ಹಾಸನ:85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿರುವ ಅಮಾನುಷ ಅತ್ಯಾಚಾರ ಪ್ರಕರಣ ಹಾಸನದಲ್ಲಿ ಬಯಲಿಗೆ ಬಂದಿದೆ. ಈ ಸೈಕೋಪಾತ್ ಕ್ರೂರಿ ಯುವಕನ ಬಂಧನ ಮಾಡಲಾಗಿದೆ.
32 ವರ್ಷದ ಮಿಥುನ್ ಕುಮಾರ್ ಬಂಧಿತ ವ್ಯಕ್ತಿ. ಈತ ಅರಸೀಕೆರೆ ತಾಲ್ಲೂಕಿನ ಯರೆಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ಮಿಥುನ್ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾನೆ .
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಏಪ್ರಿಲ್ 1 ರಂದು ತನ್ನ ಜಮೀನನ ಬಳಿ ತೆರಳಿದ್ದ 85 ವರ್ಷದ ವೃದ್ದೆ. ತಾಯಿ ಮನೆಗೆ ಬಂದಿಲ್ಲ ಎಂದು ಏಪ್ರಿಲ್ 2 ರಂದು ವೃದ್ಧೆ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯರೆಹಳ್ಳಿ ಗ್ರಾಮದ ಜಮೀನಿನಲ್ಲಿ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ವೃದ್ಧೆ ಮೃತದೇಹ ಪತ್ತೆಯಾಗಿದೆ. ಅನುಮಾನಸ್ಪದ ಸಾವು ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಅಮಾನುಷ ಘಟನೆ ಬಯಲಿಗೆ ಬಂದಿದೆ.
ಇದನ್ನೂ ಓದಿ:6 ಹೆಂಡ್ತಿಯರ ಮುದ್ದಿನ ಗಂಡನಿಗೆ ಮೊದಲ ಮಗುನಾ ಯಾವ ಪತ್ನಿಯಿಂದ ಪಡೆಯಬೇಕೆನ್ನುವ ಚಿಂತೆ!
ತನ್ನ ಜಮೀನಿನ ಬಳಿ ತೆರಳಲು ಹೋಗಿ ದಾರಿ ಗೊತ್ತಿಲ್ಲದೆ ಬೇರೆ ಕಡೆ ಹೋಗಿದ್ದಾರೆ. ಅಜ್ಜಿಯನ್ನ ಆಕೆ ಜಮೀನು ಬಳಿ ಬಿಟ್ಟು ಬರುವಂತೆ ಹೇಳಿ ಕಳಿಸಿದ್ದ ಆರೋಪಿ ಮಿಥುನ್ ತಾಯಿ. ಜಮೀನಿನ ಬಳಿ ಬಿಡೋದಾಗಿ ಬೈಕ್ ನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ವೃದ್ಧೆ ಮೇಲೆ ಅತ್ಯಾಚಾರ ಮಾಡಲು ಸೈಕೋಪಾತ್ ಕ್ರೂರಿ ಯತ್ನಿಸಿದ್ದನು. ಈ ವೇಳೆ ಅತ್ಯಾಚಾರ ಯತ್ನಕ್ಕೆ ಪ್ರತಿರೋಧ ತೋರಿದ ಅಜ್ಜಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ.
ಆರೋಪಿ ಮಿಥುನ್​​ ಐದು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ವೃದ್ಧೆ ಮೇಲೆ ಅತ್ಯಾಚಾರ ಯತ್ನ ಮಾಡಿದ್ದನು. ಅದೇ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ಮಾಡಿದ ಕೃತ್ಯ ಒಪ್ಪಿಕೊಂಡಿದ್ದಾನೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೊಲೆ ಅತ್ಯಾಚಾರ ಖಾತ್ರಿಯಾಗುತ್ತಿದ್ದಂತೆ ಅನುಮಾನಾಸ್ಪದ ಸಾವು ಪ್ರಕರಣ ವನ್ನು ಕೊಲೆ ಅತ್ಯಾಚಾರ ಕೇಸ್ ಆಗಿ ಬದಲಾಯಿಸಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸೊಂಟದ ಸುತ್ತ ಹಣ ಕಟ್ಟಿಕೊಂಡು ಸಾಗಾಟ; 7.5ಲಕ್ಷ ರೂ. ವಶಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
