ಬೆಂಗಳೂರು:ಪಿಎಸ್​ಐ ನೇಮಕ ಹಗರಣ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿತು. ಪ್ರತಿಪಕ್ಷ ಕಾಂಗ್ರೆಸ್ ಹಗರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದರೆ, ಆಡಳಿತರೂಢ ಬಿಜೆಪಿ ಸಿಐಡಿ ತನಿಖೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿತು.
ಕಾಂಗ್ರೆಸ್ ಪಿಎಸ್​ಐ ಹಗರಣ, 40 ಪರ್ಸೆಂಟ್ ಹಗರಣಗಳ ಪ್ಲೆಕಾರ್ಡ್ ಪ್ರದರ್ಶಿಸಿದರೆ, ಬಿಜೆಪಿ ಸದಸ್ಯರು ಕಾಂಗ್ರೆಸ್ ಅವಧಿಯ ಶಿಕ್ಷಕರ ಹಗರಣ ಸೇರಿ ಬೇರೆ ಬೇರೆ ಹಗರಣಗಳ ಪ್ಲೆಕಾರ್ಡ್ ಪ್ರದರ್ಶಿಸಿ ಪರಸ್ಪರ ಹೋ ಎಂದು ಕೂಗಿದರು. ಇದನ್ನು ಕಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಾಳ್ಮೆ ಕಳೆದುಕೊಂಡು ಹುಚ್ಚಾಸ್ಪತ್ರೆ ನಡೀಲಿ ಬಿಡಿ ಎಂದು ಬಿಟ್ಟಿದ್ದೇನೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.
ನಿಷ್ಪಕ್ಷಪಾತ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆ:ಸರ್ಕಾರದ ಪರವಾಗಿ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪಿಎಸ್​ಐ ನೇಮಕ ಹಗರಣ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಯಾವುದೇ ರಾಜಕೀಯ ಪಕ್ಷದವರಿರಲಿ ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ ಎಂದು ಸ್ಪಷ್ಟಪಡಿಸಿದರು. ಹಗರಣ ನಡೆದಿರುವುದು ದೃಢಪಟ್ಟ ಎರಡೇ ಗಂಟೆಯಲ್ಲಿ ನಮ್ಮ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಇದುವರೆಗೆ 26 ಪೊಲೀಸ್ ಸೇರಿದಂತೆ 92 ಮಂದಿಯನ್ನು ಬಂಧಿಸಲಾಗಿದೆ. ಬ್ಲ್ಯುಟೂತ್ ಕಿಂಗ್ ಪಿನ್ ಆರ್.ಡಿ.ಪಾಟೀಲ್​ರನ್ನು ಬಂಧಿಸಿದ್ದೇವೆ. ಉಚ್ಛ ನ್ಯಾಯಾಲಯವೂ ನಮ್ಮ ತನಿಖೆಯನ್ನು ಹೊಗಳಿದೆ. ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ರಾಜಕಾರಣ ಮಾಡುವುದನ್ನು ಬಿಟ್ಟು ತನಿಖೆಗೆ ಸಹಕರಿಸಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಕರ ಆಯ್ಕೆಯಲ್ಲಿ ಭ್ರಷ್ಟಾಚಾರವಾಗಿದೆ. 16 ಮಂದಿಯನ್ನು ಬಂಧಿಸಿದ್ದೇವೆ. 2016-17ರಲ್ಲಿ ನಡೆದ ಪಿಎಸ್​ಐ ನೇಮಕದಲ್ಲೂ ಹಗರಣ ನಡೆದಿತ್ತು. ಆಗಿನ ಸರ್ಕಾರ ಎಡಿಜಿಪಿ ಆರೆಸ್ಟ್ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಹಗರಣದ ವಾಸನೆ ಬರುತ್ತಲೇ ಕ್ರಮ ಕೈಗೊಂಡಿದೆ. ಎಡಿಜಿಪಿ ಮಟ್ಟದ ಅಧಿಕಾರಿ ಬಂಧಿಸಿದೆ ಎಂದು ಸಮರ್ಥಿಸಿಕೊಂಡರು.
ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ:ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿರುವುದರಿಂದ ಸಿಐಡಿಯಲ್ಲಿ ಅವರಿಗಿಂತ ಹಿರಿಯ ದರ್ಜೆಯ ಅಧಿಕಾರಿಗಳು ಇರುವುದಿಲ್ಲ. ಆದ್ದರಿಂದ ಈ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರಬೇಕಾದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಢೇಸಗೂರು ಪಿಎಸ್​ಐ ನೇಮಕ ಸಂಬಂಧ ಪರಸಪ್ಪ ಎಂಬವರಿಂದ 15 ಲಕ್ಷ ರೂ.ಪಡೆದು ಸರ್ಕಾರಕ್ಕೆ ನೀಡಿರುವುದಾಗಿ ಹೇಳಿಕೆ ನೀಡಿರುವ ಆಡಿಯೋ ವೈರಲ್ ಆಗಿದೆ. ಈ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಅವರ ಪರೀಕ್ಷಾ ಕೇಂದ್ರಕ್ಕೆ ಶಿಫಾರಸು ಮಾಡಿದವರು ಯಾರು? ಎನ್ನುವುದೂ ತನಿಖೆಯಿಂದ ಹೊರಬರಬೇಕು ಎಂದು ಆಗ್ರಹಿಸಿದರು. ಈ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಕಲಬುರಗಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಇದೀಗ ಬಿಜೆಪಿ ಶಾಸಕ ಬಸವರಾಜ ದಡೆಸಗೂರು ಆಡಿಯೋ ವೈರಲ್ ಆಗಿದೆ. ನೇಮಕಾತಿಯಲ್ಲಿ ಅಕ್ರಮ ನಡೆದ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡುವ ಪೊಲೀಸರು, ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಈ ಅಕ್ರಮದಲ್ಲಿ ಶಾಮೀಲಾಗಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ ಎಂದು ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್​ಗೆ ಯಾಕೆ ನೋಟಿಸ್ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಬಂಧನಕ್ಕೆ ಒಳಗಾಗಿರುವ ಆರೋಪಿತರನ್ನು ಹೊರತುಪಡಿಸಿ ಅನೇಕ ಪ್ರತಿಭಾನ್ವಿತರು ಈ ಪರೀಕ್ಷೆ ಬರೆದು ತೇರ್ಗಡೆ ಆಗಿದ್ದಾರೆ. ಅವರಿಗೆ ಏಕೆ ಅನ್ಯಾಯ ಆಗಬೇಕು?
|ಎಚ್.ಡಿ. ಕುಮಾರಸ್ವಾಮಿಮಾಜಿ ಸಿಎಂ
ಕಾಂಗ್ರೆಸ್ ಅನೇಕ ಹಗರಣ ಮುಚ್ಚಿ ಹಾಕಿದೆ. ಕಾಂಗ್ರೆಸ್ ತಲೆತಗ್ಗಿಸುವ ಕೆಲಸ ಮಾಡಿತ್ತು. ನಮ್ಮ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ಎಡಿಜಿಪಿಯನ್ನೇ ಬಂಧಿಸಿದ ಖ್ಯಾತಿ ನಮ್ಮ ಸರ್ಕಾರದ್ದು.
|ಡಾ.ಸುಧಾಕರ್ಸಚಿವ
ನಾವು ಹಗರಣ ಮುಚ್ಚಿ ಹಾಕಲು ಬಿಟ್ಟಿಲ್ಲ. ಪಾರದರ್ಶಕ ತನಿಖೆ ನಡೆಯುತ್ತಿದೆ. ಯಾವುದೇ ಪಕ್ಷದವರಿರಲಿ ತನಿಖೆ ನಡೆಸಿ ಅವರನ್ನು ಶಿಕ್ಷೆಗೆ ಒಳಪಡಿಸುತ್ತೇವೆ. ಬೇರೆ ಸರ್ಕಾರ ಇದ್ದಿದ್ದರೆ ಹಗರಣ ಮುಚ್ಚಿ ಹಾಕುತ್ತಿತ್ತು.
|ಆರ್.ಅಶೋಕ್ಕಂದಾಯ ಸಚಿವ
ಕಾಂಗ್ರೆಸ್​ನವರು ಜೈಲು, ಬೇಲ್ ಮೇಲಿದ್ದಾರೆ. ಕಾಂಗ್ರೆಸ್ ಯಾವುದೇ ಹಗರಣದ ನಿಷ್ಪಕ್ಷಪಾತ ತನಿಖೆ ಮಾಡಿದ್ದಿಲ್ಲ. ನಮ್ಮ ಸರ್ಕಾರ ಮಾಡಿದೆ. ಎಡಿಜಿಪಿ ಜೈಲಿಗೆ ಹಾಕಿಸಿದೆ. ಕಾಂಗ್ರೆಸ್ ದೊಂಬರಾಟ ಬಿಟ್ಟು ತನಿಖೆಗೆ ಸಹಕರಿಸಬೇಕು.
|ಗೋವಿಂದ ಕಾರಜೋಳಜಲಸಂಪನ್ಮೂಲ ಸಚಿವ
ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಮಾತನಾಡುವ ವೇಳೆ ದವಸ ಧಾನ್ಯಗಳ ಗಂಟು ಪ್ರದರ್ಶಿಸಲಾಯಿತು! ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳನ್ನು ಬರೆದು ಅನ್ಯಾಯಕ್ಕೊಳಗಾಗಿರುವ ಅಭ್ಯರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಆ ಅಭ್ಯರ್ಥಿಗಳು ನಮಗೆ ಲಂಚ ನೀಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ತಂದೆ-ತಾಯಿ ಬೆಳೆದಿರುವ ಹೆಸರು, ಉದ್ದು, ಕಡಲೆ, ಗೋಧಿ ಗಂಟು ಕೊಟ್ಟು ಇದನ್ನು ಸರ್ಕಾರಕ್ಕೆ ನೀಡುವಂತೆ ಕೋರಿದ್ದಾರೆ ಎಂದು ಸಿದ್ದರಾಮಯ್ಯ ಗಂಟು ತೋರಿಸಿ ಸರ್ಕಾರವನ್ನು ಕೆಣಕಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ನೀವೊಬ್ಬ ಗ್ರೇಟೆಸ್ಟ್ ಈವೆಂಟ್ ಮ್ಯಾನೇಜರ್ ಎಂದು ಟಾಂಗ್ ಕೊಟ್ಟರು. ಆಗ ಸಿದ್ದರಾಮಯ್ಯ, ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯನೇ ಟಾರ್ಗೆಟ್. ನೀವು ಟಾರ್ಗೆಟ್ ಮಾಡಿದಷ್ಟೂ ನನಗೆ ಲಾಭ ಎಂದರು. ಯಾರದ್ದೋ ತೀಟೆ, ತೆವಲಿಗೆ ಸದನದಲ್ಲಿ ಅವಕಾಶ ಇಲ್ಲ ಎಂದು ಜೆ.ಸಿ.ಮಾಧುಸ್ವಾಮಿ ನೀಡಿದ ಹೇಳಿಕೆ ವಿರುದ್ಧ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
