ಬೆಂಗಳೂರು:ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ (ಕೆಎಸ್‌ಇಎಬಿ) ಪಿಯು ಪರೀಕ್ಷಾ ಜವಾಬ್ದಾರಿಯನ್ನು ಬೇರ್ಪಡಿಸುವಂತೆ ಪಿಯು ಕಾಲೇಜು ಉಪನ್ಯಾಸಕರ ಸಂಘವು ಒತ್ತಾಯಿಸಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ನಡೆದ ಸಭೆಯಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಪ್ರಮುಖವಾಗಿ ಸಾಕಷ್ಟು ವರ್ಷಗಳಿಂದ ಪಿಯು ಮತ್ತು ಎಸ್ಸೆಸ್ಸೆಲ್ಸಿ ಮಂಡಳಿಯನ್ನು ವಿಲೀನಗೊಳಿಸಬೇಕೆಂಬ ಸರ್ಕಾರದ ಆಶಯ ಕಳೆದ ವರ್ಷ ಈಡೇರಿತ್ತು. ಎನ್‌ಇಪಿ ಯಲ್ಲಿ ದ್ವಿತೀಯ ಪಿಯುಸಿ ವರೆಗೂ ಶಾಲಾ ಶಿಕ್ಷಣವೆಂದು ೋಷಣೆ ಮಾಡಿರುವ ಕಾರಣ ಹಾಗೂ ಇದೇ ವೇಳೆಗೆ ನೀತಿ ಜಾರಿ ಮಾಡಿದ್ದರಿಂದ ಕಾಲ ಕೂಡಿ ಬಂದಿತ್ತು.
ಇದಕ್ಕೆ ವಿರೋಧಿಸಿರುವ ಪಿಯು ಉಪನ್ಯಾಸಕರು, ಪಿಯು ಇಲಾಖೆಯು ತನ್ನದೇ ಗುಣಾತ್ಮಕ ಅಸ್ಮಿತೆಯನ್ನು ಹೊಂದಿದ್ದು, ಅದನ್ನು ಹಾಗೆಯೇ ಮುಂದುವರಿಸಬೇಕಿದೆ. ಮತ್ತೆ ಪಿಯು ಪರೀಕ್ಷಾ ಜವಾಬ್ದಾರಿಯನ್ನು ಪಿಯು ಇಲಾಖೆಗೆ ವಹಿಸಬೇಕು. ಇದರ ಜತೆಗೆ ಈಗಿರುವ ಶಾಲಾ ಶಿಕ್ಷಣ (ಪದವಿ ಪೂರ್ವ) ಎಂಬ ಹೆಸರನ್ನು ಹಿಂದಿನ ಪಿಯು ಇಲಾಖೆ ಎಂದು ಬದಲಾಯಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 8 =
Remember me
