ಬೆಂಗಳೂರು:ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಇಬ್ಬರು ಕಾನ್​ಸ್ಟೇಬಲ್ ಸೇರಿ ಮತ್ತೆ ನಾಲ್ವರು ಸಿಐಡಿ ಅಧಿಕಾರಿಗಳ ಬಲೆಗೆ ಸಿಲುಕಿದ್ದಾರೆ. ಕಲಾಸಿಪಾಳ್ಯ ಠಾಣೆ ಕಾನ್​ಸ್ಟೇಬಲ್ ಎಚ್.ಬಿ. ಹರೀಶ್, ನೆಲಮಂಗಲ ಠಾಣೆ ಕಾನ್​ಸ್ಟೇಬಲ್ ಎಚ್.ಜಿ. ಮೋಹನ್ ಕುಮಾರ್ ಮತ್ತು ರಾಮನಗರದ ದರ್ಶನ್ ಗೌಡ ಮತ್ತು ಎನ್.ದಿಲೀಪ್ ಕುಮಾರ್ ಬಂಧಿತರು. ಮತ್ತಷ್ಟು ಅಭ್ಯರ್ಥಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುವುದಾಗಿ ಸಿಐಡಿ ಸುಳಿವು ನೀಡಿದೆ.
ಎಸ್​ಐ ನೇಮಕಾತಿ ಅಕ್ರಮ ಸಂಬಂಧ ಕಲಬುರಗಿ ನಗರ ಚೌಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ಕೈಗೊಂಡಿತ್ತು. ಇದಾದ ಮೇಲೆ ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳಲ್ಲಿ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಿಗೆ ನೋಟಿಸ್ ಕೊಟ್ಟು ಕಾರ್ಬನ್ ಒಎಂಆರ್ ಶೀಟ್ ಮತ್ತು ಪ್ರವೇಶ ಪತ್ರದೊಂದಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು. 172 ಅಭ್ಯರ್ಥಿಗಳ ಪೈಕಿ ನಾಲ್ವರು ಹೊರತುಪಡಿಸಿ ಉಳಿದವರು ಹಾಲ್ ಟಿಕೆಟ್ ಮತ್ತು ಕಾರ್ಬನ್ ಶೀಟ್ ಹಾಜರುಪಡಿಸಿ ವಿಚಾರಣೆ ಎದುರಿಸಿದ್ದರು. ಪಂಚನಾಮೆ ಮಾಡಿ ಅಸಲಿ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್​ಗಳನ್ನು ಎಫ್​ಎಸ್​ಎಲ್​ಗೆ ರವಾನಿಸಿ ತಾಳೆ ಮಾಡಿ ತಿದ್ದಿರುವ ಕುರಿತು ವರದಿ ನೀಡುವಂತೆ ಮನವಿ ಮಾಡಲಾಗಿತ್ತು. ಈ ವೇಳೆ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್​ಗೂ ವ್ಯತ್ಯಾಸ ಇರುವುದಾಗಿ ತಿಳಿದುಬಂದಿತ್ತು. ಇದರ ಆಧಾರದ ಮೇಲೆ ಆರೋಪಿಗಳಿಗೆ ನೋಟಿಸ್ ಕೊಟ್ಟು ಭಾನುವಾರ ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ವೇಳೆ ಸಮಂಜಸ ಉತ್ತರ ನೀಡದ ಕಾರಣ ನಾಲ್ವರನ್ನು ಬಂಧಿಸಲಾಗಿದೆ.
ಯಲಹಂಕ ನ್ಯೂಟೌನ್, ಕೋರಮಂಗಲ ಮತ್ತು ರಾಮಮೂರ್ತಿನಗರ ಠಾಣೆಯಲ್ಲಿ ಪ್ರತ್ಯೇಕ ಎಫ್​ಐಆರ್ ದಾಖಲಾಗಿವೆ. ಆಯಾ ಠಾಣಾ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಮತ್ತೊಂದೆಡೆ ಡಿಜಿ-ಐಜಿಪಿ ಪ್ರವೀಣ್ ಸೂದ್, ಮೂರು ಪ್ರಕರಣಗಳನ್ನು ಸಿಐಡಿಗೆ ವಹಿಸಿ ಆದೇಶಿಸಿದ್ದಾರೆ.
ಕಾಂಗ್ರೆಸ್​ನವರಿಗೆ ಒನ್(ನಾಚಿಕೆ), ಟು(ಮಾನ), ತ್ರಿ(ಮರ್ಯಾದೆ) ಇಲ್ಲ. 1, 2, 3 ಇದ್ದರೆ ಈ ರೀತಿ ಆರೋಪ ಮಾಡುತ್ತಿರಲಿಲ್ಲ. ಕಲ್ಪನೆ ಮಾಡಿಕೊಂಡು, ನಿರಾಧಾರವಾಗಿ ಆಪಾದನೆ ಮಾಡುತ್ತಿದ್ದಾರೆ. ಪಿಎಸ್​ಐ ಅಭ್ಯರ್ಥಿ ದರ್ಶನ್​ಗೌಡ ಬಂಧನ ಆಗದಿದ್ದಾಗ ಬಿಟ್ಬಿಟ್ರು ಅಂದರು. ಬಂಧನ ಆದಾಗ ಮತ್ತೊಂದು ಸಂಬಂಧ ಹೇಳುತ್ತಾರೆ. ಬಂಧನದಿಂದ ಆಚೆ ಬಿಟ್ಟಾಗ ಇನ್ನೊಂದು ಹೇಳುತ್ತಾರೆ. ವಿಶ್ವದಲ್ಲಿರುವ ಒಕ್ಕಲಿಗರೆಲ್ಲ ನನ್ನ ಸಂಬಂಧಿಕರೇ. ನಾನು ಸಂಬಂಧ ಇಲ್ಲ ಅಂತ ಹೇಳಲು ಆಗಲ್ಲ.
|ಡಾ.ಸಿ.ಎನ್. ಅಶ್ವತ್ಥನಾರಾಯಣಸಚಿವ
ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರ ಸಹೋದರ ಜತೆ ಡೀಲ್ ಕುದುರಿಸಿದ್ದ ಅಭ್ಯರ್ಥಿ ದರ್ಶನಗೌಡ ಬಂಧನವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಲು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಸಿಐಡಿಯವರು ನಿಷ್ಪಕ್ಷಪಾತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ತಿದ್ದಿರುವ ಕೈ ಯಾವುದು?:ವಾಮಮಾರ್ಗದಲ್ಲಿ ಇಲಾಖೆಗೆ ಸೇರುವ ಕಾರಣ ಏಜೆಂಟ್​ಗಳೊಂದಿಗೆ ಒಳ ಸಂಚು ರೂಪಿಸಿ ಲಿಖಿತ ಪರೀಕ್ಷೆಯಲ್ಲಿ ಒಎಂಆರ್ ಶೀಟ್​ಗಳಲ್ಲಿ ಗೊತ್ತಿರುವ ಉತ್ತರ ಮಾತ್ರ ತುಂಬಿ ಉಳಿದ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬಂದಿದ್ದರು. ಏಜೆಂಟ್​ಗಳು ಒಎಂಆರ್ ಶೀಟ್ ತಿದ್ದುವ ಮೂಲಕ ಸರಿ ಉತ್ತರ ಬರೆಸಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಒಎಂಆರ್ ಶೀಟ್ ತಿದ್ದಿರುವ ಆ ಕಾಣದ ಕೈಗಳು ಯಾವುದೆಂಬುದು ಸಾರ್ವಜನಿಕರ ಪ್ರಶ್ನೆ.
ಲಂಚ ಕೊಟ್ಟು ರ್ಯಾಂಕ್:ಎಚ್.ಬಿ.ಹರೀಶ್, ತಾತ್ಕಾಲಿಕ ಆಯ್ಕೆಪಟ್ಟಿ ಯಲ್ಲಿ ಇನ್​ಸರ್ವಿಸ್ ವಿಭಾಗದಲ್ಲಿ 2ನೇ ರ್ಯಾಂಕ್ ಪಡೆದಿದ್ದ. ಪತ್ರಿಕೆ-1ರಲ್ಲಿ 50 ಅಂಕಗಳಲ್ಲಿ 27 ಮತ್ತು ಪತ್ರಿಕೆ-2ರಲ್ಲಿ 150ಕ್ಕೆ 122 ಅಂಕ ಪಡೆದಿದ್ದರು. ಮೋಹನ್​ಕುಮಾರ್, ಪತ್ರಿಕೆ-1ರಲ್ಲಿ 24 ಮತ್ತು ಪತ್ರಿಕೆ-2ರಲ್ಲಿ 122 ಅಂಕಪಡೆದು 4ನೇ ರ್ಯಾಂಕ್ ಪಡೆದಿದ್ದ. ವಿ. ದರ್ಶನ್​ಗೌಡ, 5ನೇ ರ್ಯಾಂಕ್ ಪಡೆದುಕೊಂಡಿದ್ದ. ಪತ್ರಿಕೆ-1ರಲ್ಲಿ 4 ಅಂಕ ಪಡೆದರೇ ಪತ್ರಿಕೆ-2ರಲ್ಲಿ 141 ಅಂಕ ಪಡೆದು ಅಚ್ಚರಿ ಮೂಡಿಸಿದ್ದರು. ಇನ್ನೂ 13ನೇ ರ್ಯಾಂಕ್ ಪಡೆದಿರುವ ದಿಲೀಪ್​ಕುಮಾರ್​ಗೆ ಪತ್ರಿಕೆ-1ರಲ್ಲಿ 27.5 ಅಂಕ ಮತ್ತು ಪತ್ರಿಕೆ-2ರಲ್ಲಿ 129.75 ಅಂಕಗಳು ಬಂದಿವೆ.
ಇನ್​ಸರ್ವಿಸ್​ಗಳೇ ಡೀಲ್​ನಲ್ಲಿ ಫಸ್ಟ್:ಕಾನ್​ಸ್ಟೇಬಲ್​ಗಳೇ ಹೆಚ್ಚಾಗಿ ಡೀಲ್ ಕುದುರಿಸಿ ಭುಜದ ಮೇಲೆ ಡಬಲ್ ಸ್ಟಾರ್ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕಲಾಸಿಪಾಳ್ಯ ಪೇದೆ ಹರೀಶ್​ಕುಮಾರ್, ಇಬ್ಬರು ಏಜೆಂಟ್​ಗಳನ್ನು ಸಂಪರ್ಕ ಮಾಡಿ 50 ಲಕ್ಷ ರೂ.ಗೆ ಡೀಲ್ ಮುಗಿಸಿ 30 ಲಕ್ಷ ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಏಜೆಂಟ್​ಗಳು ಯಾರೆಂಬುದರ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.
ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 6 =
Remember me
