ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ, ವಾಹನ ಖರೀದಿ, ವಿಮೆ ಸೌಲಭ್ಯ ಹಾಗೂ ವಿದೇಶ ಪ್ರವಾಸ ಸೇರಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ‘ಪೊಲೀಸ್ ಸ್ಯಾಲರಿ ಪ್ಯಾಕೇಜ್(ಪಿಎಸ್​ಪಿ)’ ಜಾರಿಗೆ ತಂದಿದೆ.
ಎಸ್​ಬಿಐ ಒದಗಿಸಿರುವ ‘ಪಿಎಸ್​ಪಿ’ ವಿಶೇಷ ಪ್ಯಾಕೇಜ್​ಗೆ ಪೊಲೀಸ್ ಇಲಾಖೆ ಸಹ ಒಪ್ಪಿಗೆ ನೀಡಿದ್ದು, ಸಹಿ ಹಾಕಿದೆ. ‘ಪಿಎಸ್​ಪಿ’ ಸೌಲಭ್ಯ ಕುರಿತು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಗಮನಕ್ಕೆ ತರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆಯಾ ಘಟಕ ಮತ್ತು ವಿಭಾಗದ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಪ್ಯಾಕೇಜ್ ಸ್ವ-ಇಚ್ಛೆ!:ಸೇವಾ ಹಿರಿತನದ ಮೇರೆಗೆ ‘ಪಿಎಸ್​ಪಿ’ ಸೌಲಭ್ಯ ಸಿಗಲಿದೆ. ಪೇದೆ ಹುದ್ದೆಯಿಂದ ಡಿಐಜಿವರೆಗೂ ಸಿಲ್ವರ್, ಗೋಲ್ಡ್, ಡೈಮಂಡ್ ಹಾಗೂ ಪ್ಲಾಟಿನಂ ಎಂದು ವಿಂಗಡಿಸಿದೆ. ಎಸ್​ಬಿಐ ಖಾತೆಯಿಂದ ವೇತನ ಪಡೆಯುತ್ತಿರುವವರು ‘ಪಿಎಸ್​ಪಿ’ ಯೋಜನೆಗೆ ಜೋಡಿಸಲು ದಾಖಲೆ ಕೊಡಬೇಕು. ಎಸ್​ಬಿಐನಲ್ಲಿ ಖಾತೆ ಹೊಂದಿಲ್ಲದವರು ‘ಪಿಎಸ್​ಪಿ’ ಅಡಿ ಹೊಸ ಖಾತೆ ತೆರೆಯಬೇಕು. ಈ ಸೌಲಭ್ಯ ಒತ್ತಾಯಪೂರ್ವಕವಲ್ಲ, ಅವರ ಇಚ್ಛೆಗೆ ಬಿಟ್ಟದ್ದು. ಈ ಕುರಿತು ಆಯಾ ವಲಯ ಮತ್ತು ವಿಭಾಗದ ಮುಖ್ಯಸ್ಥರು ಅಧೀನದಲ್ಲಿ ಬರುವ ಎಲ್ಲ ಸಿಬ್ಬಂದಿ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.
ಸಿಗುವ ಸೌಲಭ್ಯಗಳೇನು?
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + fourteen =
Remember me
