ಬೆಂಗಳೂರು: ನಗರದ ಕಾಟನ್​ಪೇಟೆ ಸುತ್ತಮುತ್ತಲ ನಿವಾಸಿಗಳು ಭಾನುವಾರ ಬೆಳಗ್ಗೆ ಅಕ್ಷರಶಃ ಬೆಚ್ಚಿಬಿದ್ದಿದ್ದರು. ಕೈಯಲ್ಲಿ ಚೂರಿ ಹಿಡಿದು 2 ಕಿ.ಮೀ. ಓಡಾಡಿದ್ದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕಸಿಕ್ಕವರಿಗೆ ಇರಿದಿದ್ದ. ಈತನ ದಾಳಿಗೆ ಸಿಕ್ಕಿ ಇಬ್ಬರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ. ಕಣ್ಮುಂದೆಯೇ ಕೃತ್ಯ ನಡೆಯುತ್ತಿದ್ದರೂ ಯಾರೂ ರಕ್ಷಣೆಗೆ ಧಾವಿಸುವ ಧೈರ್ಯ ಮಾಡಲಿಲ್ಲ. ಬದಲಾಗಿ ಆತನಿಂದ ತಪ್ಪಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ಓಡಿದರು!
ಭಾನುವಾರ ಬೆಳಗ್ಗೆ 8.15ರ ಸುಮಾರಿಗೆ ಅಂಜನಪ್ಪ ಗಾರ್ಡನ್ ನಿವಾಸಿ ಎಂ.ಗಣೇಶ್ (30) ಎಂಬಾತ ದಾಳಿಯಿಂದ ಸ್ಥಳದಲ್ಲೇ ಭಕ್ಷಿಗಾರ್ಡನ್ ನಿವಾಸಿ ಮಾರಿ (30) ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ರಾಜೇಶ್ (28) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ವೇಲಾಯಿದನ್, ಸುರೇಶ್, ಆನಂದ್ ಮತ್ತು ಪ್ರಕಾಶ್ ಸೇರಿದಂತೆ 6 ಜನರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಗಣೇಶ್​ನನ್ನು ಬಂಧಿಸಿದ ಕಾಟನ್ ಪೇಟೆ ಪೊಲೀಸರು ಭಾನುವಾರ ರಾತ್ರೀಯಿಡಿ ಆರೋಪಿಯ ವರ್ತನೆಗೆ ಸುಸ್ತಾಗಿದ್ದಾರೆ. ಪೊಲೀಸರ ಮೇಲೆಯೇ ಎಗರಿ, ಸೈಕೋ ರೀತಿ ಆರೋಪಿ ವರ್ತಿಸಿದ್ದಾನೆ. ಈತನ ಕಾವಲಿಗಿದ್ದ ಸಿಬ್ಬಂದಿ ಸುಸ್ತೋ-ಸುಸ್ತು!
ಕುಟುಂಬಸ್ಥರು ಆರೋಪಿ ಗಣೇಶ್ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಆದರೆ, ತನಿಖೆ ವೇಳೆ ಮಾನಸಿಕ ಅಸ್ವಸ್ಥ ಎಂಬ ಯಾವ ಲಕ್ಷಣಗಳೂ ಕಂಡು ಬಂದಿಲ್ಲ. ಹೀಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.
ಆಗಿದ್ದೇನು?:ಅಂಜನಪ್ಪ ಗಾರ್ಡನ್ ನಿವಾಸಿ ಆರೋಪಿ ಗಣೇಶ್ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಕಾಟನ್​ಪೇಟೆಯ ಮಂಡಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಭಾನುವಾರ ಬೆಳಗ್ಗೆ 8.15ರಲ್ಲಿ ಮಾಂಸ ಖರೀದಿಸಲು ಹೊರಬಂದಿದ್ದ. ಮಾಂಸದ ಅಂಗಡಿಗೆ ತೆರಳಿದ್ದ ಆರೋಪಿ, ಮಾಂಸದ ಕುರಿತು ಮಾಲೀಕನನ್ನು ವಿಚಾರಿಸಿದ್ದ. ಇದೇ ವೇಳೆ ಅಂಗಡಿಯಲ್ಲಿದ್ದ ಚೂರಿ ತೆಗೆದುಕೊಂಡು ಓಡಿಹೋಗಿದ್ದ. ಮಾಂಸದಂಗಡಿ ಮಾಲೀಕ, ಆರೋಪಿಯನ್ನು ಬೆನ್ನಟ್ಟಿದ್ದರಾದರೂ ಕೈಗೆ ಸಿಕ್ಕಿರಲಿಲ್ಲ. ಅಂಜನಪ್ಪ ಗಾರ್ಡನ್, ಭಕ್ಷಿಗಾರ್ಡನ್ ಮತ್ತು ಛಲವಾದಿಪಾಳ್ಯದ ರಸ್ತೆಗಳಲ್ಲಿ ಓಡಾಡಿದ್ದ ಆರೋಪಿ, ಎದುರಿಗೆ ಬಂದವರಿಗೆ ಚೂರಿಯಿಂದ ತಿವಿದಿದ್ದ. ಈತನ ವರ್ತನೆ ಗಮನಿಸಿದ ಸಾರ್ವಜನಿಕರು ಭಯಗೊಂಡು ದಿಕ್ಕಾಪಾಲಾಗಿ ಓಡಿ ಹೋಗಿದ್ದರು. ಈ ಬಗ್ಗೆ ಕಾಟನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮ್ಮನೆ ಚುಚ್ಚಿದೆ!:ಆರೋಪಿ ಗಣೇಶ್ ವಿವಾಹವಾಗಿದ್ದು, ನಾಲ್ಕೈದು ವರ್ಷಗಳಿಂದ ಪತ್ನಿಯಿಂದ ದೂರ ಇದ್ದಾನೆ. ಮೃತ ಮಾರಿ ಎಂಬಾತ ಕೂಡ ಅಲ್ಲಿನ ನಿವಾಸಿಯೇ ಆಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಮತ್ತೊಬ್ಬ ಮೃತ ರಾಜೇಶ್​ ಬಾಳೆ ಮಂಡಿಯಲ್ಲಿ ಕೆಸಲ ಮಾಡುತ್ತಿದ್ದ. ಆರೋಪಿಯನ್ನು ತನಿಖೆ ಒಳಪಡಿಸಲಾಗಿದ್ದು, ಸುಮ್ಮನೆ ಚುಚ್ಚಿದೆ ಎಂದು ಹೇಳಿಕೆ ನೀಡುತ್ತಿದ್ದಾನೆ.
ಸಾವಿರಾರು ಕಿಲೋ ಮೀಟರ್​ ಅಂತರದಲ್ಲಿ ಯುವಕನ ರುಂಡ-ಮುಂಡ ಪತ್ತೆ!

https://www.vijayavani.net/magadi-love-case-young-woman-death-three-people-arrest/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
