ಬೆಂಗಳೂರು:ರಾಜ್ಯ ಸರ್ಕಾರ ದ್ವೀತಿಯ ಪಿಯು ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಶಿಕ್ಷಣ ಸುಧಾರಣೆಗಳ ಸಲಹಾಗಾರ ಪ್ರೊ.ಎಂ.ಆರ್​.ದೊರೆಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಪಿಯು ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಸೇರಿದಂತೆ ಯಾವುದೇ ಮುಂದುವರಿದ ಶಿಕ್ಷಣವನ್ನು ಪಡೆಯಲು ಇದು ಮಾನದಂಡವಾಗಿರುತ್ತದೆ. ಇದರಿಂದ ಪಿಯು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಪರೀಕ್ಷೆ ರದ್ದು ಮಾಡಿದರೆ, ವಿದ್ಯಾರ್ಥಿಗಳು ಭಾರೀ ಪ್ರಮಾಣದ ಶೈಕ್ಷಣಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದರ ಜತೆಗೆ ಕರೊನಾ ವೇಳೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ಪರೀಕ್ಷೆ ನಡೆಸಬೇಕೆಂಬ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರ ನಿರ್ಧಾರವನ್ನು ನಾನು ಬೆಂಬಲಿಸುವುದಾಗಿ ದೊರೆಸ್ವಾಮಿ ಹೇಳಿದ್ದಾರೆ.
ಕರೊನಾ ಹತೋಟಿಗೆ ಬಂದ ಮೇಲೆ ಪರೀಕ್ಷೆ ನಡೆಸುವುದು ಸೂಕ್ತ. ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯ. ಪಿಯು ಕಾಲೇಜುಗಳನ್ನೇ ಪರೀಕ್ಷಾ ಕೇಂದ್ರಗಳಾಗಿ ಪರಿವರ್ತಿಸಿ ಪರೀಕ್ಷೆ ನಡೆಸಬೇಕು. ಸಾಧ್ಯವಾದಲ್ಲಿ ಆನ್​ಲೈನ್​ನಲ್ಲಿ ಪರೀಕ್ಷೆ ಮಾಡಿ, ಆನ್​ಲೈನ್​ನಲ್ಲೇ ಮೌಲ್ಯಮಾಪನ ಮಾಡುವುದು ಸೂಕ್ತ ಈ ಎಲ್ಲ ಅಂಶಗಳನ್ನು ಪರೀಕ್ಷೆ ನಡೆಸುವ ವೇಳೆಯಲ್ಲಿ ಪರಿಗಣಿಸುವುದು ಉತ್ತಮ ಎಂದು ದೊರೆಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.
‘ಗುರುಗಳಿಗೆ ಕಿಚ್ಚನ ನಮನ’ ಸಂಕಷ್ಟದಲ್ಲಿರುವ ಶಿಕ್ಷಕರ ಸಹಾಯಕ್ಕೆ ಮುಂದಾದ ಸುದೀಪ್​

ಅಶ್ಲೀಲ ಸಿಡಿ ಕೇಸ್‌ಗೆ ಬಿಗ್ ಟ್ವಿಸ್ಟ್​! ವಿಡಿಯೋದಲ್ಲಿ ಇರುವುದು ನಾನೇ, ಸಹಮತದಿಂದ ಒಟ್ಟಿಗೆ ಇದ್ದೆವೆಂದ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
