ಬೆಂಗಳೂರು:ಪೊಲೀಸ್ ಸಬ್ ಇನ್​ಸ್ಪೆಕ್ಟರ್ ನೇಮಕ ಅಕ್ರಮದ ತನಿಖೆ ಆಡಳಿತ ಸೌಧಕ್ಕೇ ಸುರಂಗ ಕೊರೆದಿದೆ. ದಿನಕ್ಕೊಬ್ಬರಂತೆ ಆರೋಪಿಗಳ ಹೆಸರು ಹೊರಬರುತ್ತಿರುವ ಸಂದರ್ಭದಲ್ಲೇ ಹಗರಣದಲ್ಲಿ ಸಚಿವರೊಬ್ಬರ ಸಹೋದರನ ಹೆಸರು ತಳುಕು ಹಾಕಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಭೇಟಿಯ ಹಿಂದಿನ ದಿನವೇ ಈ ಬೆಳವಣಿಗೆ ನಡೆದಿರುವುದು ಸರ್ಕಾರ ಹಾಗೂ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿದೆ.
ಮತ್ತೊಂದೆಡೆ ಈ ಹಗರಣ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ದೋಷಾರೋಪಣೆ ನಡೆಸಿವೆ. ತನಿಖಾ ತಂಡ ಬೀಸಿದ ಬಲೆಗೆ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ರಾಜಕೀಯ ನಂಟನ್ನು ಹುಡುಕಿ, ಕೆದಕಿ ಪರಸ್ಪರ ಟೀಕಾ ಪ್ರಹಾರಕ್ಕಿಳಿದಿವೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ನಡುವೆಯೇ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರ ಸಹೋದರನ ಹೆಸರು ಹಗರಣದಲ್ಲಿ ಕೇಳಿ ಬಂದಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆೆ ತಲೆನೋವು ತರಿಸಿದೆ.
ಏನಿದು ಹೊಸ ವಿವಾದ?ಪಿಎಸ್​ಐ ನೇಮಕಾತಿ ತಾತ್ಕಾಲಿಕ ಪಟ್ಟಿ ಬರುವ ಮೊದಲೇ ಪಿಎಸ್​ಐ ಆಗಿರುವುದಾಗಿ ಹೇಳಿಕೊಂಡಿದ್ದ ಮಾಗಡಿ ಮೂಲದ ವಿ.ದರ್ಶನ್ ಗೌಡ ಈ ರಾಜಕೀಯ ವಿವಾದ ಕೇಂದ್ರ ಬಿಂದು. ದೈಹಿಕ ಪರೀಕ್ಷೆ ಪಾಸ್ ಮಾಡಿ ಲಿಖಿತ ಪರೀಕ್ಷೆಗೆ ತಯಾರಿ ನಡೆಸದೆಯೇ ಪ್ರಭಾವಿಗಳ ಮೂಲಕ ಅಧಿಕಾರಿಗಳನ್ನು ಸಂರ್ಪಸಿ 80 ಲಕ್ಷ ರೂ. ನೀಡಿ ಹುದ್ದೆ ಪಡೆಯುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆತನ ಹೆಸರೂ ಬಂದಿತ್ತು. ಇದೆಲ್ಲವನ್ನೂ ಉಲ್ಲೇಖಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ದೂರು ನೀಡಿದ್ದರು. ಈ ಬೆಳವಣಿಗೆ ಬಳಿಕ ಕಾಂಗ್ರೆಸ್ ನಾಯಕರು ಸಚಿವರ ಸಹೋದರನ ಹೆಸರು ಎಳೆದು ತಂದಿದ್ದಾರೆ.
ಅಪ್ಪು ಹುಟ್ಟಿದಾಗ್ಲೇ ಸೂಪರ್ ಸ್ಟಾರ್, ನಾವೆಲ್ಲಾ ಆಮೇಲೆ ಸ್ಟಾರ್ ಆದೋರು; ಶಿವಣ್ಣ ಭಾವುಕ ನುಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
