ಹಾಸನ:ನಾನು ಈ ಹಿಂದೆ ಆರ್​ಎಸ್​ಎಸ್​ ಬಗ್ಗೆ ತಿಳಿಯದ್ದೇನೆ ಮಾತನಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹಾಸನದಿಂದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ವಲ್​ ರೇವಣ್ಣ ವಿನಂತಿಸಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಜ್ವಲ್​, ನನ್ನ ಗಮನಕ್ಕೆ ಬಾರದೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದೇನೆ. ನಾನೊಬ್ಬ ಯುವಕನಾಗಿ ಹೋರಾಟದ ಮೂಲಕ ಮಾತನಾಡುತ್ತಿದ್ದೆ. ಆದರೆ, ಇವತ್ತು ಅದರ ಅರಿವಾಗಿದೆ ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನರೇಗಾ ಕಾಮಗಾರಿ ವಿರೋಧಿಸಿದ್ದಕ್ಕೆ ಜಾತಿನಿಂದನೆ; ಮನನೊಂದು ಪ್ರಾಣಬಿಟ್ಟ ಮಹಿಳೆ, 8 ಮಂದಿ ವಿರುದ್ಧ ದೂರು ದಾಖಲು
2019ರಲ್ಲಿ ಲೋಕಸಭೆಗೆ ಆಯ್ಕೆಯಾದಾಗ ನನಗೆ 27 ವರ್ಷ ವಯಸ್ಸು, ಐದು ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ​ಐದು ವರ್ಷ ಮಾಡಿದ ಕೆಲಸ, ಪ್ರಗತಿ ಬಗ್ಗೆ ಯಾರೂ ಪ್ರಶ್ನೆ ಮಾಡಲ್ಲ. ಪ್ರಜ್ವಲ್‌ ರೇವಣ್ಣ ಗೆದ್ದರೆ ಬಿಜೆಪಿ ಕಾರ್ಯಕರ್ತರನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾನಾ ಎಂಬ ಪ್ರಶ್ನೆ ನಿಮ್ಮಲ್ಲಿದೆ. ನಮ್ಮ ರಾದಾ ಮೋಹನ್ ದಾಸ್ ಅವರು ಹೇಳಿದ್ದಾರೆ. ನಮ್ಮದು ಕಾಂಟ್ರಾಕ್ಟ್ ಮದುವೆ ಅಲ್ಲ, ಐವತ್ತು, ಅರವತ್ತು ವರ್ಷ ಕೊಂಡೊಯ್ಯುವ ಸಂಬಂಧ ಎಂದು.  ಜೆಡಿಎಸ್-ಬಿಜೆಪಿ ಪ್ರತಿಯೊಬ್ಬರನ್ನೂ ಕಾರ್ಯಕರ್ತರನ್ನು ಗೌರವಿಸಿ, ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದ್ದಾರೆ.
ನಾನು ಐದು ವರ್ಷದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸಿ. ಒಬ್ಬ ಯುವಕ ನಡೆಯುವಾಗ ಎಡವುತ್ತಾನೆ. ಈಗ ಎಡವಿರಬಹುದು. ಸಣ್ಣಪುಟ್ಟ ವಿಚಾರಗಳಲ್ಲಿ ಎಡವಿದ್ರೆ ತಪ್ಪು ತಿದ್ದಿಕೋ ಎಂದು ಸಂದೇಶ ಕೊಟ್ಟರೆ ಕೈ ಮುಗಿದು ನಮಸ್ಕಾರ ಮಾಡುತ್ತೇನೆ. ದಯವಿಟ್ಟು ನನ್ನ ಮೇಲೆ ವಿಶ್ವಾಸವಿಡಿ. ತಪ್ಪುಗಳನ್ನು ಸರಿಮಾಡಿಕೊಂಡು ಯಾರಿಗೂ ಕೆಟ್ಟ ಹೆಸರು ಬಾರದೆ ಕೆಲಸ ಮಾಡುತ್ತೇನೆ. ಒಬ್ಬ ಸಂಸದನಾಗಿ ಅಲ್ಲ, ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 400 ಸೀಟ್ ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಬೇಕು. ಅದರಲ್ಲಿ ನಾನೊಬ್ಬ ಇರಲು ಅವಕಾಶ ಮಾಡಿ ಕೊಡಿ ಎಂದು ಹಾಸನದಿಂದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ವಲ್​ ರೇವಣ್ಣ ವಿನಂತಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
