್ತು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರನ್ನು ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನ್ಯಾಯಾಂಗ ವಶಕ್ಕೆ ನೀಡಿ ಹೊರವಲಯದಲ್ಲಿರುವ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.
ಸಿಐಡಿ ಕಸ್ಟಡಿ ಮುಗಿದಿದ್ದರಿಂದ ಸಂಜೆವರೆಗೂ ವಿಚಾರಣೆ ನಡೆಸಿದ ಬಳಿಕ ಜಿಮ್್ಸ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರá-ಪಡಿಸಲಾಯಿತು. ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. ದಿವ್ಯಾ ಹಾಗರಗಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.
21 ದಿನಗಳಿಂದ ದಿವ್ಯಾ ಪತಿ ರಾಜೇಶ ಹಾಗರಗಿ ಜೈಲಿನಲ್ಲಿದ್ದಾರೆ. ಸೋಮವಾರ ಸಂಜೆ ದಿವ್ಯಾ ಸಹ ಅದೇ ಜೈಲು ಸೇರಿದ್ದರಿಂದ ಪತಿ-ಪತ್ನಿ ಇಬ್ಬರೂ ಪರಸ್ಪರ ಭೇಟಿಯಾಗುವಂತಹ ಸನ್ನಿವೇಶ ನಿರ್ವಣಗೊಂಡಿದೆ.
ಮೇತ್ರೆಗೆ ಪ್ರಶ್ನೆ ಕೊಡುತ್ತಿದ್ದ ಕಾಶೀನಾಥ:ಕಲಬುರಗಿ ಜ್ಞಾನಜ್ಯೋತಿ ಶಾಲೆ ಮುಖ್ಯ ಶಿಕ್ಷಕ, ಅಕ್ರಮದ ಡೀಲ್ ಮಾಸ್ಟರ್ ಕಾಶೀನಾಥ ಚಿಲ್, ಕೇಂದ್ರದಲ್ಲಿನ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆ ಶುರುವಾಗುವ ಮುನ್ನ ಶಾಲೆಯಲ್ಲೇ ಜೆರಾಕ್ಸ್ ಮಾಡಿ ಫಿಂಗರ್ ಪ್ರಿಂಟ್ ವಿಭಾಗದ ಆನಂದ ಮೇತ್ರೆಗೆ ನೀಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಮೇತ್ರೆ ಜೆರಾಕ್ಸ್ ಪ್ರತಿಯನ್ನು ಕೇಂದ್ರದ ಹೊರಗಡೆ ಇರುತ್ತಿದ್ದ ಕಿಂಗ್​ಪಿನ್ ಕಡೆಯá-ವರಿಗೆ ತಲುಪಿಸುತ್ತಿದ್ದ. ಈ ರೀತಿ ಪ್ರಶ್ನೆಪತ್ರಿಕೆ ಲೀಕ್ ದಂಧೆ ಸದ್ದಿಲ್ಲದೆ ಪೊಲೀಸರ ಸುಪರ್ದಿನಲ್ಲೇ ನಡೆಯುತ್ತಿತ್ತು. ಮೇತ್ರೆ ಮತ್ತು ಚಿಲ್ ಇಬ್ಬರು ಪ್ರಶ್ನೆಪತ್ರಿಕೆ ಲೀಕ್ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದರು.
ಕಲಬುರಗಿ ಜ್ಞಾನಜ್ಯೋತಿ ಶಾಲೆ ಕೇಂದ್ರದಲ್ಲಿ ಜರುಗಿದ ಪಿಎಸ್​ಐ ಪರೀಕ್ಷೆ ಮುಗಿದ ಬಳಿಕ ಶಾಲೆ ಸಿಬ್ಬಂದಿ, ಆಡಳಿತ ಮಂಡಳಿಯವರು, ಪೊಲೀಸ್ ಅಧಿಕಾರಿಗಳು ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಹೀಗೆ ಎಲ್ಲರೂ ಸೇರಿ ಗ್ರೂಪ್ ಪೋಟೋ ತೆಗೆಸಿಕೊಂಡಿದ್ದಾರೆ. ಈಗ ಅಕ್ರಮ ದಂಧೆ ಯಶಸ್ಸಾಗಿದ್ದಕ್ಕೆ ಪೋಟೋ ಕ್ಲಿಕ್ಕಿಸಿಕೊಂಡಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.
ಜಾಮೀನು ಅರ್ಜಿ ತೀರ್ಪು ನಾಳೆ:ಪ್ರಕರಣದಲ್ಲಿ ಬಂಧಿತರಾದ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ್, ವಿಶಾಲ ಶಿರೂರ, ದಿವ್ಯಾ ಹಾಗರಗಿ ಅವರಿಗೆ ಆಶ್ರಯ ನೀಡಿದ ಮಹಾರಾಷ್ಟ್ರದ ಮರಳು ದಂಧೆಕೋರ ಸುರೇಶ ಕಾಟೆಗಾಂವ್, ಕಾಳಿದಾಸ, ದಿವ್ಯಾ ಕಾರು ಚಾಲಕ ಸದ್ದಾಂ ಇತರರ ಜಾಮೀನು ಅರ್ಜಿಯನ್ನು ಸೋಮವಾರ 3ನೇ ಜೆಎಂಎಫ್​ಸಿ ನ್ಯಾಯಾಲಯ ನ್ಯಾಯಾಧೀಶರು ವಿಚಾರಣೆ ನಡೆಸಿದ್ದು, ಬುಧವಾರ ತೀರ್ಪು ಪ್ರಕಟಗೊಳ್ಳಲಿದೆ.
ಸಾಗರ: ಪಿಎಸ್​ಐ ಹಗರಣದ ಕಿಂಗ್​ಪಿನ್ ಎನ್ನಲಾದ ದಿವ್ಯಾ ಹಾಗರಗಿ ಸಾಗರಕ್ಕೆ ಬಂದು ಬಿಜೆಪಿ ಪ್ರಮುಖ ನಾಯಕರೊಬ್ಬರನ್ನು ಭೇಟಿ ಮಾಡಿದ್ದರು. ಹಾಗಾಗಿ ಸಿಐಡಿ ಅಧಿಕಾರಿಗಳು ಸಾಗರ ಸೇರಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲೂ ತನಿಖೆ ನಡೆಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು. ದಿವ್ಯಾ ಹಾಗರಗಿ ತೀರ್ಥಹಳ್ಳಿಯಲ್ಲಿ ಎರಡು ದಿನ ಇದ್ದು ಗೃಹಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಂತರ ಸಾಗರಕ್ಕೆ ಬಂದು ಬಿಜೆಪಿಯ ಪ್ರಮುಖ ನಾಯಕರೊಬ್ಬರನ್ನು ಭೇಟಿ ಮಾಡಿದ್ದಾರೆ. ಹೀಗೆ ಭೇಟಿ ಮಾಡಿದ ಬಿಜೆಪಿ ಪ್ರಮುಖರೂ ಹಗರಣದ ಕಿಂಗ್​ಪಿನ್​ಗಳಲ್ಲಿ ಒಬ್ಬರಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ದಿವ್ಯಾ ಹಾಗರಗಿ ಸಾಗರಕ್ಕೆ ಬಂದು ಬಿಜೆಪಿ ಪ್ರಮುಖರೊಬ್ಬರನ್ನು ಭೇಟಿ ಮಾಡಿರುವ ವಿಷಯ ನನಗೆ ಗೊತ್ತಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.
ಪಿಎಸ್​ಐ ನೇಮಕಾತಿ ಹಗರಣದಲ್ಲಿ ಒಬ್ಬ ಕಾನ್​ಸ್ಟೇಬಲ್, ಡಿವೈಎಸ್ಪಿ ಅರೆಸ್ಟ್ ಮಾಡಿ ತನಿಖೆ ನಡೆಸುವುದು ಅಲ್ಲ. ಹದಿನೈದು ದಿನಕ್ಕೆ ಇದೆಲ್ಲ ಮುಗಿಸುತ್ತಾರೆ. ಹಿಂದೆ ಡ್ರಗ್​ಕೇಸ್ ಆಯಿತಲ್ಲ, ಹಾಗೆಯೇ ಆಗುತ್ತದೆ. ನಾನು ಹಿಟ್ ಆಂಡ್ ರನ್ ಮಾಡಲ್ಲ. ನಾನು ಈ ಸರ್ಕಾರವನ್ನು ಹತ್ತಿರದಿಂದ ನೋಡಿದ್ದೇನೆ. ಪ್ರಕರಣದಲ್ಲಿ ಕಿಂಗ್​ಪಿನ್ ಹಿಡಿಯುವ ಧೈರ್ಯ ಮಾಡುತ್ತಾರಾ?
|ಎಚ್.ಡಿ. ಕುಮಾರಸ್ವಾಮಿಮಾಜಿ ಸಿಎಂ
ಪಿಎಸ್​ಐ ನೇಮಕಾತಿ ಹಗರಣದಲ್ಲಿ ಒಬ್ಬ ಕಾನ್​ಸ್ಟೇಬಲ್, ಡಿವೈಎಸ್ಪಿ ಅರೆಸ್ಟ್ ಮಾಡಿ ತನಿಖೆ ನಡೆಸುವುದು ಅಲ್ಲ. ಹದಿನೈದು ದಿನಕ್ಕೆ ಇದೆಲ್ಲ ಮುಗಿಸುತ್ತಾರೆ. ಹಿಂದೆ ಡ್ರಗ್​ಕೇಸ್ ಆಯಿತಲ್ಲ, ಹಾಗೆಯೇ ಆಗುತ್ತದೆ. ನಾನು ಹಿಟ್ ಆಂಡ್ ರನ್ ಮಾಡಲ್ಲ. ನಾನು ಈ ಸರ್ಕಾರವನ್ನು ಹತ್ತಿರದಿಂದ ನೋಡಿದ್ದೇನೆ. ಪ್ರಕರಣದಲ್ಲಿ ಕಿಂಗ್​ಪಿನ್ ಹಿಡಿಯುವ ಧೈರ್ಯ ಮಾಡುತ್ತಾರಾ?
|ಎಚ್.ಡಿ. ಕುಮಾರಸ್ವಾಮಿಮಾಜಿ ಸಿಎಂ
ಬೆಂಗಳೂರು:ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಬಂಧಿತರಾಗಿದ್ದ 14 ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಸೋಮವಾರ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 11 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್​ಗೆ ಸಂಬಂಧಿಸಿದಂತೆ 14 ಮಂದಿ ಬಂಧಿತರ ಪೈಕಿ 11 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಭಾನುವಾರ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದ ಶಶಿಧರ್ ಹಾಗೂ ಕೇಶವಮೂರ್ತಿ ಎಂಬುವರನ್ನು ನ್ಯಾಯಾಲಯವು 10 ದಿನ ಸಿಐಡಿ ವಶಕ್ಕೆ ನೀಡಿದೆ. ಅಭ್ಯರ್ಥಿ ಮನುಕುಮಾರ್ ಎಂಬಾತನನ್ನು 4 ದಿನಗಳ ಕಾಲ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಪರು ಪರೀಕ್ಷೆ ಆಗಲಿ:ಪೊಲೀಸ್ ಇಲಾಖೆಯಲ್ಲಿ ಈ ರೀತಿ ಆಗುತ್ತಿರುವುದು ಅವಮಾನ. ನಾನು, ಅಜಯ್ಕುಮಾರ್ ಸಿಂಗ್ ಇದ್ದಾಗ ಈ ಓಎಂಆರ್ ಶೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೆವು. ಆದರೂ, ಈಗ ಅದನ್ನೂ ಮೀರಿ ಈ ರೀತಿ ಅಕ್ರಮ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲರ ಮಂಪರು ಪರೀಕ್ಷೆ ಮಾಡಿಸಬೇಕು. ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹೊರಟು ಹೋಗುತ್ತದೆ ಎಂದು ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಸುದ್ದಿಗಾರರಿಗೆ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − six =
Remember me
