ಬೆಂಗಳೂರು:545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಮಾಗಡಿ ತಾಲೂಕಿನ ದರ್ಶನ್​ ಗೌಡ ಎಂಬಾತನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್‌ಐ ಪರೀಕ್ಷೆಯಲ್ಲಿ ದರ್ಶನ್​ ಗೌಡ 5ನೇ ರ್ಯಾಂಕ್​ ಪಡೆದಿದ್ದ. ದರ್ಶನ್ ಗೌಡ ಮಾಗಡಿ ತಾಲೂಕು ಜೆಡಿಎಸ್ ಮುಖಂಡರೂ ಆದ, ತಾಪಂ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಗೌಡರ ಮಗ. ಈತ ಪಿಎಸ್​ಐ ಕೆಲಸಕ್ಕಾಗಿ 80 ಲಕ್ಷ ಹಣ ಕೊಟ್ಟು ಡೀಲ್​ ಮಾಡಿಕೊಂಡಿದ್ದಾನೆ ಎಂದು ಆರಂಭದಲೇ ಆರೋಪ ಕೇಳಿಬಂದಿತ್ತು. ದರ್ಶನ್ ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳು, ಬಳಿಕ ಸಚಿವ ಅಶ್ವತ್ಥ ನಾರಾಯಣ್​ರ ಒತ್ತಡಕ್ಕೆ ಮಣಿದು ಬಿಟ್ಟು ಕಳಿಸಿದ್ರು ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು. ಇದೀಗ ದರ್ಶನ್ ಗೌಡನನ್ನು ಬಂಧಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್​.ಅಶ್ವತ್ಥನಾರಾಯಣ ಸಹೋದರ ಸತೀಶ್​ ಗೌಡ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ದರ್ಶನ್​ಗೌಡ ಎಂಬ ಅಭ್ಯರ್ಥಿಯಿಂದ 80 ಲಕ್ಷ ರೂ. ಪಡೆದಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಉಗ್ರಪ್ಪ ಆರೋಪಿಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕೂಡ ಪ್ರಭಾವಿ ಸಚಿವರ ತಮ್ಮನ ಮೂಲಕ ಮಾಗಡಿ ಮೂಲದ ಅಭ್ಯರ್ಥಿ ಹಣದ ವ್ಯವಹಾರ ಮಾಡಿದ್ದಾರೆ. ನಾವೆಲ್ಲ ಗಂಡಸರಲ್ಲ, ಅವರೊಬ್ಬರೇ ಗಂಡಸರು ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ್​ ವಿರುದ್ಧ ಕೈ ತೋರಿಸಿದ್ದರು. ರಾಜಕೀಯ ನಾಯಕರ ಕೆಸರೆರಚಾಟದ ಬೆನ್ನಲ್ಲೇ ದರ್ಶನ್​ಗೌಡನ ತಂದೆ, ಜೆಡಿಎಸ್​ ಮುಖಂಡ ವೆಂಕಟೇಶ್​ ಬಹಿರಂಗ ಹೇಳಿಕೆ ಕೊಟ್ಟಿದ್ದರು.
ನಾನು ತಾಪಂ ಮಾಜಿ ಉಪಾಧ್ಯಕ್ಷನಾಗಿ ರಾಜಕೀಯ ಜೀವನದಲ್ಲಿ ಇದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಅವರ ತಮ್ಮ ಸತೀಶ್​ಗೌಡ ಇಬ್ಬರೂ ಪರಿಚಯಸ್ಥರು ಹಾಗೂ ಸಂಬಂಧಿಗಳು. ಆದರೆ ಮಗನ ಕೆಲಸದ ವಿಚಾರದಲ್ಲಿ ಯಾರೊಂದಿಗೂ ಹಣದ ವ್ಯವಹಾರ ಮಾಡಿಲ್ಲ ಎಂದಿದ್ದ ವೆಂಕಟೇಶ್​, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪರಿಚಯ ಕೂಡ ಇದೆ. ಈ ಹಿಂದೆ ಎಸ್​.ಎಂ.ಕೃಷ್ಣ ಅವರು ಕಾಂಗ್ರೆಸ್​ನಲ್ಲಿದ್ದ ಅವಧಿಯಲ್ಲಿ ನನ್ನ ಮನೆಯಲ್ಲೇ ಡಿ.ಕೆ.ಶಿವಕುಮಾರ್​ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಇಂದು ನನ್ನ ಗುರುತು ಹಿಡಿಯುವುದಿಲ್ಲ. ನಾನು ಬಹಳ ಹಿಂದಿನಿಂದಲೂ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಎಲ್ಲ ನಾಯಕರ ಪರಿಚಯ ಇದೆ. ನಮ್ಮ ಮನೆಗೆ ಡಿ.ಕೆ. ಶಿವಕುಮಾರ್​ ಮತ್ತು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸೇರಿ ಹಲವು ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ. 1994ರಿಂದಲೂ ರಾಜಕೀಯದಲ್ಲಿ ಇದ್ದೇನೆ, 1994ರಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೆ. ನಂತರ ಕಾಂಗ್ರೆಸ್​ಗೆ ಸೇರ್ಪಡೆಯಾದೆ. 2004ರಲ್ಲಿ ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿದೆ. ಪ್ರಸ್ತುತ ಜೆಡಿಎಸ್​ನಲ್ಲಿದ್ದೇನೆ ಎಂದು ವೆಂಕಟೇಶ್​ ಹೇಳಿದ್ದರು.
ನಾಯಕರು ತಮ್ಮ ರಾಜಕೀಯ ಹಗೆತನಕ್ಕೆ ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ನನ್ನ ಮಗ ದರ್ಶನ್​ಗೌಡ ಪಿಎಸ್​ಐ ಪರೀಕ್ಷೆ ಬರೆದು 5ನೇ ರ್ಯಾಂಕ್​ ಪಡೆದಿರುವುದು ನಿಜ. ನಮ್ಮ ಮಗ ಸಿಐಡಿ ವಿಚಾರಣೆ ಎದುರಿಸಿದ್ದಾನೆ. ಆತನ ಒಎಂಆರ್​ ಶೀಟ್​, ಹಾಲ್​ ಟಿಕೆಟ್​ ಹಾಜರುಪಡಿಸಿದ್ದಾನೆ. ತನಿಖೆ ನಡೆಯುತ್ತಿದೆ. ತಪ್ಪಿದ್ದರೆ ಶಿಕ್ಷೆಯಾಗಲಿ ಎಂದಿದ್ದರು.
ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಸಕಲೇಶಪುರದಲ್ಲಿ ಪೈಪ್​ಲೈನ್​ ಕೊರೆದು ಪೆಟ್ರೋಲ್​ ಕದಿಯಲು ಯತ್ನ: ಪೊಲೀಸರು ಬರುತ್ತಿದ್ದಂತೆ ಖದೀಮರು ಪರಾರಿ

ಭರತನಾಟ್ಯ ಮೊದಲ ಪ್ರದರ್ಶನದಲ್ಲೇ ಮೋಡಿ ಮಾಡಿದ ಅಂಬಾನಿ ಭಾವಿ ಸೊಸೆ! ಅತ್ತೆಯಂತೆ ಸೊಸೆಯೂ ಉತ್ತಮ ಕಲಾವಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
