ಬೆಂಗಳೂರು: ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ಅಕ್ರಮ ನೇಮಕಾತಿ ಹಗರಣದಲ್ಲಿ ಈವರೆಗೆ ಪೊಲೀಸರು ಸೇರಿ 49 ಆರೋಪಿಗಳ ಬಂಧನವಾಗಿದೆ. ಸಿಐಡಿ ತನಿಖೆ ಇನ್ನಷ್ಟು ಆಳಕ್ಕೆ ಹೊಕ್ಕರೆ ನೇಮಕಾತಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೊರಳಿಗೆ ಅಕ್ರಮ ನೇಮಕಾತಿ ಉರುಳು ಸುತ್ತಿಕೊಳ್ಳುವುದು ನಿಶ್ಚಯವಾಗಿದೆ. ಏತನ್ಮಧ್ಯೆ ಸಿಐಡಿ ನೋಟಿಸ್​ ನಂತರವೂ ಓಎಂಆರ್​ ಶೀಟ್​ನ ಕಾರ್ಬನ್​ ಪ್ರತಿ ಕೊಡದ 92 ಅಭ್ಯರ್ಥಿಗಳಿಗೂ ಬಂಧನ ಭೀತಿ ಶುರುವಾಗಿದೆ.
ಕಾರ್ಬನ್​ ಪ್ರತಿ ಕೊಡದೆ ಕಳ್ಳಾಟ:ಪಿಎಸ್​ಐ ಅಕ್ರಮ ಬೆಳಕಿಗೆ ಬಂದ ಸಂದರ್ಭದಲ್ಲಿ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿರುವ 545 ಅಭ್ಯರ್ಥಿಗಳಿಗೂ ಸಿಐಡಿ ನೋಟಿಸ್​ ಕೊಟ್ಟು ವಿಚಾರಣೆಗೆ ಕರೆದಿತ್ತು. ವಿಚಾರಣೆಗೆ ಹಾಜರಾಗುವ ವೇಳೆ ಓಎಂಆರ್​ ಶೀಟ್​ನ ಕಾರ್ಬನ್​ ಪ್ರತಿ ನೀಡುವಂತೆ ಸೂಚಿಸಲಾಗಿತ್ತು. 545 ಅಭ್ಯರ್ಥಿಗಳ ಪೈಕಿ 453 ಮಂದಿ ಸಿಐಡಿ ನೋಟಿಸ್​ಗೆ ಸ್ಪಂದಿಸಿದ್ದಾರೆ. ಉಳಿದ 92 ಮಂದಿಗೆ ಓಎಂಆರ್​ ಶೀಟ್​ನ ಕಾರ್ಬನ್​ ಪ್ರತಿ ಇನ್ನೂ ಸಿಐಡಿಗೆ ಕೊಟ್ಟಿಲ್ಲ. ಕಾರ್ಬನ್​ ಪ್ರತಿ ನೀಡದ ಅಭ್ಯರ್ಥಿಗಳಿಗೆ ಸೋಮವಾರದವರೆಗೂ ಗಡುವು ನೀಡಿ, ನಂತರವೂ ಓಎಂಆರ್​ ಶೀಟ್​ನ ಕಾರ್ಬನ್​ ಪ್ರತಿ ಸಲ್ಲಿಸಿದಿದ್ದರೆ ಆರೋಪಿಗಳ ಪಟ್ಟಿಗೆ ಸೇರ್ಪಡೆ ಮಾಡಲು ಸಿಐಡಿ ಚಿಂತನೆ ನಡೆಸಿದೆ. ಹೀಗಾಗಿ ಸಿಐಡಿ ನೋಟಿಸ್​ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ 92 ಮಂದಿಗೆ ಬಂಧನದ ಭೀತಿ ಎದುರಾಗಿದೆ. ಕಾರ್ಬನ್​ ಪ್ರತಿ ಕೊಡದ ಅಭ್ಯರ್ಥಿಗಳ ನಡೆ ಸಿಐಡಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಕ್ರಮದಲ್ಲಿ ಶಾಮೀಲಾಗಿರುವ ಇನ್ನಷ್ಟು ಜನರ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕುತ್ತಿದೆ. ಸಿಐಡಿ ಬೆನ್ನು ಬಿದ್ದಿರುವುದನ್ನು ಅರಿತು ಕೆಲಆರೋಪಿಗಳು ಮೊಬೈಲ್​ ಸ್ವಿಚ್ಡ್​ಆ್​ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.
243 ಅಭ್ಯರ್ಥಿಗಳಿಗೆ ಬಿಗ್​ ರಿಲೀಫ್​ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾದ 243 ಅಭ್ಯರ್ಥಿಗಳು ವಿಚಾರಣೆ ವೇಳೆ ಕೊಟ್ಟಿದ್ದ ಓಎಂಆರ್​ ಶೀಟ್​ನ ಕಾರ್ಬನ್​ ಪ್ರತಿಗಳು ಸರಿಯಾಗಿವೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎ್​ಎಸ್​ಎಲ್​) ವರದಿ ಬಂದಿದೆ. 243 ಅಭ್ಯರ್ಥಿಗಳ ಓಎಂಆರ್​ ಪ್ರತಿಯಲ್ಲಿ ಸ್ಪಷ್ಟವಾಗಿವೆ ಎಂಬ ವರದಿ ಸಿಐಡಿ ಕೈ ಸೇರಿದೆ. ಅದರೆ, ಉಳಿದ ಅಭ್ಯರ್ಥಿಗಳ ಓಎಂಆರ್​ ವರದಿಗಾಗಿ ಸಿಐಡಿ ಅಧಿಕಾರಿಗಳು ಕಾಯುತ್ತಿದ್ದಾರೆ. ಎ್​ಎಸ್​ಎಲ್​ನಿಂದ ವರದಿ ಬಂದ ಬಳಿಕ ಮತ್ತಷ್ಟು ಅಭ್ಯರ್ಥಿಗಳ ಅಕ್ರಮಗಳು ಬಯಲಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
12 ಮಂದಿ ವರ್ಗಾವಣೆಗೆ ಸಿದ್ಧತೆ?ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದ ಬೆನ್ನಲ್ಲೆ ಪೊಲೀಸ್​ ನೇಮಕಾತಿ ವಿಭಾಗದ ಸರ್ಜರಿಗೆ ಸರ್ಕಾರ ಮುಂದಾಗಿದೆ. 12 ಮಂದಿಯನ್ನು ವರ್ಗಾವಣೆ ಮಾಡಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ವರ್ಗಾವಣೆ ಮಾಡದೆ ಉಳಿಸಿಕೊಳ್ಳಲಾಗಿದೆ. ಖಾಲಿ ಇರುವ 12 ಸ್ಥಾನಕ್ಕೆ ಹೊಸಬರು ಬಂದ ಬಳಿಕ ಈ ಐವರನ್ನೂ ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗಿದೆ.
ಡಿ.ಕೆ. ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ
| ಎಚ್​.ಡಿ.ಕುಮಾರಸ್ವಾಮಿ ಮಾಜಿ ಸಿಎಂ
| ಆರಗ ಜ್ಞಾನೇಂದ್ರ ಗೃಹ ಸಚಿವ
ಸಾಲಿ, ಮೇತ್ರೆ ಸೇರಿ 12 ಪೊಲೀಸರು ಸಸ್ಪೆಂಡ್​ಕಲಬುರಗಿ: ಸಬ್​ ಇನ್​ಸ್ಪೆಕ್ಟರ್​ ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರಾಗಿರುವ ರಾಯಚೂರು ಜಿಲ್ಲೆ ಲಿಂಗಸೂಗೂರು ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಜಿಲ್ಲಾ ಪೊಲೀಸ್​ ಫಿಂಗರ್​ ಪ್ರಿಂಟ್​ ವಿಭಾಗದ ಸಿಪಿಐ ಆನಂದ ಮೇತ್ರೆ ಮತ್ತು ಕರ್ತವ್ಯಲೋಪ ಆರೋಪದ ಮೇರೆಗೆ ಇಬ್ಬರು ಪಿಎಸ್​ಐ ಸೇರಿ 10 ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸರ್ಕಾರದ ಸೂಚನೆಯಂತೆ ಗೃಹ ಇಲಾಖೆ ಅಧೀನ ಕಾರ್ಯದರ್ಶಿಗಳು ಡಿವೈಎಸ್​ಪಿ ಸಾಲಿ ಮತ್ತು ಸಿಪಿಐ ಮೇತ್ರೆ ಅವರನ್ನು ಸಸ್ಪೆಂಡ್​ ಮಾಡಿದ್ದು, ಆದೇಶ ಪ್ರತಿಯನ್ನು ಕಲಬುರಗಿ ಎಸ್​ಪಿ ಇಶಾ ಪಂತ್​ ಮತ್ತು ಪೊಲೀಸ್​ ಕಮಿಷನರ್​ ಡಾ.ವೈ.ಎಸ್​. ರವಿಕುಮಾರ್​ ಅವರಿಗೆ ರವಾನಿಸಲಾಗಿತ್ತು.ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಎಂ.ಎಸ್​.ಇರಾನಿ ಕಾಲೇಜು ಕೇಂದ್ರಗಳಲ್ಲಿ ಪಿಎಸ್​ಐ ನೇಮಕ ಪರೀಕ್ಷೆ ವೇಳೆ ಕರ್ತವ್ಯಲೋಪ ಎಸಗಿರುವ ಇಬ್ಬರು ಪಿಎಸ್​ಐ ಸೇರಿ 10 ಸಿಬ್ಬಂದಿಯನ್ನು ಪೊಲೀಸ್​ ಆಯುಕ್ತ ಡಾ.ರವಿಕುಮಾರ್​ ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ. ಪಿಎಸ್​ಐಗಳಾಗಿರುವ ಶ್ರೀಶೈಲಮ್ಮ, ನಜ್ಮಾ ಸುಲ್ತಾನಾ, ಎಎಸ್​ಐಗಳಾದ ಶಶಿಕುಮಾರ, ಲತಾ, ಮುಖ್ಯ ಪೇದೆಗಳಾದ ಪಾರುಬಾಯಿ, ಜೈಭೀಮ, ಶರಣಬಸಪ್ಪ, ದಾಮೋಧರ, ಪೇದೆಗಳಾದ ಪ್ರದಿಪ, ರಾಜಶ್ರೀ ಅವರನ್ನು ಸಸ್ಪೆಂಡ್​ ಮಾಡಲಾಗಿದೆಎಂದು ಡಾ.ರವಿಕುಮಾರ್​ ತಿಳಿಸಿದ್ದಾರೆ.
ಕೆಎಸ್​ಆರ್​ಪಿ ಸಹಾಯಕ ಕಮಾಂಡೆಂಟ್​ ಅರೆಸ್ಟ್​ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮದಲ್ಲಿ ಕಿಂಗ್​ಪಿನ್​ಗಳ ಜತೆಗೆ ಡೀಲ್​ ಕುದುರಿಸಿದ್ದ ಕಲಬುರಗಿಯ ಕೆಎಸ್​ಆರ್​ಪಿ 6ನೇ ಪಡೆಯ ಸಹಾಯಕ ಕಮಾಂಡೆಂಟ್​ (ಡಿವೈಎಸ್​ಪಿ) ವೈಜನಾಥ ರೇವೂರ ಅವರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇವರ ಪತ್ನಿ ಸುನಂದಾ ಕಲಬುರಗಿ ಸೆಂಟ್ರಲ್​ ಜೈಲಿನಲ್ಲಿ ಜೈಲರ್​ ಆಗಿದ್ದಾರೆ. ಶುಕ್ರವಾರ ಸಂಜೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಶನಿವಾರ ಮತ್ತಷ್ಟು ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕಿದ ಬಳಿಕ ಅಕ್ರಮದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬರುತ್ತಲೇ ರೇವೂರ ಅವರನ್ನು ಬಂಧಿಸಿ ಜಿಮ್ಸ್​ನಲ್ಲಿ ವೈದ್ಯಕಿಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಲಯ ನ್ಯಾಯಾಧೀಶರು, ರೇವೂರ ಅವರನ್ನು ಏಳು ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿದರು. ಕಸ್ಟಡಿ ಮುಗಿದ ಬಳಿಕ ಪತ್ನಿ ಜೈಲರ್​ ಆಗಿರುವ ಜೈಲಿಗೆ ರೇವೂರ ಶಿಫ್ಟ್​ ಆಗಬೇಕಾಗುತ್ತದೆ. ಪತ್ನಿಯೇ ಪತಿಯನ್ನು ಸೆಲ್​ನೊಳಗೆ ಹಾಕುವ ಸ್ಥಿತಿ ಬರಲಿದೆ. ರೇವೂರ ಪಿಎಸ್​ಐ ನೇಮಕ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರವೊಂದರ ಉಸ್ತುವಾರಿಯಾಗಿದ್ದರು. ಬ್ಲೂಟೂತ್​ ಬಳಸಿ ಅಕ್ರಮ ಮಾಡುವುದರ ಕಿಂಗ್​ಪಿನ್​ ಆರ್​.ಡಿ. ಪಾಟೀಲ್​ ಜತೆ ನಿಕಟ ಸಂಪರ್ಕದಲ್ಲಿದ್ದರು. ಪರೀಕ್ಷೆ ಕಾಲಕ್ಕೆ ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್​ ಕಾಲೇಜಿನ ಪರೀಕ್ಷಾ ಕೇಂದ್ರದ ಉಸ್ತುವಾರಿ ವಹಿಸಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − five =
Remember me
