ಬೆಂಗಳೂರು:ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಆಯ್ಕೆ ಪಟ್ಟಿಯನ್ನೇ ಸರ್ಕಾರ ರದ್ದು ಮಾಡಿದ್ದು, ಮರು ಪರೀಕ್ಷೆಗೆ ಆದೇಶಿಸಿದೆ. ಇದರಿಂದ ನೊಂದ ಪಿಎಸ್ಐ ಅಭ್ಯರ್ಥಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಪಿಎಸ್​ಐ ಪರೀಕ್ಷೆಯಲ್ಲಿ ನ್ಯಾಯವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರಿಗೆ ಅನ್ಯಾಯ ಆಗಬಾರದು. ಅನ್ಯಾಯ ಮಾಡಿದವರಿಗೆ ಜೈಲಿಗೆ ಹಾಕಬೇಕು. ಆದರೆ, ಅರ್ಹರಿಗೆ ಮೋಸ ಆಗಬಾರದು. 2021ರಲ್ಲಿ ನಡೆದ ಎಫ್​ಡಿಎ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಆ ಬಗ್ಗೆಯೂ ತನಿಖೆ ಮಾಡಿ ನ್ಯಾಯ ಕೊಡಿಸಬೇಕು. ಪ್ರಧಾನಿ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ. ನಮಗೆ ನ್ಯಾಯ ಕೊಡಿಸುತ್ತಾರೆಂಬ ನಂಬಿಕೆ ಇದೆ ಎಂದು ರಕ್ತದಲ್ಲಿ 2 ಪುಟ ಪತ್ರ ಬರೆದಿದ್ದಾರೆ.
ಒಂದು ವೇಳೆ ನಮಗೆ ನ್ಯಾಯ ಕೊಡಿಸದೇ ಹೋದಲ್ಲಿ ನಾವು ಮುಂದೆ ನಕ್ಸಲರ ಜೊತೆ ಕೈಜೋಡಿಸುತ್ತೇವೆ ಎಂದೂ ಪತ್ರದಲ್ಲಿ ಎಚ್ಚರಿಸಿದ್ದಾರೆ. ನಾವು 8 ಜನ ಇದ್ದೀವಿ. ನಮಗೆಲ್ಲ ಅನ್ಯಾಯ ಆಗಿದೆ. ನಾವು ಬಡತನದಲ್ಲಿ ಬೆಳೆದವರು. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಪಾಸ್​ ಆಗಿದ್ದೇವೆ. ಈ ಅವ್ಯವಸ್ಥೆಯಿಂದ ತುಂಬಾ ನೊಂದಿದ್ದೇವೆ, ಇನ್ನೆಂದೂ ಸರ್ಕಾರಿ ಕೆಲಸಕ್ಕಾಗಿ ಪರೀಕ್ಷೆ ಬರೆಯಲ್ಲ. ಬರೀ ಮೋಸ… ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪಿಎಸ್​ಐ ಅಕ್ರಮ ದಲ್ಲಾಳಿ ಪೊಲೀಸರು ಕರ್ತವ್ಯಕ್ಕೆ ಗೈರು?

ನೀವಾದ್ರೂ ಒಪ್ಸಿ ಅವಳ ಜತೆ ಮದ್ವೆ ಮಾಡ್ಸಿ ಸಾರ್​… ಪೊಲೀಸರ ಬಳಿ ಗೋಗರೆದ ಆ್ಯಸಿಡ್​ ನಾಗ​! ಇಷ್ಟಲ್ಲಾ ಆದ್ರೂ ನಿಲ್ಲದ​ ಹುಚ್ಚಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eleven =
Remember me
