ಬೆಂಗಳೂರು:ಉಪನ್ಯಾಸಕರು, ವಿಧಾನ ಪರಿಷತ್ ಸದಸ್ಯರ ಒತ್ತಾಯದ ಮೇರೆಗೆ ಕೊನೆಗೂ ಪದವಿಪೂರ್ವ ಶಿಕ್ಷಣ ಇಲಾಖೆ ಮೌಲ್ಯಮಾಪನ ವಿಕೇಂದ್ರೀಕರಣಗೊಳಿಸಲು ನಿರ್ಧರಿಸಿದೆ.
ಜೂ.18ಕ್ಕೆ ನಡೆಯಲಿರುವ ಆಂಗ್ಲ ಭಾಷಾ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ತೆರೆದಿದೆ. ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾ ಕೇಂದ್ರಗಳಿಂದ ಹೊರ ಜಿಲ್ಲೆಗಳಿಗೆ ಬಂದು ಮೌಲ್ಯಮಾಪನ ಮಾಡಲು ಮೌಲ್ಯಮಾಪಕರು ಹಿಂಜರಿಯುತ್ತಿದ್ದರು. ಉಪನ್ಯಾಸಕರು, ವಿಧಾನ ಪರಿಷತ್ ಸದಸ್ಯರು ಮೌಲ್ಯಮಾಪನ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲೇ ತೆರೆಯುವಂತೆ ಕೋರಿದ್ದರು. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯಾದ್ಯಂತ 32 ಪರೀಕ್ಷಾ ಶಿಬಿರಗಳನ್ನು ತೆರೆದಿದೆ. ಹೀಗಾಗಿ ಇಷ್ಟು ದಿನ ಅಂಚೆ ಮೂಲಕ ಕಳುಹಿಸಲಾಗುತ್ತಿದ್ದ ಉತ್ತರಪತ್ರಿಕೆಗಳನ್ನು ಖುದ್ದಾಗಿ ಆಯಾ ಜಿಲ್ಲಾ ಉಪನಿರ್ದೇಶಕರಿಗೆ ನೀಡುವಂತೆ ಇಲಾಖೆ ಸೂಚಿಸಿದೆ.
ಇದನ್ನೂ ಓದಿ;‘ಸೇಲ್ಸ್​ಮನ್​’ ಆಗಲಿಲ್ಲ ಶಿಕ್ಷಕ; ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದವನ ಕೈಹಿಡಿದ ವಿದ್ಯಾರ್ಥಿಗಳು
ಪರೀಕ್ಷೆ ಮುಗಿದ ಬಳಿಕ ಉತ್ತರಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವಂತಿಲ್ಲ. ಬದಲಾಗಿ ವಾಹನದ ವ್ಯವಸ್ಥೆ ಮಾಡಿ ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಬೇಕು. ಅವರು ಈಗಾಗಲೇ ಗುರುತಿಸಲ್ಪಟ್ಟ ಮೌಲ್ಯಮಾಪನ ಕೇಂದ್ರಗಳಿಗೆ ಅದನ್ನು ವಾಹನದ ಮೂಲಕ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಬೈಕ್ ಬಳಸಬಾರದು. ಒಂದು ವೇಳೆ ತಡವಾದರೆ ಸಿಸಿಟಿವಿ ಕ್ಯಾಮರಾ ಇರುವ ಕೊಠಡಿಯಲ್ಲಿ ಉತ್ತರಪತ್ರಿಕೆಗಳನ್ನು ಇಡಬೇಕು. ಒಂದು ಬಂಡಲ್​ನಲ್ಲಿ ಗರಿಷ್ಠ 14 ಲಕೋಟೆಗಳನ್ನಷ್ಟೇ ತುಂಬಿಸಬೇಕು. ಈ ಎಲ್ಲ ಪ್ರಕ್ರಿಯೆ ವೇಳೆ ಭದ್ರತೆಗಾಗಿ ಪೊಲೀಸರ ಸಹಾಯ ಪಡೆಯಬಹುದು. ಮೌಲ್ಯಮಾಪನ ಕೇಂದ್ರದ ಶಿಬಿರಾಧಿಕಾರಿಗಳು ಉತ್ತರಪತ್ರಿಕೆ ಬಂಡಲ್​ಗಳನ್ನು ಜಿಲ್ಲಾ ಉಪನಿರ್ದೇಶಕರಿಂದ ಸ್ವೀಕರಿಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು. ಇಲಾಖೆಯ ಸುತ್ತೋಲೆಗಳು ಆದೇಶಗಳು ಮತ್ತು ಸ್ಥಾಯಿ ಸೂಚನೆಗಳಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.
https://www.vijayavani.net/murder-convicts-presence-at-wedding-of-kerala-cms-daughter-kicks-up-row/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
